ಪುಟ:ವೇಣೀಸಂಹಾರ ನಾಟಕಂ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

60 ವೇಣೀಸಂಹಾರ ನಾಟಕ ಸುಂದರಕ:ಮಹಾರಾಜನೇ, ಆ ನಂತರದಲ್ಲಿ ವೃಷಸೇನನ ರಥವು ಹೋಯಿತು. ಬಿಲ್ಲಿನ ಹೆದೆಯ ಕತ್ತರಿಸಿಹೋಯಿತು. ಆಗ ಕುಮಾರನು ಕೇವಲ ಸಂ ಚಾರದ ಕೌಶಲದಿಂದಲೇ ಬಾಣಗಳ ಪೆಟ್ಟುಗಳು ತನಗೆ ಆಗದಂತೆ ಮಂಡ ಲಾಕಾರವಾಗಿ ಸಂಚರಿಸಲಾರಂಭಿಸಿದನು. ಅನಂತರದಲ್ಲಿ ಮಗನ ರಥವು ಧ್ವಂಸವಾದದ್ದನ್ನು ನೋಡಿ, ಕೋಪೋದ್ದೀಪಿತನಾದ ಕರ್ಣನು ಎದುರಿಗಿ ರುವ ಭೀಮನನ್ನು ಲಕ್ಷ್ಯಮಾಡದೆ, ಅರ್ಜುನನ ಮೇಲೆ ಬಾಣಧಾರೆಗಳನ್ನು ಸುರಿಯಲಾರಂಭಿಸಿದನು. ಕುಮಾರ ವೃಷಸೇನನೂ ಕೂಡ ಪರಿಜನರಿಂದ ಸಿದ್ಧಪಡಿಸಿದ ಮತ್ತೊಂದು ರಥವನ್ನು ಹತ್ತಿ, ಅರ್ಜುನನನ್ನು ಕುರಿತು, “ಎಲೈ ತಂದೆಯನ್ನು ಧಿಕ್ಕರಿಸಿ ಮಾತನಾಡುವುದರಲ್ಲಿ ಉದ್ಯುಕ್ತನಾಗಿರುವ ಮಧ್ಯಮ ಪಾಂಡವನೆ, ನನ್ನ ಬಾಣಗಳು ನಿನ್ನ ಶರೀರವನ್ನು ಬಿಟ್ಟು ಬೇರೆ ಕಡೆಯಲ್ಲಿ ಬೀಳುವುದಿಲ್ಲವೆಂದು ಹೇಳಿ, ಸಾವಿರ ಬಾಣಗಳಿಂದ ಅರ್ಜುನನ ಶರೀ ರವನ್ನು ಮುಚ್ಚಿ ಸಿಂಹನಾದವನ್ನು ಮಾಡಿದನು. ದುಧನ:-(ಆಶ್ಚರದಿಂದ) ಬಾಲಕನ ಪರಾಕ್ರಮವು ಅತ್ಯಾಶ್ಚರೀಕರವಾಗಿದೆ. ಆಮೇಲೆ. ಸುಂದರಕ:-ಅನಂತರದಲ್ಲಿ ಅರ್ಜುನನು ಆ ಬಾಣಗಳನ್ನು ಕೊಡಹಿ, ಚಿನ್ನದ ಗಂಟೆ ಗಳನ್ನು ಕಟ್ಟಿರುವ ಇಂದ್ರನೀಲಮಣಿಯಂತೆ ಶ್ಯಾಮಲವರ್ಣ ಮುಖ ವುಳ್ಳ ಮೋಡವಿಲ್ಲದ ಆಕಾಶದಂತೆ ನಿರ್ಮಲವಾಗಿರುವ, ರತ್ನ ಗಳ ಕಾಂತಿ ಗಳಿಂದ ಸುಂದರವಾಗಿಯೂ, ಭಯಂಕರವಾಗಿ ಕಾಣುವ ರಥದಲ್ಲಿದ್ದ ಒಂದು ಶಕ್ತಿಯನ್ನು ಎತ್ತಿ, ಕುಮಾರನ ಮೇಲೆ ಬಿಟ್ಟನು. ಆ ಸಮಯದಲ್ಲಿ ಅಂಗರಾಜನಾದ ಕರ್ಣನಿಗೆ ಕೈಯಿಂದ ಧನುಸ್ಸು ಬಿದ್ದು ಹೋಯಿತು. ಹೃದಯದಿಂದ ಉತ್ಸಾಹವು ಹೋಯಿತು. ಕಣ್ಣಿನಿಂದ ನೀರು ಸುರಿಯುವು ದಕ್ಷಾರಂಭಿಸಿತು. ಅರ್ಜುನನೂ, ಭೀಮನೂ ಸಿಂಹನಾದವನ್ನು ಮಾಡಿ ದರು. ಕುರಸೈನ್ಯದಲ್ಲಿದ್ದವರೆಲ್ಲ ರೂ ದುಷ್ಕರ ಕರ್ಮವು ಮಾಡಲ್ಪಟ್ಟಿ ತಂದು ಕೂಗಿದರು. ದುರೊಧನ:-(ದುಃಖದಿಂದ) ಆಮೇಲೆ, ಮಹಾರಾಜನೇ, ಅನಂತರದಲ್ಲಿ ವೃಷ ಸೇನನೂ ಕೂಡ ತೀಕ್ಷವಾದ ಬಾಣಗಳನ್ನು ಹೂಡಿ, ಕಿವಿಯವರೆಗೂ