ಪುಟ:ವೈಶಾಖ.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೮೫ ಕಣ್ಣೀರು ಸುರಿಸುತ್ತಲೇ ತಿಳಿಸಿದ್ದೆ... ಕೇಳುತ್ತ, ಸಾತು ಹುಚ್ಚಿಯಂತೆ ಆದಳು... “ಎಲ್ಲಿದ್ದಾಳೆ ನನ್ನ ಮಗಳು ಎಲ್ಲಿದ್ದಾಳೆ?” ಎಂದು ಕೂಗುತ್ತ ಎದೆ ಎದೆ ಬಡಿದು ಹಜಾರಕ್ಕೆ ನುಗ್ಗಲು ಯತ್ನಿಸಿದಳು ಆಗ ನಾನು ಅಡ್ಡಗಟ್ಟಿ, “ಹೀಗೆ ರಂಬಾಟ ಮಾಡಿದರೆ, ಜಾನಕಿ ಪ್ರಾಣ ತೆಗೆದುಕೊಳ್ಳುವ ಅಪಾಯವಿದೆ, ಅದರೊಟ್ಟಿಗೆ ಮಾನಾಪಹರಣದ ಸುದ್ದಿಯ ಡಾಣಾಡಂಗುರ ವಾಗುತ್ತದೆ” ಎಂದು ಎಚ್ಚರಿಸಿದೆ. ಆಗಲೂ ಸಾತು ಗೋಳುಗರೆಯುತ್ತ, “ನನಗೆ ದಾರಿ ಬಿಡು, ರುಕ್ಕು, ನನಗೆ ದಾರಿ ಬಿಡು” ಎಂದು ಚಡಪಡಿಸುತ್ತಲೆ ಇದ್ದಳು. ಮುಂದೆ ತುಸು ವೇಳೆಯಲ್ಲಿ ಅಣ್ಣನೂ ಬಂದು, ನನ್ನ ಮಾತನ್ನೆ ಸಮರ್ಥಿಸಿದ್ದರಿಂದ, ಸಾತು ನಮ್ಮಿಂದ ದೂರ ಸರಿದು ಮಂಚದ ಮೇಲೆ ಬಿದ್ದು ಹೊರಳಾಡುತ್ತ ಗೋಳುಗೆರೆಯುತ್ತಲೇ ಇದ್ದಳು. ಅವಳ ಹುಚ್ಚು ಉದ್ವೇಗ ಸಮಾಧಾನ ಸ್ಥಿತಿ ತಲುಪದವವರೆಗೆ ಅವಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ಅಣ್ಣನನ್ನು ಪ್ರಾರ್ಥಿಸಿ, ರುಕ್ಕಿಣಿ ಜಾನಕಿಯ ಕೋಣೆಗೆ ಬಂದಿದ್ದಳು. ಹುಡುಗಿ ಅತ್ತು ಅತ್ತು ದಣಿದು ಪ್ರಜ್ಞೆ ಹೊದವಳಂತೆ ಮಲಗಿದ್ದಳು. ರುಕ್ಕಿಣಿಯು ಅವಳ ಬಳಿಯೇ ಬಹಳ ಕಾಲ ಮೌನವಾಗಿ ಕುಳಿತಿದ್ದಳು. ಇದ್ದಕ್ಕಿದ್ದಂತೆ ಬೆಚ್ಚಿ 'ಅಮ್ಮಾ' ಎಂದು ಕೂಗುತ್ತ ಜಾನಕಿ ಎದ್ದು ಕೂತಳು. ಅವಳನ್ನು ತಬ್ಬಿ ಎದೆಗೆ ಒತ್ತಿದಂತೆ ಆನಿಸಿಕೊಂಡು, “ಹೆದರಬೇಡ, ಜಾನಿ, ಅದದ್ದು ಆಯ್ತು, ಈ ಸುದ್ದಿ ಯಾರಿಗೂ ತಿಳಿಯದ ಹಾಗೆ ನಾನು, ಅಮ್ಮ, ಅಪ, ಶ್ಯಾಮ ಎಲ್ಲರೂ ಜಾಗರೂಕತೆ ವಹಿಸೇವೆ” ಎಂದು ರುಕ್ಕಿಣಿ ಆಶ್ವಾಸನೆ ಕೊಡುತ್ತಿದ್ದರೂ ಆ ಹುಡುಗಿ ಮಂಕು ಕವಿದಂತೆ ಎದಿರು ಗೋಡೆಯಲ್ಲೇ ದೃಷ್ಟಿ ನೆಟ್ಟು ಮೌನವಾಗಿ ಕಣ್ಣೀರು ಸುರಿಸುತ್ತಲೆ ಇದ್ದಳು. ತನ್ನೊಬ್ಬಳಿಂದಲೆ ಅವಳನ್ನು ಸುಧಾರಿಸುವುದು ಸಾಧ್ಯವಾಗದೆಂದು ಮನಗಂಡ ರುಕ್ಕಿಣಿ, ಎದ್ದು ಹೋಗಿ ಅಣ್ಣನನ್ನೂ ಅಷ್ಟರಲ್ಲಿ ಕೊಂಚ ಸಮಾಧಾನಸ್ಥಿತಿಗೆ ಬಂದಿದ್ದ ಸಾತು ಅತ್ತಿಗೆಯನ್ನೂ ಕರೆದು ತಂದಿದ್ದಳು. ಅವರಿಬ್ಬರೂ ಜಾನಕಿಯನ್ನು ಪರಿಪರಿಯಾಗಿ ಸಂತೈಸಿದರು. ನಾನು ಬಿಸಿಬಿಸಿ ಕಾಫಿ ತಯಾರಿಸಿ ತಂದಿತ್ತೆ. ಒಲ್ಲೆ ಒಲ್ಲೆ ಎಂದು ತಲೆಯಾಡಿಸಿದಳು, ನಾವೆಲ್ಲರೂ ಮಹತ್ತಾಗಿ ಪ್ರಯತ್ನ ನೆಡಸಿದ ಬಳಿಕ, ಚಿಕ್ಕಮಕ್ಕಳಂತೆ, ಗುಟುಕು ಗುಟುಕಾಗಿ ಕಾಲು ಲೋಟ ಕುಡಿಯಲು ಅವಳಿಗೆ ಅರ್ಧಗಂಟೆಯೇ ಹಿಡಿಯುತು...