ಪುಟ:ವೇಣೀಸಂಹಾರ ನಾಟಕಂ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚತುಥroಳ _59 ) was th ಛೇದಕಗಳಾದ ಬಾಣಗಳನ್ನು ಅರ್ಜುನನಿಗೆ ಪ್ರಯೋಗಿಸಿದನು. ದುರ್ವತ ನಗಳನ್ನು ಪ್ರಯೋಗಿಸಲಿಲ್ಲ, ದುರೊಧನ:-ವತ್ಸನೆ, ವೃಷಸೇನನೆ? ಉತ್ತಮವಾದ ಕೆಲಸವನ್ನು ಮಾಡಿದೆ, ಆಮೇಲೆ. ಸುಂದರಕ:.ನಾರಾಜನೇ, ಅನಂತರದಲ್ಲಿ ವಾದ ಬಾಣಗಳ ಪಟ್ಟಿನಿಂದ ಅರ್ಜುನನು ಕುಪಿತನಾಗಿ, ಗಾಂಡಿನದಲ್ಲಿ ಬಾಣಗಳನ್ನು ಹೂಡಿ, ಎಳೆಯುವ ಗಂಡಿನ ಧ್ವನಿಗಳಿಂದ ಕಿವಿಗಳನ್ನು ಕುರುಡಾಗಿ, ಬಾಣಗಳನ್ನು ಬಿಡುವುದರಿಂದ ಕಣ್ಣುಗಳು ಕಾಣದಂತೆಯ, ಶಿಕ್ಷೆಗೂ, ಬಲಕ್ಕೂ ಅನು ರೂಪವಾಗಿ ಅತ್ಯಾಶ್ಚರ್ಯವನ್ನು ತೋರಿಸಿದನು. ಇದನ್ನು ನೋಡಿ, ಬತ್ತಳಿ ಕೆಯಿಂದ ರಾಣಗಳನ್ನು ತೆಗೆಯುವುದೂ, ಧನುಸ್ಸಿನಲ್ಲಿ ಹೂಡುವುದೂ, ಇವುಗಳು ಯಾವುದೂ ಗೋಚರವಾಗದಷ್ಟು ಚಾತುರ್ಯದಿಂದ ಕುಮಾರ ವೃಷಸೇನನು ಯುದ್ದ ಕಾರ್ಯವನ್ನಾರಂಭಿಸಿದನು. ಆ ಸಮಯದಲ್ಲಿ ಕುರುಪಾಂಡವ ಸೇನೆಗಳಲ್ಲಿರುವ ವಿರಜನರು ಯುದ್ಧದ ಕೆಲಸವನ್ನೆಲ್ಲ ವನ್ನೂ ಬಿಟ್ಟು, ಪರಸ್ಪರ ವೈರಸಂಬಂಧವನ್ನು ತೊರೆದು, ವೃಷಸೇನನನ್ನು ಹೊಗಳಲಾರಂಭಿಸಿದರು. ರುದ್ಯೋಧನ:-(ಆಶ್ಚರೈವಿಂದ) ಆಮೇಲೆ. ಸುಂದರಕ:-ಅನಂತರದಲ್ಲಿ ನಮ್ಮನ್ನ ಧನುರ್ಧಾರಿಗಳ ಪರಾಕ್ರಮವನ್ನು ಮಾರಿ ಕೆಲಸ ಮಾಡುತ್ತಲಿರುವ ಮಗನನ್ನು ನೋಡಿ, ಸಂತೋಷ, ಕೋಪ, ಭಯ ಇವುಗಳಿಂದ ಕೂಡಿದ ಕರ್ಣನು ಬಾಣಗಳನ್ನು ಭೀಮಸೇನನ ಮೇಲೆ ಬಿಡುತ್ತಾ, ಬಾಷ್ಪ ಪೂರಿತವಾದ ಕಣ್ಣನ್ನು ವೃಷಸೇನನ ಮೇಲೆ ಬಿಟ್ಟನು. ಅನಂತರದಲ್ಲಿ ಉಭಯ ಸೈನ್ಯಗಳಲ್ಲಿಯ, ವೃಷಸೇನನನ್ನ ಹೊಗಳುತ್ತಿರುವು ದನ್ನು ಅರ್ಜುನನು ಸಹಿಸದೆ, ಏಕಕಾಲದಲ್ಲಿ ಕುದುರೆಗಳ ಮೇಲೆಯ, ಸಾರಥಿಯ ಮೇಲೆಯೂ, ರಥದ ಮೇಲೆಯೂ, ಬಿಲ್ಲಿನ ಮೇಲೆಯ, ಛತ್ರದ ಮೇಲೆಯ, ಕುಮಾರ ವೃಷಸೇನನ ಮೇಲೆ ಬಾಣಗಳನ್ನು ಪ್ರಯೊ ಗಿಸಿದನು. ಗುರೋಧನ:- ..ಆಮೇಲೆ,