ಪುಟ:ವೇಣೀಸಂಹಾರ ನಾಟಕಂ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

S 1 ( ತೃತೀಯಾಳಿಕ ಅಂಕುರಿಸಿ, ನೀಚ ಶಕುನಿಯ ಪ್ರೋತ್ಸಾಹದಿಂದ ಬೆಳದು, ಪ್ರಬಲವಾದ ದ್ವತವೆಂಬ ವಿಷವೃಕ್ಷದಲ್ಲಿ ಹುಟ್ಟಿದ ದ್ಸದಿಯ ಕೇಶಗ್ರಹಣವೆಂಬ ಹೂವಿಗೆ ಇದು ಫಲ. [ಇನ್ನೊಂದು ಕಡೆ ನೋಡಿ] ಇಲ್ಲಿ ಮುರಿದು ಹೊದ ಧ್ವಜದ ರಥ ಕಾಣುತ್ತದೆ. ಆದ್ದರಿಂದ ಮಹಾರಾಜ ದುಕ್ಕೊ ಧನನ ವಿಶ್ರಾಂತಿ ಸ್ಥಳವು ಇದೇ ಆಗಿರಬಹುದೆಂದು ಊಹಿಸುತ್ತೇನೆ. [ಸಮಾ ಸಕ್ಕೆ ಒಂದು ನೊ?ಡಿ] ಮಹಾರಾಜನಿಗೆ ಜಯವಾಗಲಿ, ಸಾರಥಿ:- (ನೋಡಿ) ಆಯುಷ್ಯಂತನೆ, ಯುದ್ಧದಿಂದ ಸುಂದರಕನು ಬಂದಿರು ವನು. ದುಕ್ಕೊ ಧನ:- (ನೋಡಿ) ಸುಂದರಕನೇ ಅಂಗರಾಜನಿಗೆ ಕುಶಲವೇ? ಸುಂದರಕ:ಮಹಾರಾಜನೇ, ಶರಿ?ರ ಒಂದು ಮಾತ್ರ ಕುಶಲ, ದುಕ್ಕೊ” ಧನ:-ಅರ್ಜುನನು ಅವನ ರಥದ ಕುದುರೆಗಳನ್ನೂ, ಸಾರಥಿಯನ್ನೂ - ಸಂಹರಿಸಿ ರಥವನ್ನು ಮುರಿದುಬಿಟ್ಟನೋ? ಸುಂದರಕ:-ರಧವು ಮಾತ್ರವೇ ಅಲ್ಲ, ಮನೋರಧವೂ ಕೂಡ ಭಗ್ನವಾಯಿತು. ದುರೋ ಧನ: ಎಲೈ ಸುಂದರಕನೇ, ಸ್ಪಷ್ಟವಾಗಿ ಹೇಳದಮೊದಲೇ ವೇದಗೊಂ ಡಿರುವ ನನ್ನ ಮನಸ್ಸನ್ನು ಇನ್ನೂ ಖೇದಗೊಳಿಸುವೆಯಲ್ಲಾ, ಎಲ್ಲವನ್ನೂ ಸ್ಪಷ್ಟವಾಗಿ ಹೇಳು. ಸುಂದರಕ:ಮಹಾರಾಜನೇ, ಕೇಳಬೇಕು. ಕುಮಾರ ದುಶ್ಯಾಸನನ ವಧ ಎಂದು ಅರ್ಧೋಕ್ತಿಯಲ್ಲಿ ಹೇಳಿ, ಬಾಯನ್ನು ಮುಚ್ಚಿಕೊಳ್ಳುವನು. ಸಾರಥಿ:-ಸುಂದರಕನೆ, ದೈವವು ಮೊದಲೇ ಹೇಳಿದೆ, ಹೇಳು. ದುರೊಧನ: ನಾವು ಕೇಳಿದ್ದೆ ಇವೆ, ಮುಂದೆ ಹೇಳು. ಸುಂದರಕ: ದುಶ್ಯಾಸನನ ವಧದಿಂದ ಕುಪಿತನಾದ ಅಂಗರಾಳ ಹಣೆಯಲ್ಲಿ ಭೀಷಣವಾದ ಭೂಭಂಗವನ್ನು ಮಾಡಿಕೊಂಡು, ಬಾಣವನ್ನು ಸೇರಿಸು ವುದೂ, ಬಿಡುವುದೂ ಸಹ ಗೋಚರವಾಗದಂತೆ ದುರಾಚಾರಿಯಾದ ಭೀಮ ನನ್ನು ಅರ್ಜುನನ ಎದುರಿಗೇನೇ ಬಹುವಾಗಿ ಬಾಣಗಳನ್ನು ಸುರಿದು ಮುಚ್ಚಿ ಬಿಟ್ಟನು. ದುರೊಧನ:-ಅಮೇಲೆ,