ಪುಟ:ವೇಣೀಸಂಹಾರ ನಾಟಕಂ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚಮಾಂನ 6? ದೃತರಾಷ್ಟ:-ಈ ಯುದ್ದದಲ್ಲಿ ವತೃನು ಶತ್ರುಗಳನ್ನು ಗೆದ್ದು ಹಿಂತಿರುಗಿ ಬರುವ ನು, ಕವಚವನ್ನು ಶರೀರದಿಂದ ತೆಗೆಯುವನು, ದೇಹದಲ್ಲಿ ಹಕ್ಕಿ ಕೊಂಡಿರುವ ಬಾಣಗಳನ್ನು ಚಿವುಟಿಗಳಿಂದ ತೆಗೆದು ಗಾಯಗಳಿಗೆ ಮುಲಾಮನ್ನು ಹಾಕಿ ಬಟ್ಟೆಯನ್ನು ಕಟ್ಟಿ ದಿಂಬನ್ನು ಒರಗಿಕೊಂಡು ಯುದ್ಧದಿಂದ ಜಯಿಸಿ ಬಂದ ರಾಜರುಗಳನ್ನು ವಿಲಾಸದಿಂದ ನೋಡುತ್ತಾ ಕುಳಿತಿರುವನು. ಆ ಸಮ ಯದಲ್ಲಿ ಮೃದುವಾದ ಮಾತಿನಿಂದ ವತೃನೆ, ವೇದನೆಯು ಸಹ್ಯವಾಗಿ ದೆಯೇ ಎಂದು ಕಿವಿಯಲ್ಲಿ ಕೆಳಬೆಕೆಂದಿದ್ದೆನು. ನಂದಭಾಗ್ಯನಾದ ನನಗೆ ಅದೃಷ್ಟವಿಲ್ಲದೆ ಹೋಯಿತು. ದುರೊಧನ:...(ದುಃಖವನ್ನು ತೊರಿಸುವನು.) (ಗಾಂಧಾರಿ ಧೃತರಾರ್ಷ್ಟ ಬೃರೂ ಅವನ ಶರೀರವನ್ನು ಮುಟ್ಟಿ ನೋಡಿ ಆಲಿಂಗಿಸಿಕೊಳ್ಳುವರು.) ಗಾಂಧಾರಿ: ವತೃನೆ, ಯುದ್ದದ ಪ್ರಹಾರದಿಂದ ವ್ಯಾಕುಲನಾದ ನಿನಗೆ ನನ್ನೊಂ ದಿಗೆ ಮಾತನಾಡುವುದಕ್ಕಾಗುವುದಿಲ್ಲವೇ? ಧೃತರಾಷ್ಟ್ರ:-ನತ್ರನೆ, ದುದ್ಯೋಧನನೇ, ಹಿಂದೆ ಯಾವಾಗಲೂ ನನ್ನಲ್ಲಿ ಮಾತ್ರ ನಾಡದೇ ಇರುತ್ತಿರಲಿಲ್ಲವಲ್ಲಾ ! ಗಾಂಧಾರಿ: ನತ್ಮನೇ, ನೀನು ನಮ್ಮಲ್ಲಿ ಮಾತನಾಡದೆ ಹೋದರೆ ದುಶ್ಯಾಸನನು ಮಾತನಾಡಿಸುವನೆ? ದುರ್ಮಷ್ರಣನು ಮಾತನಾಡಿಸುವನೆ? ವಿಕರ್ಣನು ಮಾತನಾಡಿಸುವನೆ? (ಎಂದಳುವಳು) ದುಕ್ಕೋಧನ:-ಮಾತೆ, ತನ್ನನು ನಾಶವಾಗುತ್ತಿರುವಾಗ ಯಾವ ಪ್ರತಿಕ್ರಿಯೆ ಯನ್ನೂ ಮಾಡದೆ, ಪಾಪಿಯಾದ ನಾನು ನೋಡುತ್ತಲೇ ಇದೆ ನು. ನಿನಗೂ ತಂದೆಗೂ ಸಹ ಕಣ್ಣೀರನ್ನು ಬಹಳವಾಗಿ ಹೆಚ್ಚಿಸಿದೆನು. ನಿರ್ಮಲ ವಾದ ಈ ಭರತವಂಶದಲ್ಲಿ ದುಷ್ಟನಾಗಿ ನಾನು ಹುಟ್ಟಿದೆನು. ಮಕ್ಕಳು ಗಳೆಲ್ಲರನ್ನೂ ನಾಶಮಾಡುವ ನನ್ನನ್ನು ಮಗನೆಂದು ಏಕೆ ತಿಳಿದಿರುವಿ? ಗಾಂಧಾರಿ..ಪ್ರತಿಕ್ರಿಯೆ ಯೋಚನೆಯೇ ಬೇಡ. ನೀನು ಒಬ್ಬನಾದರೂ ಕುರುಡ ರಾದ ನಮ್ಮಿಬ್ಬರಿಗೆ ಮಾರ್ಗವನ್ನು ತೋರಿಸುತ್ತಾ ಬಹುಕಾಲ ಬದುಕು, ನಗೆ ರಾಜ್ಯವು ಏಕೆ? ವೈರವ) ಏಕೆ?