ಪುಟ:ವೇಣೀಸಂಹಾರ ನಾಟಕಂ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

58 ವೇ#ಸಂಹಾರ ನಾಟy ಸುಂದರಕ:-ಅನಂತರದಲ್ಲಿ ಅವರಿಬ್ಬರೂ ನಿನ್ನ ನಾದದಿಂದಲೂ, ವಿಧವಾದ ಬಾಣಗ್ರಹಾರಗಳಿಂದಲೂ, ಧನುಸ್ಸನ್ನು ಎಳೆಯುವುದರಲ್ಲಿ ಉಂಟಾದ ಧನುಷ್ಟೇ೦ಕಾರಗಳಿಂದಲೂ, ಮಳೆಗರದಂತೆ ಬಾಣಗಳನ್ನು ಕರೆಯುತ್ತಾ, ಬಾಣಗಳು ತಗುಲಿ, ಅವರುಗಳ ಕವನಗಳಿ೦ದ ಕಿಡಿಗಳು ಉದುರುವಂತೆ ಯುದ್ದ ಮಾಡಿದರು. ಈ ಮಧ್ಯದಲ್ಲಿ ಅಣ್ಣನಿಗೆ ಪರಾಜಯವಾಗುವು ದೆಂಬ ಹೆದರಿಕೆಯಿಂದ ಅರ್ಜುನನು ಸಿಡಿಲಿನಂತೆ ಧ್ವನಿಮಾಡುವ ಕಪಿಯಿಂದ ಕೂಡಿದ ಧ್ವಜವುಳ್ಳವನಾಗಿ ಶಂಖ, ಚಕ್ರ, ಗದಾ ಎಡ್ಡಗಳಿಂದ ಕೂಡಿದ ನಾಲ್ಕು ಮುಖಗಳುಳ್ಳ ಕೃಷ್ಣನೊಡಗೂಡಿ ಪಾಂಚಜನ್ಯ, ದೇವದತ್ತಗಳ ಧ್ವನಿಗಳಿಂದ ದಿಕ್ತಟಗಳನ್ನು ಮೊಳಗುತ್ತಾ, ಆ ಸ್ಥಳಕ್ಕೆ ರಥವನ್ನು ಓಡಿಸಿಕೊಂಡು ಬಂದನು. ದುರೊಧನ:-ಆಮೆಲೆ. ಸುಂದರಕ:-ಅನಂತರದಲ್ಲಿ ಭೀಮಸೇನಾರ್ಚುನರಿಬ್ಬರೂ ಅಂಗರಾಜನ ಮೇಲೆ ಇದ್ದದ್ದನ್ನು ನೋಡಿ, ಕುಮಾರ ವೃಷಸನನು ಕನವಾದ ಧನುಸ್ಸನ್ನು ಹಿಡಿದು, ಬಲಗೈಯಿಂದ ಬಾಣಗಳನ್ನು ಹಿಡಿಹಿಡಿಯಾಗಿ ತೆಗೆದುಕೊಂಡು, ತಂದೆಯಾದ ಕರ್ಣನ ನವಾಸಕ್ಕೆ ಬಂದನು. ಆ ಕುಮಾರ ವೃಷಸೆ: ನನು ಬರುತ್ತಾ, ಇಂದ್ರಸಿಲಗಳಂತೆ ತಪ್ಪಾದ ಹಿಡಿಗಳುಳ್ಳದ್ದಾಗಿ, ಸಾಣೆ ಹಿಡಿದು ಧಳಧಳಿಸುತ್ತಿರುವ ಬಾವಿಗಳಿಂದ ಅರ್ಜುನನ ರಥವನ್ನು ಮುಚ್ಚಿಬಿಟ್ಟನು. ದು” ಧನ-(ಸಂತೋಷದಿಂದ) ಆಮೆ?ಲೆ. ಸುಂದರಕ:-ಅನಂತರದಲ್ಲಿ ಅತಿ ಶೀಘ್ರವಾಗಿ ಬಾಣಗಳನ್ನು ಬಿಡುವುದರಲ್ಲಿ ಸಮ ಧನಾದ ಅರ್ಜುನನು ತನ್ನ ಬಾಣಗ:೦ದ ಈ ಬಾಣಗಳನ್ನು ಛೇದಿಸಿ, ಸ್ವಲ್ಪ ನಕ್ಕು, "ಎಲೈ ವೃಷಸೇನನೆ', ನಿನ್ನ ತಂದೆಯ ಕೂಡ ನನ್ನ ಎದುರಿಗೆ ಲ್ಲಲು ನಮರ್ಧನಲ್ಲ. ಹುಡುಗನಾದ ನೀನು ಹೇಗೆ ನಿಲ್ಲುವಿ? ಇತರ ಹುಡುಗರೊಂದಿಗೆ ಯುದ್ಧಕ್ಕೆ ಹೋಗು ಎಂದನು. ಇದನ್ನು ಕೇಳಿ, ಗುರುಷರ ಸಿಕ್ಕರಿಸಿ ಮಾತನಾಡಿದನೆಂಬ ಕೋಪದಿಂದ ಕೆಂಪಾದ ಮುಖವುಳ್ಳ ವೃ ರಸನನು ಮುದ ದು ಗಂಟಿಕ್ಕಿ ಕೊಂಡು, ಮರ್ಮ 5),