ಪುಟ:ವೇಣೀಸಂಹಾರ ನಾಟಕಂ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚವಾಂತ ಕರಗಿಹೋಗುವುದು. ಮಾನಶಾಲಿಯಾದ ನೀನು ವಂಚನೆಯನ್ನು ಮಾಡು ವುದಕ್ಕೆ ಇಷ್ಟ ಪಡುವುದಿಲ್ಲ. ಶತ್ರುಗಳ ಯುದ್ಧವು ಬಹು ವಂಚನೆಯು ಳ್ಳದ್ದಾಗಿದೆ. ಅಯ್ಯೋ ನಾನು ಕೆಟ್ಟು ಹೋದೆ. ಗಾಂಧಾರಿ:-ಮಗನೇ, ನನ್ನ ನೂರು ಮಕ್ಕಳುಗಳನ್ನು ಕೊಂದ ಭೀಮನೊಂ ದಿಗೆ ಯುದ್ಧವನ್ನು ಹುಡುಕುವೆಯಲ್ಲ. ದುರೊಧನ: ಮಾತಯೆ? ಆ ಭೀಮನು ಹಾಗಿರಲಿ, ನನ್ನ ಮನಸ್ಸಿಗೆ ನು ನೋರಧ ಪ್ರಾಯನಾಗಿಯೂ, ದೇಹಕ್ಕೆ ಗಂಧಲೇಪನದಂತೆಯೂ, ಕಣ್ಣಿಗೆ ಚಂದ್ರಕಾಂತಿಯಂತೆಯ, ನಿನಗೆ ಮಗನು ತೆಯೂ ಇದ್ದ ತಂದೆಗೆ ನೀತಿ ಯಲ್ಲಿ ಮುಖ್ಯ ಶಿಷ್ಯನಾದ ಕರ್ಣನನ್ನು ಕೊಂದಿರುವ ಆ ಪಾಪಿಯ ಮೇಲೆ ನನ್ನ ಬಾಣಗಳು ಬೀಳುತ್ತವೆ, ಸಾರಥಿಯೆ ಇನ್ನು ಸಾವಕಾಶ ಮಾಡುವು ದರಿಂದ ಪ್ರಯೋಜನವಿಲ್ಲ. ಸಿದ್ದವಾದ ನನ್ನ ರಥವನ್ನು ತೆಗೆದುಕೊಂಡು ಬಾ, ಅಧವಾ ಪಾಂಡವರಿಗೆ ಹೆದರುವ ನೀನಿಲ್ಲಿಯೆ? ಇರು, ಈ ಗದೆ ಯೊಂದನ್ನೆ ಹಿಡಿದುಕೊಂಡು ಯುದ್ಧಕ್ಕೆ ಹೋಗುವೆನು. ಸಾರಥಿ:ಆಯುಷ್ಯಂತನೆ', ಬೇರೆ ವಿಧವಾಗಿ ಯೋಚಿಸಬೇಡ, ಇಗೋ ಬಂದೆನು (ಎಂದು ಹೋಗುವನು.) ಧೃತರಾಷ್ಟ್ರ:-ನು ದುರೊ? ಧನ, ನೀನು ಯುದ್ಧಕ್ಕೆ ಸ್ಥಿರನಾಗಿ ನಮ್ಮನ್ನು ಸುಡುವುದಕ್ಕೆ ಈ ವ್ಯವಸಾಯವನ್ನು ಮಾಡುತ್ತಲಿದ್ದಿದೆ. ಹಾಗಾದರೆ ಇರುವ ವೀರರುಗಳಲ್ಲಿ ಒಬ್ಬನಿಗೆ ಸೇನಾಪತಿಯ ಸ್ಥಾನದಲ್ಲಿ ಪಟ್ಟಾಭಿಷೇಕ ಮಾಡು. ದುರೋಧನ:-ಅಭಿಷೇಕ ಮಾಡಿಯೇ ಅಗಿದೆಯಲ್ಲ. ಗಾಂಧಾರಿ:-ಮಗನೇ, ಅದು ಯಾರು? ಅವರಿಂದ ನಮ್ಮ ಜಯಾಶೆಯನ್ನು ಊಹಿಸೋಣ, ಧೃತರಾಷ್ಟ್ರ:-ಶಲ್ಯನೋ? ಅಶ್ವತ್ಥಾಮನೋ? ಸಂಜಯ:-ಭೀಷ್ಮನು ಸತ್ತು ಹೋದನು. ದ್ರೋಣಾಚಾರನು ಸತ್ತು ಹೋದನು. ಆಶೆಯು ಪ್ರಬಲವಾಗಿದೆ. ಶಲ್ಯನು ಪಾಂಡವರನ್ನು ಜಯಿಸುವನು,