ಪುಟ:ವೇಣೀಸಂಹಾರ ನಾಟಕಂ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿಕ 3. ಕರ್ಣನೆಂಬ ಮಹಾ ವಿಷಮಯವಾದ ಸರ್ಪವು ಅಡಗಿಸುಟ್ಟಿತು. ಶಲ್ಯನು ಲೋಕಾಂತರವನ್ನು ಹೊಂದಿದನು. ಜಯವು ಅಲ್ಮಾವಶಿಷ್ಟವಾಗಿರುವಾಗ ಭೀಮನು ಸಾಹಸದಿಂದ ಆಲೋಚನೆ ಮಾಡದೆ “ನಾಳೆಯು ವಿವಸ ದುರೆ ಧನನನ್ನು ಕೊಲ್ಲದಿದ್ದರೆ ಅಗ್ನಿಗೆ ಪ್ರವೇಶ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿ ನಮ್ಮನ್ನೆಲ್ಲರನ್ನೂ ಪ್ರಾಣಸಂಶಯದಲ್ಲಿ ಇರಿಸಿಟ್ಟನು. ದೌಪದಿ:-[ಕಣ್ಣೀರು ಬಿಡುತ್ತಾ) ಮಹಾರಾಜನೆ, ದೌ ಸರಿಯು ಹಾಗೆ ಮಾಡಿದಳೆಂದು ಹೇಳಬೇಕು. ಯುಧಿಷ್ಠಿರ. ಸರಿಯೇ, ನೀನಲ್ಲ. ಇದಕ್ಕೆ ನಾವೆ' ಕಾರಣಭೂತನು. [ಪ್ರರುಷನನ್ನು ನೋಡಿ] ಬುಧಕನೆ, ಕೋಪಗೊಂಡಿರುವ ಭೀನು ಸೇನನ ದಾರುಣವಾದ, ಈಗತಿ ನಿರ್ವಹಿಸಬೇಕಾಗಿರುವ ಪ್ರತಿಜ್ಞೆ ದನ್ನು ತಿಳಿದು ಎಲ್ಲಿಯೊ ಅಡಗಿಕೊಂಡಿರುವ ನಿತ ಕೌರವನ ಮಾರ್ಗ ವನ್ನು ತಿಳಿಯುವುದಕ್ಕಾಗಿ ಆಯಾಯಾಸ್ಥಾನಗಳಲ್ಲಿ ಯಥಾರ್ಥವನ್ನ ರಿಯ ತಕ್ಕ ಬುದ್ದಿಶಾಲಿಗಳಾದ ಚಾರರನ್ನೂ, ಭಕ್ತಿಯುಳ್ಳ ಮಂತ್ರಿಗಳನ್ನೂ ಸುಯೋಧನನ ಹೆಜ್ಜೆಯ ಗುರುತನ್ನು ತಿಳದವರನ್ನೂ, ಸೃಮಂತಪಂಕದ ಸುತ್ತಲೂ ಸುಂದರಿಸುವಂತೆ ಮಾಡಬೇಕೆಂದು ಸಹದೇವನಿಗೆ ತಿಳಿಸು, ಮತ್ತು ವಿಶೇಷವಾದ ಧನ ಪುರಸ್ಕಾರಗಳನ್ನು ಅವರುಗಳಿಗೆ ಕೊಡುವುದಾಗಿಯೂ, ಡಂಗೂರವನ್ನು ಕೊಡಿಸುವಂತೆ ತಿಳಿಸು, ಮತ್ತು ಕೆಸರಿನಲ್ಲಾಗಲಿ, ಮರಳಿನಲ್ಲಾಗಲೀ, ರಹಸ್ಯವಾದ ಹೆಜ್ಜೆಯ ಗುರುತನ್ನ ರಿಯಲು ಸಮ ರ್ಥರಾದ ಬೆಸ್ತರುಗಳನ್ನು ನೇಮಿಸಬೇಕು. ಹುಲ್ಲು ಹೊರೆಗಳಲ್ಲಿಯೂ ಹೊದರುಗಳಲ್ಲಿಯ, ಹೆಜ್ಜೆ ಇಡುವಾಗ ತುಳಿದು ಬಾಡಿರುವ ಬಳ್ಳಿಗಳ ಸಮೂಹದಲ್ಲಿಯ ವಿಶೇಷ ವರಿಚಯವುಳ್ಳ ಗೊಲ್ಲರನ್ನು ನೇಮಿಸ ಬೇಕು. ಸ್ವಜಾತಿ ಹೆಜ್ಜೆ ಗಳನ್ನು ತಿಳಿಯುವುದರಲ್ಲಿ ಸಮರ್ಥರಾದ ಬೇಪ ರನ್ನು ಹುಲಿಗಳಿಂದ ಕೂಡಿರುವ ಕಾಡುಗಳಲ್ಲಿ ನೇಮಿಸಬೇಕು. ಋಷಿಗಳು ವಾಸಮಾಡುವ ಸ್ಥಳಗಳಲ್ಲಿ ಬ್ರಾಹ್ಮಣವೇಷದಿಂದಲ, ಸಿದ್ದರ ವೇಷಗಳಿಂದಲೂ, ಗೂಢಚಾರರು ಸಂಚರಿಸಲಿ, ಪುರುಷ:-ಅಪ್ಪಣೆ ಎಂದು ಏಳುವನು.?