ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೈಶಾಖ ಸಕೇಶಿಯನ್ನಾಗಿ ಮಾವ ತನ್ನನ್ನುಳಿಸಿದಾಗ, ಅದೇ ಬ್ರಾಹ್ಮಣಸಮಾಜ ಹಾರಾಡಿದ್ದೆಷ್ಟು! ಬಹಿಷ್ಕಾರ ಹಾಕಿದ್ದೆಷ್ಟು!... ಕಾಲ ಎಲ್ಲವನ್ನೂ ಮರೆಸುತ್ತದೆ. ಅಲ್ಲದೆ, ಸಾವಿನ ಮುಂದೆ ಎಂಥ ಚಿಲ್ಲರೆ ಮನಸ್ತಾಪಗಳೂ ಕರಗಲೇಬೇಕಲ್ಲ!... - ಅಂತೂ ಕಡೆಗೆ ಸಮೀಪದ ಹಳ್ಳಿಗಳಲ್ಲಿ ವಾಸಿಸುವ ನೆಂಟರಿಷ್ಟರನ್ನು ಕರೆಸಲು ಮಾತ್ರ ಸಾಧ್ಯವಾಗಿತ್ತಂತೆ ಮಾವನವರಿಗೂ ಆ ಬ್ರಾಹ್ಮಣರ ವಾದ ಸೂಕ್ತವಾಗಿ ಕಂಡಿದ್ದರಿಂದಲೊ, ಸತ್ತ ಹೆಣದ ಮುಂದೆ ಈ ಜನರ ಕೂಡೆ ವೃಥಾ ಯಾಕೆ ವಾಗ್ವಾದ ಎನ್ನಿಸಿದ್ದರಿಂದಲೋ, “ನಿಮಿಷ ಪ್ರಕಾರವೆ ಕಾರ್ಯ ನಡೆಸಿ” ಎಂದು ಒಪ್ಪಿದ್ದರಂತೆ. ಗಂಡನ ಮನೆಯವರು ಬಾರದೆ ಹೋದುದರಿಂದ ಮಾವಯ್ಯನೆ ಕರ್ತೃವಾಗಿ ನಿಲ್ಲಬೇಕಾಯಿತಂತೆ! ಇಷ್ಟು ತಿಳಿಸಿ, “ತಾಯಿ ಕಳಕಂಡ ಆ ನಿಮ್ಮ ಸರಸಮ್ಮ ಗೋಳಂತೂ ಯೋಳೋ ಅಂಗೇ ಇಲ್ಲ. ಕಣ್ಣ ಗುಡ್ಡೆ ಕಳಚಿ ಬಿದ್ದೋಗೊ ಮಟ್ಟಿಗೆ ಆ ಪಾಯಿ ಸೋಕಮಾಡ್ತಿತ್ತು. ನನ್ನ ವಂದ್ದೇ ಬತ್ತೀನಿ ಅಂತಾವ ನ್ಯಾತು ಆಕಂಡಿತ್ತು. ಆಗ ನಿಮ್ಮ ಕರಕಂಬರಕ್ಕೆ ವೊಂಟಿ, ಅಂಗೆ ಇಂಗೇಂತ ಆ ಮೊಗಾವ ಸಂಜಾಯಿ ಮಾಡಿ ಅಲ್ಲೆ ಉಳುಸಿಕಳಾಕೆ ಅಯ್ಯಾರ ಪಟ್ಟ ಪಾಡು ಬ್ಯಾಡಿ, ಬ್ಯಾಡಿ- ಎಕ್ಕಾಸಿ ಆಗೋಯ್ತು ... ಆ ಎಂಕಣ್ಣ ದೋಯಿ ಎಣ್ಣುಗೋಳು ಸಾಸಮಾಡಿ ಎಂಗೊ ತಮ್ಮಟ್ಟಿಗೆ ಕರಕಂಡೋಗಿ ಕೂಡಕಂಡೊ... ರುಕ್ಕಿಣಿಯ ಸಂಗಡಲೆ ಕುಳಿತು ಲಕ್ಕನ ಮಾತನ್ನು ಸವಿಸ್ತಾರವಾಗಿ ಆಲಿಸಿದ ಅಣ್ಣನೂ ಅತ್ತಿಗೆಯೂ, - “ಈಗ ನಮ್ಮ ಮನೆಯಲ್ಲಿ ಅಸಂದರ್ಭ. ನಮ್ಮ ಜಾನಕಿಯ ಮೈಯಲ್ಲಿ ಅಷ್ಟು ಹರ್ಷ ಇಲ್ಲ. ಈಗ ನೀನು ನಿಮ್ಮ ರುಕ್ಕಿಣಮ್ಮನವರನ್ನು ಕರೆದುಕೊಂಡು ಹೋಗಿ ಬಿಡು. ಅಷ್ಟರಲ್ಲಿ ನಮ್ಮ ಜಾನಕಿ ಚೇತರಿಸಿದರೆ, ನಾವಿಬ್ಬರೂ ವೈಕುಂಠದ ಸಮಯಕ್ಕೆ ಬತ್ತಾರೆ ಎಂದು ಕೃಷ್ಣಶಾಸ್ತ್ರಿಗಳಿಗೆ ತಿಳಿಸಪ್ಪ” ಎಂದು ಹೇಳಿದರು. ಲಕ್ಕೆ ಒಪ್ಪಲಿಲ್ಲ. “ಈಟೊತ್ನಲ್ಲಿ ಒಂಟಿಗಾಡಿ ವೊಂಟರೆ ಅಪಾಯ ಕಾದಿಟ್ಟದ್ದೇಯ. ನಮ್ಮ ಸುತ್ತಿನಂಗಲ್ಲ. ನಮ್ಮ ಕಡೆ ಒಬ್ಬರಿಬ್ಬರು ಎಂಗಸರೆ ಕಾಡಲ್ಲಿ ಓಡಾಡಿದ್ರೂವೆ ಅವ್ರ ಮಂಡೆ ಕೂಯ್ದು ಚುಳ್ ಅನ್ನಕ್ಕಿಲ್ಲ... ಅದರಾಗೂ ನಾವು ವೋಗಬೇಕಾಗಿರೊ ಹಾದೀಲಿ ಕಾಟಗರ ಕಾಟ ಇಪರೀತ. ನಾನೂವೆ ನಮ್ಮೂರಿಂದ ಸಂದೆ ದನಿಗೆ ಗಾಡಿ ಕಟ್ಟೋನು, ಬ್ಯಾಲಾಳಲ್ಲಿ ರಾತ್ರಿ ತಂಗಿದ್ದು, ಅಲ್ಲಿಂದ ಕೋಳಿ ಕೂಗಕ್ಕೂ ಮುಂಬೈ ಇದ್ದು ಇಲ್ಲಿ ಬರಕ್ಕೆ ಮದ್ದಿನವೊ ಆಯ್ತು. ಇನ್ನು ಒಂಟಿಗಾಡಿ ಅಟ್ಠಂಡು, ರುಕ್ಕಿಣದ್ವಾರ ವಬ್ಬರೆ ಗಾಡ್ಯಾಗೆ ಕುಂದರಿಗಂಡು, ನಾನಂತೂ ವೋಗಕ್ಕೆ ತಯ್ಯಾರಿಲ್ಲ.