ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೨ ವೈಶಾಖ ಬಂದರೂ 'ಮನುಸನಿಗೆ ಬರದೆ ಮರಕ್ಕೆ ಬಂದಾತ?' ಎಂದು ತಾಳಿಕೊಳ್ಳುವ ಪ್ರವೃತ್ತಿ, ಇಂಥವನು ಯಾಕೆ ಈ ದಿನ ಅಳುಮೂಂಜಿಯಾಗಿ ಈ ರೀತಿ ಸಪ್ಪೆ ಮೋರೆ ಹಾಕಿ ನಿಂತಿದ್ದಾನೆ?- ಏನಾಗಿರಬಹುದು?... - “ಲಕ್ಕ. ನಿನೊಬ್ಬನೆ ಬಂದೆಯೇನು?” ಅಂದುದಕ್ಕೆ, ಸುಮ್ಮನೆ ಹೌದು ಎನ್ನುವಂತೆ ತಲೆ ಕುಣಿಸಿದ್ದ. - “ನಡೆದೇ ಬಂದಿಯೇನು?” ಅಂತ ಕೇಳಿದಾಗ, “ಗಾಡೀಲಿ ಬಂದೆ” ಎಂದಷ್ಟೇ ಹೇಳಿ ನಿಲ್ಲಿಸಿದ್ದ. ನನಗೆ ಸೋಜಿಗವೆನಿಸಿ, “ಗಾಡಿ ಯಾಕೆ?” ಎಂದೇ. “ನಿಮ್ಮ ಊರಿಗೆ ಕರಂಡೋಗ” ಅಂದಾಗ- ಸ್ನಾನಘಟ್ಟದಲ್ಲಿ ಬಟ್ಟೆ ಒಗೆಯುತ್ತಿದ್ದ, ಪಾತ್ರೆಗಳನ್ನು ಬೆಳಗಿ ಹಿತ್ತಾಲೆ ಮತ್ತು ತಾಮ್ರದ ಬಿಂದಿಗೆಗಳಲ್ಲಿ ನೀರು ತುಂಬುತ್ತಿದ್ದ ಮಹಿಳಾವೃಂದದ ಕಿವಿಗಳು ನೆಟ್ಟಗಾದವು. “ಈಗ- ಅದೇನು ಉರಿಗೆ?”- ಆಶ್ಚರ್ಯಪಡುತ್ತಲೆ ಕೇಳಿದ್ದಕ್ಕೆ. “ಅಟ್ಟಿ ತಾವಿಕೆ ಬನ್ನಿ, ಯೋನಿ” ಅಂದ. ಲಕ್ಕೆ ಪರವಾಗಿಲ್ಲ; ಈಚೀಚೆಗೆ ಪ್ರಾವಿಚಕ್ಷಣೆ ಬಂದಿದೆ ಎಂದುಕೊಳ್ಳತ್ತ ಬಟ್ಟೆಗಳನ್ನು ಹಿಂಡಿ, ಕುಕ್ಕೆಗೆ ತುಂಬಿ, ಅದನ್ನು ಹೊತ್ತು, ಎದ್ದಳು. ಮನೆ ತಲುಪಿದ ತರುವಾಯವೆ ಲಕ್ಕ ಬಾಯಿ ಬಿಚ್ಚಿದ್ದು: ನಮ್ಮ ಸುಶೀಲತ್ತೆ ದರುಮನಹಳ್ಳಿಯ ನಮ್ಮ ತೋಟದ ಕೊಳದ ಹಾಸುಗಲ್ಲಿನ ಮೇಲೆ ನೆನ್ನೆ ಬಟ್ಟೆ ಒಗೆಯುತ್ತಿದ್ದರಂತೆ. ಆಗ ಏನೊ ಅವರ ಕಾಲು ಕಡಿದ ಹಾಗೆ ಆಯ್ತಂತೆ. ಯಾವುದೊ ಹುಳು ಇರಬೇಕು ಅನ್ನಿಸಿ, ಆತ್ತ ಗಮನ ಕೊಡದೆ, ಸರಸಿಯ ಲಂಗಕ್ಕೆ ಸಾಬೂನು ಹಚ್ಚುವುದರಲ್ಲಿ ನಿರತರಾಗಿದ್ದರಂತೆ. ಅಲ್ಲಿ ಸಮೀಪದಲ್ಲೆ ತನ್ನ ಪಾಡಿಗೆ ತಾನು ಆಡುತ್ತಿದ್ದ ಸರಸಿ ಚಿಟ್ಟನೆ ಚೀರಿ, 'ಹಾವುಹಾವು' ಎನ್ನುತ್ತ ತನ್ನ ತಾಯಿಯ ಬಳಿಗೆ ಓಡಬಂದಳಂತೆ... “ಎಲ್ಲೆ ಹಾವು?” ಎಂದು ಸುಶೀಲಕ್ಕೆ ತಿರುಗಿ ನೋಡಿದರಂತೆ ದೂರದಲ್ಲಿ ಬಿಸಿಲಿನ ಝಳಕ್ಕೆ ಮಿರಿಮಿರಿ ಮಿಂಚುವ ಭಾರಿ ಗೋಧಿನಾಗರ ಹಾವು ಹರಿದುಹೋಗುತ್ತಿತ್ತಂತೆ. ತನ್ನ ಕಾಲನ್ನು ನೋಡಿಕೊಂಡಳಂತೆ. ಬಲಗಾಲನಿನ ಕಿರುಬೆರಳಿನಲ್ಲಿ ಗಾಯವಾಗಿ ರಕ್ತ ಸೋರುತ್ತಿತ್ತಂತೆ! ಮನಃ ಕಣ್ಣೆತ್ತಿ ಸರಸರನೆ ನುಲಿನುಲಿದು ಸಾಗುವ ಘಟಸರ್ಪವನ್ನು ಇನ್ನೊಮ್ಮೆ ನೋಡಿದರಂತೆ. ಮತ್ತೆ ಅದರಿಂದ ಕಣ್ಣು ಕಿತ್ತು ರಕ್ತ ಬಸಿಯುತ್ತಿರುವ ಬೆರಳಿನ ಗಾಯದತ್ತ ದೃಷ್ಟಿ ನೆಟ್ಟರಂತೆ. ಆ ಗಳಿಗೆಯಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತಂತೆ!... ಸಮೀಪದ ಅಡಿಕೆಮರಕ್ಕೆ ಒರಗಿಸಿದ್ದ ಬಿದಿರೇಣಿಯಿಮದ ಇಳಿಯುತ್ತಿದ್ದ ಮಾವನವರು, ಸರಸಿ ಕಿರಚಿದಾಗ ಮಾತ್ರ ಆ