ಪುಟ:ವೈಶಾಖ.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೯೩ ಕಡೆ ಗಮನ ಹರಿಸಿದ್ದುದಂತೆ. ಅವರು ಕೆಳಗಿಳಿದು ಧಾವಿಸಿ ಬರುವುದರಲ್ಲಿ ಅವರ ತಂಗಿ ಕುಳಿತು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದರಂತೆ!... ಕೇಳಿ ನನಗೆ ಹೌಹಾರಿದಂತಾಯಿತು. ಸುಳೀಲತ್ತೆ ಎಂಥ ಧೈರ್ಯಗಾತಿ! ಹಾವು-ಎಲ್ಲಿ ಸಿಕ್ಕಲಿ ಅಲ್ಲಿ ಸದೆಬಡಿಯುತ್ತಿದ್ದವಳು!... ಅವಳಿಗೆ ಇಂಥ ಗತಿಯೆ? ಎಂದು ನಾನು ವಿವಶಳಾದೆ... ತಟ್ಟನೆ ಹಿಂದೆ ಸುಶೀಲತೆ ಹಾವನ್ನು ಎದುರಿಸಿದ ಪ್ರಸಂಗವೊಂದು ನೆನಪಾಗಿ ರುಕ್ಕಿಣಿಯ ಮೈ ಜುಮ್ಮೆಂದಿತು: ಒಂದು ರಾತ್ರಿ ದರುಮನಳ್ಳಿಯ ನಮ್ಮ ಮನೆಯಲ್ಲಿ ಎಲ್ಲರಿಗೂ ಊಟ ಮುಗಿದಿತ್ತು. ಸರಸಿಯೊಡನೆ ಮಲಗುವ ಕೋಣೆಗೆ ಕಾಲಿಟ್ಟೆ, ಒಳಗೆ ಸರಸರ, ಭುಸ್ಭುಸ್ ಸದ್ದಾಯಿತು. ದಿಗ್ಟಾಂತಳಾದೆ. ಸರಸಿಯಂತೂ ಕಿಟಾರನೆ ಕಿರಚಿ, ನನ್ನನ್ನು ಬಲವಾಗಿ ತಬ್ಬಿದಳು. ಇಬ್ಬರೂ ಹೊರಕ್ಕೆ ಓಡಿಬಂದು 'ಹಾವು-ಹಾವು!? ಎಂದು ಕೂಗಿದೆವು. ಮಾವಯ್ಯ ಓಡಿ ಬಂದಿದ್ದರು. ಸುಶೀಲತೆ ಲಾಟೀನು ತಂದಿದ್ದರು. ಆ ಬೆಳಕಿನಲ್ಲಿ ಸರ್ಪ ಸ್ಪಷ್ಟವಾಗಿ ಗೋಚರಿಸಿತು. ಎಂದು ಬಾರದ ಸರ್ಪ ಎಷ್ಟು ಒಳಭಾಗದಲ್ಲಿ ಇರುವ ಕೋಣೆಯೊಳಗೆ ಹೇಗೆ ಬಂದಿತು?ಎಂದು ಎಲ್ಲರಿಗೂ ವಿಸ್ತಯ-ಲಾಟೀನಿನ ಬೆಳಕು ಕೋಣೆಯಲ್ಲಿ ಬಿದ್ದಾಗ ಸರ್ಪ ಬಾಗಿಲಿಗೆ ಎದಿರಾಗಿ ಹೆಡೆಯೆತ್ತಿ ಬುಸುಗುಡುತ್ತಿತ್ತು. ಸರ್ಪವನ್ನು ಹೊಡೆಯಬಾರದು ಎಂದು ಮಾವಯ್ಯ. ನಾವು ಸ್ವಲ್ಪ ದೂರ ನಿಂತು ಅವಖಾಸ ಮಾಡಿಕೊಟ್ಟರೆ ಸಾಕು, ಅದು ಹೊರಟುಹೋಗುತ್ತೆ, ಬೇಕಾದರೆ ಕೋಲಿನಿಂದ ತಾನು ಅದನ್ನು ಹೆದರಿಸುತ್ತ, ಬೀದಿಬಾಗಿಲಿನಿಂದ ಅದು ಹೊರಗೆ ಹೋಗುವಂತೆ ಮಾಡೇನೆಎಂಬುದು ಮಾವಯ್ಯನ ವಾದ. ಸುಶೀಲತೆಗೆ ಆ ವಾದ ಹಿಡಿಸಲಿಲ್ಲ. “ಹೋಗಣ್ಣ, ನೀನೂ ಸರಿ. ಮಂತ್ರಿಸಿದರೆ ಮಾವಿನಕಾಯಿ ಉದುರುತ್ತೆ? ನೀನು ಅದನ್ನ ಓಡಿಸ್ತೀನಿ ಎಂದು ಹೋಗಿ, ಅದು ಉಗ್ರವಾಗಿ ನಿನ್ನ ಮೇಲೇ ತಿರುಗಿಬಿದ್ದು ನಿನ್ನನ್ನೆ ಕಚ್ಚಿಬಿಟ್ಟರೆ?- ಆಗೇನು ಮಾಡೋದು?... ಅದೆಲ್ಲ ಆಗಲ್ಲ. ಆ ಕೋಲು ತಾ ಇಲ್ಲಿ!” ಎಂದು ಸುಶೀಲತೆ ಅಣ್ಣನಿಂದ ಕೋಲು ಪಡೆದು, ತನ್ನ ಕೈಲಿದ್ದ ಲಾಟೀನನ್ನು ಮಾವಯ್ಯನ ಕೈಗಿತ್ತು, “ಲ್ಯಾಟೀನಿನ ಬೆಳಕನ್ನು ಇನ್ನೂ ದೊಡ್ಡದು ಮಾಡಣ್ಣ” ಎಂದು ಸೂಚಿಸಿದಳು... - ಸರಸಿ, ನಾನು ಇಬ್ಬರೂ ಹೆದರಿ ಹಜಾರದ ಒಂದು ಮೂಲೆಗೆ ಹೋಗಿ ನಿಂತೆವು..ಕೈಯಲ್ಲಿ ಕೋಲು ಹಿಡಿದು ಸುಶೀಲತೆ, ಸರ್ಪ ಕೋಣೆಯ ಹೊರಗೆ ಬರುವುದನ್ನೇ ಕಾಯುತ್ತ ನಿಂತಿದ್ದಳು. ಲಾಟೀನಿನ ಬೆಳಕನ್ನು ದೊಡ್ಡದು ಮಾಡಿ, ಕೋಣೆಯೊಳಗೆ ಪ್ರಕಾಶ ಬೀಳುವಂತೆ ಮಾಡುವ ನಿರ್ವಾಹವಿಲ್ಲದ ಕೆಲಸ