ಪುಟ:ವೇಣೀಸಂಹಾರ ನಾಟಕಂ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣಿ ಸಂಹಾರ ನಾಟಕ ಬಾಲಕನಾದ ದುಶ್ಯಾಸನನು ಶತ್ರುವಿನ ಕೈಯಿಂದ ಆ ವಿಧವಾದ ಅವಸ್ಥೆ ಯನ್ನು ಹೊಂದಿದ ಮೇಲೆ, ನಾಚಿಕೆ ಇಲ್ಲದೆ ತಾಯಿ ತಂದೆಗಳ ಸವಿಾ ಸಕ್ಕೆ ಹೋಗಿ ಏನು ಹೇಳಲಿ? ಆದರೂ ಗುರುಗಳನ್ನು ಅವಶ್ಯಕವಾಗಿ ನಮ್ಮ ಸ್ಕರಿಸಬೇಕು. (ಎಂದು ಹೊರಟುಹೋಗುವನು.) ಇತಿ ಚತುರ್ಧಾಂಕ. L ಪಂಚಮಾಂಕ (ರಥಾರೂಢರಾಗಿ ಸಂಚಯನೂ, ಗಾಂಧಾರಿಯ, ಧೃತರಾಷ್ಟ್ರನೂ ಪ್ರವೇಶಿಸುವರು.) ಧೃತರಾಷ್ಟ್ರ:- ಸಂಚಯನೆ, ಕುರುಕುಲದ ಕಾನನಕ್ಕೆ ಒಂದು ಚಿಗುರಿನಂತಿರುವ ನ ದುಖ್ಯೋಧನನು ಎಲ್ಲಿದಾನೆ? ಬದುಕಿದಾನೆಯೇ? ಇಲ್ಲವೇ? ಹೇಳು. ಗಾಂಧಾರಿ: ಸಂಜಯ, ವತೃನು ನಿಜವಾಗಿಯೂ ಬದುಕಿದಾನೆಯೆ?? ಎಲ್ಲಿದಾನೆ? ಹೇಳು. ನಂಜಯ:-ಮಹಾರಾಜನೆ?, ಇಗೋ ಈ ಆಲದ ಮರದ ನೆರಳಿನಲ್ಲಿ ಒಬ್ಬನೇ ಕುಳಿತಿರುವನು. ಗಾಂಧಾರಿ: ಒಬ್ಬನೆ: ಕು ತಿರುವನೆಂದು ಹೇಳು ಯಲ್ಲಾ, ಅವನ ಪಕ್ಕದಲ್ಲಿ ಅವನ ನೂರು ಜನ ತಮ್ಮಂದಿರುಗಳಿಲ್ಲವೇ ? ಸಂಜಯ: ತಂದೆಯ?, ಮಾತೆಯ', ರವದಿಂದ ನಿಧಾನವಾಗಿ ಇಮಿ. (ಇ ಬೃ ರೂ' ಇಳಿಯುವರು.) , ಸಂಜಯ:-( ದುರೊ ಧನನ ಸಮೀಪಕ್ಕೆ ಬಂದು ) ಮಹಾರಾಜನಿಗೆ ಜಯವಾಗಲಿ. ತಂದೆಯ, ಮಾತೆಯ ನಹ ಬಂದಿರುವರು. ನೀನು ನೋಡಿದಂತೆಯೆ ಕಾಣಿಸುವುದಿಲ್ಲ ಎಲಾ, (ದುರೊಛನನು ಆಶ್ಚರ್ಯವನ್ನು ಅಭಿನಯಸುವನು.)