ಪುಟ:ವೈಶಾಖ.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೮೯ ತಿರುಗಿಯೂ ನೋಡಲ್ಲ... ಅದು ಸರಿ, ಒಟ್ಟಿಗೆ ಹುಗುಳಿಮಣೆ ಆಡುವ ಮಟ್ಟಿಗೆ ನೀವಿಬ್ಬರೂ ಹೇಗೆ ಹೊಂದಿಕೊಂಡಿರಿ?... ಈ ಕಲಿಗಾಲದಲ್ಲಿ ಹುಲಿ, ಗೋವು ಎರಡೂ ತಮ್ಮವೈರ ತ್ಯಜಿಸಿ ಒಂದಾಗುವುದೂ ಉಂಟೆ?- ಈಗ ಮಾತು ನಿನ್ನ ಮೇಲಣ ದ್ವೇಷ ಬಿಟ್ಟಿರೋದು ಗಮನಿಸಿದರೆ, ಅದೂ ಸಂಭವಿಸೋದು ಸಾಧ್ಯ ಅನ್ನೋದರಲ್ಲಿ ನನಗೆ ಯಾವ ಅನುಮಾನವೂ ಉಳಿದಿಲ್ಲಮ್ಮ!” ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದರು... ಆಗೀಗ ಶ್ಯಾಮನೂ ವೀಣೆಯನ್ನು ಇಲ್ಲಿಗೇ ತಂದು ತಲ್ಲೀನತೆಯಿಂದ ನುಡಿಸಿ ನಡೆದುಹೋದ ಸಂಗತಿಯನ್ನು ಕೆಟ್ಟ ಕನಸೊ ಎಂಬಂತೆ ಜಾನಕಿ ಅದನ್ನು ಮರೆಯುವಂತೆ ಮಾಡಲು ಪ್ರಯತ್ನಿಸುತ್ತಿದ್ದ. ಅಂಥ ಸಮಯಗಳಲ್ಲಿ ನಮ್ಮ ಸಾವಿತ್ರಿ ತನ್ನ ಸಂಗೀತದ ದ್ವೇಷವನ್ನು ಲವಲೇಶವೂ ಪ್ರಕಟಿಸಿಸದೆ ತಾನೂ ಮೆಚ್ಚುವೆನೆಂದು ತೋರಲು ಆಗಾಗ ತಲೆದೂಗುತ್ತಿದ್ದುದು ಅಣ್ಣನಿಗೂ ನನಗೂ ಬಲು ಮೋಜಿನ ಸಂಗತಿಯೇ ಆಗಿತ್ತು... ಆದರೆ ದೈವ ಜಾನಕಿಯ ಪರವಾಗಿತ್ತೆಂದೇ ಹೇಳಬೇಕು. ಮಾಮೂಲಿಗಿನ್ನ ಎರಡು ದಿನ ತಡವಾಗಿ ನಮ್ಮೆಲ್ಲರನ್ನೂ ಆತಂಕದಲ್ಲಿ ಕೆಡವಿದರೂ ಜಾನಕಿ ಮುಟ್ಟಾಗಿ ನಮ್ಮೆಲ್ಲರ ಎದೆಯ ಮೇಲಿನ ಭಾರವನ್ನೂ ಇಳುಕಿದ್ದಳು!- ಸಾತು ಸಂಭ್ರಮದಿಂದ ದೇವರ ಕೋಣೆಯ ನಂದಾದೀಪಕ್ಕೆ ಹಸುವಿನ ತುಪ್ಪವನ್ನೇ ಸುರಿದು ದೀಪ ಹಚ್ಚಿದ್ದಳು... ರುದ್ರಪಟ್ಟದಲ್ಲಿ ಆ ದಿನ ರುಕ್ಕಣಿ ಇನ್ನಿಲ್ಲದ ನೆಮ್ಮದಿಯಿಂದ ಕಾವೇರಿ ನದಿಯಲ್ಲಿ ಬಟೆ ಒಗೆಯುತ್ತಿದ್ದಳು. ಪಾಪ ಏನೂ ಅರಿಯದ ಮುಗ್ಧ ಬಾಲೆ ಜಾನಕಿಯು ಭೀಕರವಾದ ದುರಂತದಿಂದ ಪಾರಾದುದು ಅವಳ ನೆಮ್ಮದಿಗೆ ಒಂದು ಕಾರಣವಾದರೆ, ಸಾತು ಅತ್ತಿಗೆ ಹಿಂದಿನಂತೆ ಕುಳಿತರೆ ನಿಂತರೆ ತಪ್ಪು ಹುಡುಕಿ ತನ್ನ ಮೇಲೆ ಹರಿಹಾಯುವುದನ್ನು ನಿಲ್ಲಿಸಿದ್ದುದು ಮತ್ತೊಂದು ಕಾರಣವಾಗಿತ್ತು, ಆದರೆ ಆ ಬಾಲಕಿಗೆ ದುರಂತ ಸಂಭವಿಸಿ, ಅದರಿಂದ ನನಗೆ ನೆಮ್ಮದಿ ದೊರಕಿದ್ದುದು, ರುಕ್ಕಿಣಿಗೆ ಭರಿಸಲಾಗದ ಕಸಿವಿಸಿಯಾಗಿತ್ತು... ಕಾವೇರಿ ತನ್ನ ಅಗಲವಾದ ಪಾತ್ರದಲ್ಲಿ ಗಂಭೀರವಾಗಿ ನೆಮ್ಮದಿಯೆಂಬಂತೆ ಹರಿಯುವುದನ್ನೂ ಅದರ ಮೇಲೆ ದಡದಿಂದ ದಡಕ್ಕೆ ಹರಿದಾಡುವ ಹರಿಗಳನ್ನೂ ರುಕ್ಕಿಣಿ ಬಟ್ಟೆಯೊಗೆಯುತ್ತಲೇ ಗಮನಿಸುತ್ತಿದ್ದಳು. ಆಗ, ಹಿಂದೆ ಜಾನಕಿಯಂತೆ