ಪುಟ:ವೇಣೀಸಂಹಾರ ನಾಟಕಂ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚತುರ್ಥಾod ವನ್ನು ಹೊಂದಿಯಾಗಲೀ ತ್ಯಾಗ ಮಾಡೋಣ, ದುಃಖ ವಿಷಯದಲ್ಲಿ ನಾನು ನಿನಗೇನೂ ಹೇಳಿ ಕಳುಹಿಸಬೇಕಾಗಿಯೇ ಇಲ್ಲ. ಏಕೆಂದರೆ, ವೃಷ ಸೇನನು ನನ್ನ ಮಗನಲ್ಲವೇ? ದುಶ್ಯಾಸನನು ನಿನ್ನ ತಮ್ಮನಲ್ಲವೇ? ಹೀಗಿ ರುವಾಗ ನನಗೆ ನೀನೇನು ಬೋಧಿಸುವಿ? ನಾನು ನಿನಗೇನು ಬೋಧಿಸು ವೆನು? ಎಂದು ಇರ್ಣ ಗೆ ಹೇಳು. ಸುಂದರಕ:_ಅಪ್ಪಣೆ (ಎಂದು ಹೊರಟು ಹೋಗುವನು.) ದುರೊಧನ:---ಇದೇನು ರಥದ ಧ್ವನಿಯಾಗುವಂತಿದೆ. ಸಾರಥಿ:-(ಕಿವಿಗೊಟ್ಟು) ಆಯುಷ್ಯಂತನೆ, ಕುದುರೆಗಳ ಧ್ವನಿಯೊಂದಿಗೆ ರಥದ ಧ್ವನಿ ಇದೆ. ಪರಿಜನರು ರಥವನ್ನು ತಂದಿರಬೇಕು. ದುರೊಧನ.--ಹೋಗು, ನೀನು ಸಿದ್ಧಪಡಿಸು, ಅಪ್ಪಣೆ ( ಎಂದು ಸಾರಥಿಯು ಹೋಗಿ ಪುನಃ ಪ್ರವೇಶಿಸುವನು.) ದುಕ್ಕೊ ಧನ: (ನೋಡಿ) ಏಕೆ ರಥವನ್ನು ಸಲ್ಲ? ಸಾರಥಿ: ಮಹಾರಾಜನೆ, ನಿಮ್ಮ ತಂದೆಯಾದ ದೃತರಾಷ್ಟ್ರನೂ, ಮಾತೆಯಾದ ಗಾಂಧಾರಿಯ, ಸಂಜಯನೂ ಸಹ ರಥದಲ್ಲಿ ಕುಳಿತುಕೊಂಡು ಬರುತ್ತಿ ರುವರು. ದುರೊಧನ:--ಕಷ್ಟ! ಕಷ್ಟ! ಗೈನವು ಬಹಳ ಘೋರ ಕೆಲಸವನ್ನು ಮಾಡುತ್ತಿ ರುವುದು. ಸಾರಥಿಯೆ? ಚಾಗ್ರತೆಯಾಗಿ ಹೋಗಿ ರಥವನ್ನು ತೆಗೆದು ಕೊಂಡು ಬಾ, ನಾನು ತುಗೆಗೆ ಕಾಣದಂತೆ ಏಕಾಂತದಲ್ಲಿ ಎಲ್ಲಿಯಾದರೂ ಹೋಗಿ ಕುಳಿತುಕೊಳ್ಳುವೆನು? ಸಾರಥಿ: ಆಯುಷ್ಯಂತನೆ, ಅನುಬ್ಬಗೂ ನೀನೊಬ್ಬನೆ: ಉಳಿದಿರುವುದರಿಂದ ಅವರನ್ನು ಸಮಾಧಾನ ಪಡಿಸಬೇಡವೆ? ದುರೊಧನ:...ಸಾರಥಿಯೆ, ಅದೃಷ್ಟಹೀನನಾದ ನಾನು ಹೇಗೆ ತಾನೆ ಸಮಾಧಾನ ಪಡಿಸಲ? ನೋಡು, ಈಗ ತಾನೆ: ನಾನೂ, ದುಶ್ಯಾಸನನೂ ಸಹ ತಾಯಿ ಯನ್ನೂ , ತಂದೆಯನ್ನೂ ನಮಸ್ಕರಿಸಿ, ಅವರು ನಮ್ಮ ಶಿರಸ್ಸನ್ನು ಆಘ್ರಾಣ ಮಾಡಿ, ಕಳುಹಿಸಿದ ಮೇಲೆ ಇಬ್ಬರೂ ಯುದ್ಧಕ್ಕೆ ಬಂದೆವು. ಆ