ಪುಟ:ವೇಣೀಸಂಹಾರ ನಾಟಕಂ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉಪೋದ್ಘಾತ. ವೇಣಿಸಂಹಾರವೆಂದರೆ ಹೆರಳನ್ನು ಸಂಸ್ಕರಿಸುವುದೆಂದರ್ಥ. ಪಾಂಡವರು ದೂತದಲ್ಲಿ ಪರಾಜಿತರಾದ ಸಮಯದಲ್ಲಿ ದುಧನನ ಅಪ್ಪಣೆಯಿಂದ ದುರ್ವ ತ್ಯನಾದ ದುಶ್ಯಾಸನನು ಪತಿವ್ರತಾಶಿರೋಮಣಿಯಾದ ದೋಷದಿಗೆ ಮಾನಭಂಗ ಮಾಡಲೆಣಿಸಿ, ಅವಳ ಹೆರಳನ್ನು ಹಿಡಿದು, ಸಭಾಮಂಟಪಕ್ಕೆ ಎಳತಂದನು. ಅವನ ಪರಸ್ಪರ್ಶದಿಂದ ಹೆರಳು ಕೆದರಿತು. ಅ ಸಾಧಿ ಮಣಿಯು ಈ ಕೇಶಪಾಶವನ್ನು ಆ ದುಶ್ಯಾಸನನ ರಕ್ತದಿಂದ ಬಾಚಿದ ಹೊರತು, ಕಟ್ಟುವುದಿಲ್ಲವೆಂದು ಪ್ರತಿಜ್ಞೆ ಮಾಡಿದಳು. ಅವಳ ಪತಿಗಳಲ್ಲೊಬ್ಬನಾದ ಮರ್ಸೆನನು ದುಶ್ಯಾಸನನನ್ನು ವಧಿ ಗುವುದರಲ್ಲಿ ನಮರ್ಧನಾಗಿದ್ದಾಗ್ಯೂ, ಧರಕ್ಕೆ ಕಟ್ಟುಬಿದ್ದು , ಧರ್ಮರಾಜನ ಆಚ್ಛಾನುಸಾರವಾಗಿ ಹದಿಮೂರು ವರ್ಷಗಳ ವರೆಗೂ ತನ್ನ ಕೋಪವನ್ನ ನಗಿಸಿ ಕೊಂಡಿದ್ದು, ಅನಂತರದಲ್ಲಿ ದುಶ್ಯಾಸನನ್ನು ಸಂಹರಿಸಿ, ದೌಪದಿಯ ಹೆರಳನ್ನು ಸಂಸ್ಕರಿಸಿದನು. ಈ ಕಥೆಯು ಮಹಾಭಾರತದಲ್ಲಿ ಇರುವುದು. ಅದರಲ್ಲಿ ಉದ್ಯೋಗಪರ್ವವನ್ನಾರಂಭಿಸಿ, ಧರ್ಮರಾಯನ ಪಟ್ಟಾಭಿಷೇಕದವರೆಗೂ ಇರುವ ಕಥೆಯನ್ನು ಬಹು ಸುಂದರವಾದ ರೀತಿಯಿಂದ ಸಂಗ್ರಹಿಸಿ, ಭಟ್ಟನಾರಾಯಣ ನುಬ ಮಹಾಕವಿಯು ನಾಟಕ ರೂಪದಲ್ಲಿ ರಚಿಸಿರುವನು. ಈ ಮಹಾಕವಿಯ ಶ್ಲೋಕಗಳನ್ನು ಶಾರ್ಬಧರ ಪದ್ದತಿಯೆಂಬ ಗ್ರಂಧದ ಯ, ಕಾವ್ಯ ಪ್ರಕಾಶದಲ್ಲಿಯೂ, ಗಣರತ್ನ ಮಹೋದಧಿಯಲ್ಲಿಯ, ಸರಸ್ವತಿ ಕಂಠಾಭರಣದಲ್ಲಿಯ, ಅಲಂಕಾರಸೂತ್ರವೃತ್ತಿಯಲ್ಲಿಯ ಉದಹರಿಸಿರುವರು. ಆದುದರಿಂದ ಆಯಾಯ ಗ್ರಂಥಕರ್ತರುಗಳಾದ ಮಮ್ಮಟ, 'ಭೋಜದೇವ, ವಾಮನಮೊದಲಾದವರುಗಳಿಗಿಂತಲೂ ಈ ಕವಿಯು ಪ್ರಾಚೀನನೆಂದು ಹೇಳುವದ ರಲ್ಲಿ ಸಂದೇಹವಿಲ್ಲ. ಆದ್ದರಿಂದ ಒಂದು ಸಾವಿರ ವರ್ಷಗಳ ಹಿಂದೆ ಈ ಭಟ್ಟ ನಾರಾಯಣ ಕವಿಯು ಇದ್ದನೆಂದು ತಿಳಿದುಬರುವುದು. ಮುಖ್ಯವಾಗಿ ' ಶ್ಲೋಕ| ಹಸದ್ಭಕ್ರಿಯತೇಕರ್ಮ ರುದಟ್ಟಿರನುಭೂಯತೆ ? ಏಂಬ ನ್ಯಾಯಾನುಸಾರವಾಗಿ ನಗುತ ನಗುತ ಮಾಡಿದ ದುಷ್ಕರ್ಮದ ಫಲವನ್ನು