ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೮೭ ಬಗ್ಗೆ ಹೀಗೆ ಅನಾದರ ಬೆಳೆಯಲು ಸಾತುವೂ ಬಹುಮಟ್ಟಿಗೆ ಕಾರಣ ಎಂದರೂ ತಪ್ಪಾಗಲಾರದು... ಒಂದು ದಿನ ಅತ್ತಿಗೆ ತೋಟಕ್ಕೆ ಹೋಗಿದ್ದಾಗ ಆಶ್ವಣ್ಣ ಹೇಳಿದದ್ದ: “ನೋಡು ರುಕ್ಕು, ಯಾವಾಗ ಮಕ್ಕಳೆದುರಿಗೆ ಹೆಂಡತಿಯಾದವಳು ಗಂಡನಿಗೆ ಮರ್ಯಾದೆ ತೋರದೆ ಉದ್ಧಟನದಿಂದ ವರ್ತಿಸುತ್ತಾಳೆ, ಆಗ ಆ ಮಕ್ಕಳೂ ಕೂಡ ಯಾರ ಅಂಕೆ ಅಂಕುಶವಿಲ್ಲದೆ ಬೆಳೆಯಲು ಆರಂಭಿಸುತ್ತವೆ. ಶೇಷನಿಗೆ ಆಗಿರುವುದೂ ಅಷ್ಟೇಯೆ... ಮದುವೆಯಾದ ದಿನದಿಂದಲೂ ಸಾತು ನನ್ನನ್ನು ಹೀನಾಯವಾಗೇ ಕಾಣುತ್ತ ಬಂದಿದ್ದಾಳೆ. ಈಗಲೂ ಮಾತುಮಾತಿಗೂ ನನ್ನನ್ನವಳು ಧಿಕ್ಕರಿಸುವುದನ್ನ ನೀನೂ ಕಂಡೇ ಇದ್ದೀಯೆ. ಆರಂಭದಲ್ಲಿ ಶೇಷ ಏನಾದರೂ ತಪ್ಪು ಮಾಡಿ ನಾನು ಅವನನ್ನು ಗದರಿಸಿದರೆ, “ಅಯ್ಯೋ ಪಾಪ, ನಮ್ಮ ಶೇಷ ಇನ್ನೂ ಚಿಕ್ಕೋನು. ಸಣ್ಣಪುಟ್ಟ ತಪ್ಪನ್ನೆಲ್ಲ ಒಂದು ಭಾರಿ ಪರ್ವತ ಮಾಡಿ, ಕಂದನ ಮನಸ್ಸನ್ನ ನೋಯಿಸಬೇಡಿ” ಎಂದು ಅವನನ್ನ ವಹಿಸಿಕೊಳ್ಳುತ್ತಲೆ ಇದ್ದಳು. ಈ ಪಕ್ಷಪಾತದಿಂದ ತಂದೆಯಾದ ನನ್ನಲ್ಲಿ ಅವನಿಗಿದ್ದ ಭಯ, ಗೌರವ ಎಲ್ಲವೂ ಮಾಯವಾದವು. ತಾನೂ ಏನೇ ಅಪರಾಧವೆಸಗಿದರೂ ತಾಯಿಯ ಬೆಂಬಲ ತನ್ನ ಕಡೆಗಿದೆ ಎನ್ನುವ ಭಾವನೆ ಅವನಲ್ಲಿ ಬಲವಾಗಿ ಬೇರೂರಿತು... ಗಾಡಿ ಚಕ್ರದ ಒಂದು ಕಡಾಣಿ ಕಿತ್ತ ಬಳಿಕ ಇನ್ನೊಂದು ಕಡಾಣಿ ಕಿತ್ತುಬೀಳಲು ಎಷ್ಟು ಕಾಲ ಬೇಕು?- ಶೇಷನಿಗೆ ಯಾವಾಗ ನನ್ನ ಹತೋಟಿ ತಪ್ಪಿ ಸ್ಟೇಚ್ಚೆಯ ರುಚಿ ಕಂಡನೋ ಅಂದಿನಿಂದ ತನ್ನ ತಾಯಿಯ ಹತೋಟಿಯಿಂದಲೂ ತಪ್ಪಿಸಿಕೊಳ್ಳಲು ಹವಣಿಸಿದ. ಊರು ಸೊರೆಹೋದಬಳಿಕ ಕೋಟೆಬಾಗಿಲು ಹಾಕುವ ಯತ್ನ ನಡೆಸಿದಳು ನಿಮ್ಮತ್ತಿಗೆ. ಆಗ ಶೇಷ ಬಗ್ಗುತ್ತಾನೆಯೆ? ಮರದ ಕಾಂಡದೊಳಗೆ ಚೇಗು ಆಗಲೆ ವಿಪರೀತವಾಗಿ ಬೆಳೆದುಹೋಗಿತ್ತು, ತಾಳ್ಮೆಗೆಟ್ಟು ಸಾತು ಮಗನಿಗೆ ಅತ್ಯುಗ್ರ ಶಿಕ್ಷೆಗಳನ್ನೆಲ್ಲ ವಿಧಿಸಿದಳು, ಅನುಭವಿಸಿದಷ್ಟೂ ಅವನಿಗೆ ಈಗ ಜಡ್ಡು ಕಟ್ಟುತ್ತ ಬಂತು. ಕೊನೆಗೆ ಅವಳೇ ಸೋತು ಅವನ ಸ್ವಚ್ಚೆಗೆ ಅವನನ್ನು ಬಿಟ್ಟು ಬಿಟ್ಟಳು... ಬಾಲ್ಯದಲ್ಲಿ ನೀನು ಕಂಡ ಹಾಗೆ ಶೇಷ ವಿಧೇಯನಾಗೇ ಇದ್ದ, ಒಳ್ಳೆಯ ಸ್ವಭಾವದವನೂ ಆಗಿದ್ದ. ಆದರೆ ಈಗ?”- ಎನ್ನುತ್ತಿರುವಂತೆ ದುಃಖ ಒತ್ತಿರಿಸಿ ಬಂದು ವಲ್ಲಿಯ ತುದಿಯಿಂದ ಕಣ್ಣುಗಳನೊರೆಸುತ್ತ, “ಡಿಂಬನಂಥದೆ ಕಥೆಯನ್ನು ಮಾಡಿಟ್ಟಳಲ್ಲ. ಮಹಾತಾಯಿ!...” ಎಂದು ಉದ್ಗರಿಸಿದ. ಒಂದೊಂದು ಮಾತೂ ದ್ವೇಷದಿಂದಲೆ ಹುಟ್ಟಿ ಬಂದಂತಿತ್ತು. ಆದರೆ ಮಾಡುವುದೇನು? ಕಾಲ ಮಿಂಚಿತ್ತು. ಅಲ್ಲದೆ, ಹೆಂಡತಿಯನ್ನು ಮೊದಲಿನಿಂದಲೂ ಹತೋಟಿಮಾಡದೆ,