ಪುಟ:ವೇಣೀಸಂಹಾರ ನಾಟಕಂ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೀಯಾಂಕ್ 37 ನಿನ್ನ ತಂದೆಯು ಯುದ್ಧದಲ್ಲಿ ಶಸ್ತ್ರವನ್ನೂ ಬಿಟ್ಟನು. ಶರೀರವನ್ನೂ ಬಿಟ್ಟನು. ಅಶ್ವತ್ಥಾಮ:-ಹಾ ತಂದೆಯೆ! ಶೌರರಾತಿಯ, ತಿಪ್ರಿಯನೆ, ವಾ! ಯು ಧಿಷ್ಠಿರ ಪಕ್ಷಪಾತಿಯೇ, ನನಗೊಸ್ಕರ ವ್ಯರ್ಥವಾಗಿ ಪ್ರಾಣವನ್ನು ಬಿಟ್ಟಿಯಾ (ಎಂದು ಅಳುವನು.) ಸಾರಥಿ:-ಕುಮಾರನೆ, ಹೆಚ್ಚಾಗಿ ಅಳಬೇಡ. ಅಶ್ವತ್ಥಾಮ:...ತಂದೆಯೇ, ಮಗನ ಮೇಲಿನ ಮಮತೆ:ುಂದ ನಾನು ಸ ದುದಿ ದ್ದರೂ ಸತ್ತನೆಂದು ಹೇಳಿದ ಮಾತ್ರದಿಂದಲೇ, ಬಾಣಗಳನ್ನೂ , ಪ್ರಾಣ ವನ್ನೂ ಸಾ ಬಿಟ್ಟೆಯೆಲ್ಲಾ! ಅ೦ಥಾ ನ, ವಾಗಿ ಇರುವದನ್ನು ಕೇಳಿಯೂ ನಾನು ಬದುಕಿರುವೆನಲ್ಲಾ, ಇಂಧಾ ಕರನಾದ ನನ್ನಲ್ಲಿ ನಿನ್ನ ಸ್ನೇಹವು ರ್ಧವಲ್ಲವೆ? (ಎಂದು ಮರ್ಧಿತನಾಗುವನು.) ಸಾರಥಿ:ಕುಮಾರನೇ, ಕುಮಾರನೆ?, ಸೈರಿಸು, ಸೈನು. (ದುಃಖದಿಂದ ಕೃಪಾಚಾರನು ಪ್ರವೇಶಿಸುವನು.) ಕೃಸ:ಕುರುಪತಿಯನ್ನೂ, ಅವನ ತಮ್ಮಂದಿರನ್ನೂ ನುಡಬೆಕು, ಧರ್ಮರಾ ಯನು ಕೆಟ್ಟನು, ವ್ಯರ್ಥವಾಗಿ ಆಯುಧಗಳನ್ನು ಹಿಡಿದಿರುವ ನಾವು ಬದುಕಿ ಏನು ಪ್ರಯೋಜನ? ಆಗ ದ್ದೀಕೇಶಗ್ರಹಣವನ್ನೂ, ಈಗ ದ್ರೋಣಾಚಾರನ ಕೇಶಗ್ರಹಣವನ್ನೂ -ತ್ರದ ಬೊಂಬೆಗಳಂತೆ ನೋಡು . ನಲ್ಲಾ! ವತೃನಾದ ಅಶ್ವತ್ಥಾಮನನ್ನು ಹೇಗೆ ನೋಡಲಿ? ಅಥವಾ ಹಿಮವತ್ಸರ್ವತದಂತೆ ಸ್ಥಿರವಾದ ಮನಸ್ಸುಳ್ಳವನಾಗಿಯೂ, ಲೋಕನ ಹಾರವನ್ನು ಅರಿತವನಾಗಿಯೂ ಇರುವ ಅಶ್ವತ್ಥಾಮನು ಹೆಚ್ಚು ದುಃಖ ನನ್ನು ಸಡಲಾರನೆಂದು ಯೋಚಿಸುತ್ತೇನೆ. ಆದರೆ, ತಂದೆಗೆ ಉಂಟಾಗ ಅನುಚಿತವಾದ ಅವಮಾನವನ್ನು ಕೇಳಿ ಏನು ಮಾಡುವನೋ ತಿಳಿಯದು. ಅಧವಾ ಒಂದು ಕೇಶಗ್ರಹಕ್ಕೆ ಇಷ್ಟು ಭಯಂಕರವಾದ ಪರಿಣಾಮವೂ ಆಗಿದೆ. ಈ ಎರಡನೇ ಕೇಶಗ್ರಹದಲ್ಲಿ ಎಂಡಿತವಾಗಿಯೂ ಪ್ರಜೆಗಳಾರೂ ಉಳಿಯುವುದೇ ಇಲ್ಲ. ವತೃನು ಇಲ್ಲಿಯೇ ಇರುವನು. (ಸಮಾನಕ್ಕೆ ಬಂದು ಮರ್ಧೆ ಹೋಗಿರುವುದನ್ನು ನೋಡಿ ಗಾಬರಿಯಿಂದ) ನತೃನೆ, ಸೈರಿಸು, ಸೈರಿಸು.