ಪುಟ:ವೈಶಾಖ.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೨ ವೈಶಾಖ ತಲಪೋವೊತ್ತಿಗೆ ಸರಿನಾತ್ತೇನೆ ಆಯ್ತದೆ. ಆಮ್ಯಾಕೆ ಕಳ್ಳಕಾಕರು ಮ್ಯಾಲೆ ಬಿದ್ದು ಎಚ್ಚುಕಮ್ಮಿ ಆದರೆ ನನ್ನ ತಪ್ಪಿಲ್ಲ” ಅನ್ನುತ್ತಲೂ ಸಾವಿತ್ರ ದಡಬಡನೆ ಎದ್ದಿದ್ದಳು... ಎತ್ತಿನ ಗಾಡಿಯು ಪುನಃ ಚಲಿಸಲು ಆರಂಭಿಸಿತು. ರುದ್ರಪಟ್ಟಣದಿಂದ ಹೊರಟಾಗಿನಿಂದಲೂ ದೂರದಲ್ಲಿ ಕಾಣುತ್ತಿದ್ದ ಸಿಡಿಲು ಮಲ್ಲಿಕಾರ್ಜುನ ಬೆಟ್ಟ, ಬೆಟ್ಟದಮರವನ್ನು ಸಮೀಪಿಸಿದಂತೆ ಹತ್ತಿರ ಹತ್ತಿರವಾಗುತ್ತಿದ್ದು, ಬೆಟ್ಟದಪುರಕ್ಕೆ ಬಂದ ಕೂಡಲೇ ಎದಿರಿಗೇ ನಿಂತ ಅದರ ಎತ್ತರ ಕಂಡು ಎಲ್ಲರೂ ಬೆರಗಾದರು. ಹಿಂದೆ ಅದನ್ನು ರುಕ್ಕಿಣಿ ನೋಡಿರಲಿಲ್ಲವೆಂದಲ್ಲ. ತಾನು ತೌರಿಗೂ ಗಂಡನ ಮನೆಗೂ ಹೋಗಿ ಬರುತ್ತ ಈ ಬೆಟ್ಟವನ್ನು ಕೆಲವು ಸಲ ನೋಡಿದ್ದಳು. ಆದರೂ ನೋಡಿದಾಗಲೆಲ್ಲ ಈ ಬೆಟ್ಟವನ್ನು ಇದೀಗ ಹೊಸದಾಗಿ ನೊಡಿದಂತೆಯೇ ಅನ್ನಿಸುವುದಲ್ಲ, ಯಾಕೆ ಹೀಗೆ?- ಎಂದು ರುಕ್ಕಿಣಿಗೆ ಕೌತುಕ. ಮೈಸೂರಿನ ಚಾಮುಂಡಿಬೆಟ್ಟಕ್ಕೆ ಎರಡರಷ್ಟು ಎತ್ತರವಿರುವ ಆ ಬೆಟ್ಟವನ್ನು ಬಳಸಿ, ಲಕ್ಕ ಬೆಟ್ಟದ ಪಕ್ಕದಲ್ಲೆ ಬಾರಸೆಯ ಕಡೆಗೆ ಗಾಡಿಯನ್ನು ದೌಡಾಯಿಸಿದ. ಈ ಬಾರಸೆ ಮಠದ ಮಂಟಿಗಳನ್ನು ದಾಟಿ, ಆಯಿಚನ ಹಳ್ಳಿ, ರಾಮನಾಥ ತುಂಗಗಳು ಒಂದಾದಂತೆ ಮಲ್ಲಿಕಾರ್ಜುನ ಬೆಟ್ಟವೂ ದೂರು ಸರಿಯಿತು. ಸೂರ್ಯಾಸ್ತವಾಗಿ ಅಸವಾಳು ಸಮೀಪಿಸುತ್ತಿದ್ದಂತೆ, ಲಕ್ಕ ಗಾಡಿ ನಿಲ್ಲಿಸಿ, ಅದರ ಕೆಳಗಡೆ ಹಿಂದೆ ಮತ್ತು ಮುಂದೆ ತೂಗಿ ಹಾಕಿದ್ದ ಲಾಟೀಗಳನ್ನು ಹೊತ್ತಿಸಿದ್ದ. “ಮಬ್ಬುಬೆಳಕು ಇನ್ನೂ ಇದೆ. ಈಗಲೆ ಯಾಕೆ ಲಾಟೀನು ಹಚ್ಚಿದೆಯೊ, ಲಕ್ಕ?” ಸಾವಿತ್ರಿ ಕೇಳಿದ್ದಳು “ಅಸವಾಳು ಇನ್ನೇನು ಬಂದುಬುತ್ತದೆ. ಒಂದು ಅರ್ಧಗಂಟೆ ಪಯಣ. ಆ ತಾವೆ ಕಳ್ಳರ ಕಾಟ ಎಚ್ಚು, ಅದ್ರೆ ನಾನು ಚೆಂದಾಕಿ ಬೆಳುಕಿರಾವಾಗ್ಗೆ ಆ ಈಚಲುಗುತ್ತಿ ದಾಟಾವ ಅಂತ ಮಾಡ್ಕಂಡಿದ್ದದ್ದು. ಆದ್ರೆ ನೀವು ಕಜೆ ಆಡ್ಕಂಡು ವೊಂಡೊದ ತಡ ಮಾಡಿದಿರಿ, ವೋಗ್ಲಿ ಅಂದರೆ ಬೆಟ್ಟದಪುರ ತೋಪಿನಾಗೂವೆ ಮಂಟಾಡಿಕಂಡೇ ಕುಂತಿದ್ರೆ... ಉಂ, ಈಗೇನ ಮಾಡಕ್ಕಾದಾತು?- ದ್ಯಾವರ ಮೇಲೆ ಭಾರ ಆಕಾದು, ವೋಟೆಯ.” ಬೇಸರದಿಂದ ನುಡಿದು, ಎತ್ತುಗಳನ್ನು ಲಕ್ಕ ಉಚಾಯಿಸಿದ್ದ... ಈಚಲುಗುತ್ತಿ, ಕಳ್ಳರು ಎಂದೊಡನೆಯೇ, ಎಲ್ಲರ ಬಾಯಿಗಳಿಗೂ ಬೀಗ ಬಿದ್ದಿತ್ತು. ಒಂಟಿಗಾಡಿಯ ಚಕ್ರಗಳು ಆ ನುರುಜುಗಲ್ಲಿನ ಹಾದಿಯಲ್ಲಿ ಉರುಳುವಾಗ ಎಬ್ಬಿಸುತ್ತಿದ್ದ ಗಡಲ್ ಗಡಕ್ ಶಬ್ದವನ್ನುಳಿದು ಗಾಡಿಯೊಳಗೆ ಮೃತ್ಯಮೌನ ಹೊರಗೆ ಹಕ್ಕಿಗಳು ಗುಂಪುಗುಂಪಾಗಿ ರಸ್ತೆಯ ಇಕ್ಕೆಲದ ಸಾಲುಮರಗಳ ತಮ್ಮ ತಮ್ಮ