ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

xiii ಅರಿಕೆ ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ನಾನು ಕಾದಂಬರಿ ಬರೆಯದಿದ್ದರೂ ಕಾದಂಬರಿಯೊಂದು ನನ್ನೊಳಗೇ ಮೈ ಮುರಿದೇಳುತ್ತಿರುವ ಅನುಭವ ಕಳೆದ ಕೆಲವು ವರ್ಷಗಳಿಂದ ಆಗುತ್ತಲೇ ಇತ್ತು. ನನ್ನ ಬದುಕಿನಲ್ಲಿ ಎದುರಾದ ಸಮಸ್ಯೆಗಳು ಕಾರಣವೊ, ಪಟ್ಟು ಹಿಡಿದು ಬರೆಯಲು ಕುಳಿತುಕೊಳ್ಳಲಾಗದ ನನ್ನ ಆಲಸ್ಯ ಕಾರಣವೊ, ಅಥವಾ ನನ್ನಲ್ಲಿ ಕುದಿಯುತ್ತಿದ್ದ ಅನುಭವ ಇನ್ನೂ ಅಭಿವ್ಯಕ್ತಿಗಾಗಿ ನನ್ನನ್ನು ಒಳಗಿನಿಂದ ಒತ್ತಾಯಿಸುತ್ತಿದೆ ಎಂದು ನನಗೆ ಅನ್ನಿಸದೆ ಇದ್ದುದರಿಂದಲೂ ಅಥವ ಈ ಎಲ್ಲ ಕಾರಣಗಳಿಂದಾಗಿಯೊ ಈ ಕಾದಂಬರಿ ಇಷ್ಟು ಕಾಲದವರೆಗೆ ಸತಾಯಿಸಿ, ಇನ್ನು ಮೇಲೆ ಸುಮ್ಮನಿರಲಾರೆ ಎನ್ನಿಸುವಂತೆ ಮಾಡಿ ನನ್ನಿಂದ ಇದೀಗ ಬರೆಸಿಕೊಂಡಿದೆ. ಈ ಬರೆಯುವ ಪ್ರಕ್ರಿಯೆಯಲ್ಲಿ ನೋವು, ನಲಿವು-ನೋವಿನಿಂದ ಕೂಡಿದ ನಲಿವು, ಎಲ್ಲವನ್ನೂ ಅನುಭವಿಸಿದ್ದೇನೆ. ನನ್ನ ಒಳಗನ್ನು ತೋಡಿಕೊಳ್ಳುತ್ತಿರುವೆ ಎನ್ನುವ ತೃಪ್ತಿಯ ಜೊತೆಜೊತೆಗೇ ಈವರೆಗೆ ಗುರುತಿಸಿಕೊಂಡಿರದೆ ಇದ್ದುದನ್ನು ಹಠಾತ್ತನೆ ಕಂಡಂತಾಗಿ ಚಕಿತಗೊಂಡಿದ್ದೇನೆ. ಈ ರೀತಿಯಲ್ಲಿ ಪಡೆದ ಸಂತೋಷ ಒಂದು ಅನನ್ಯವಾದ ಬಿಡುಗಡೆಯ ಭಾವನೆಯನ್ನು ನನಗೆ ತಂದುಕೊಟ್ಟಿದೆ. ಯಾವಯಾವುದೋ ಪಾತ್ರ, ಯಾವ ಯಾವುದೋ ಸನ್ನವೇಶಗಳ ಚಿತ್ರಣ ಇಲ್ಲಿದೆಯಾದರೂ ಇಡಿಯಾಗಿ ನೋಡಿದಾಗ ನನ್ನನ್ನು ನಾನೇ ಇಲ್ಲಿ ಕಂಡುಕೊಳ್ಳುತ್ತಿದ್ದೇನೆ ಎಂದು ನನಗೆ ಅನಿಸಿದ್ದುಂಟು. ಬರಹಗಾರನಾದ ನನಗೆ ಇದಕ್ಕಿಂತ ಮಿಗಿಲಾದ ಆತ್ಮ ಸುಖ ಬೇರೆ ಏನೂ ಕಾಣದು. ಈ ಕಾದಂಬರಿಯಲ್ಲಿ ಬಂದ ಪಾತ್ರಗಳು, ಸನ್ನಿವೇಶಗಳು ನಾನು ಎಲ್ಲೋ, ಯಾವಾಗಲೋ ಕಂಡವು; ಹೇಗೊ, ಏಕೊ ಅನುಭವಿಸಿದವು. ಅವೆಲ್ಲ ಒಂದು ಬಂಧನದಲ್ಲಿ, ಒಂದು ಅರ್ಥವಂತಿಕೆಯಲ್ಲಿ ಕಾಣಿಸಿಕೊಂಡು ನನ್ನನ್ನು ಮುದಗೊಳಿಸುತ್ತಿರುವ ಬಗೆ ನನಗೆ ವಿಸ್ಮಯವನ್ನುಂಟು ಮಾಡಿದೆ. ಬದುಕಿನ ನೋವು-ನಲಿವುಗಳ ಆ ಮುಖ-ಈ ಮುಖಗಳಿಗೆ ನಾನೆಂದೂ ಋಣಿಯಾಗಿದ್ದೇನೆ. ನಾನು ಪಡೆದ ಅನುಭವದ ಒಂದಂಶವಾದರೂ ಓದುಗರಿಗೆ ಆತ್ಮೀಯವೆಂಬಂತೆ ಆಗುವುದಾದರೆ ಈ ಕೃತಿ ಸಾರ್ಥಕವೆಂದು ಭಾವಿಸುತ್ತೇನೆ. ನನ್ನ ಸುದೈವದಿಂದ ನನಗೆ ಸಹೃದಯ ಮಿತ್ರರ ಕೊರತೆಯಿಲ್ಲ. ನಾನು ಕಾದಂಬರಿ ಬರೆದಾದಬಳಿಕ ತುಂಬ ಪ್ರೀತಿಯಿಂದ, ಅದೊಂದು ಶ್ರಮವೆಂದು ಭಾವಿಸದೆ ಓದಿ, ತಮ್ಮ ಅನಿಸಿಕೆಗಳನ್ನು ಆತ್ಮೀಯತೆಯಿಂದ ಹಂಚಿಕೊಂಡ, ಆ