ಪುಟ:ವೈಶಾಖ.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೦೫ “ದೇವರೇ ನಿಮ್ಮನ್ನು ಈ ಹೊತ್ತಿನಲ್ಲಿ ಇಲ್ಲಿಗೆ ಕರೆದು ತಂದ. ನೀವು ಬಂದ್ದರಿಂದ ಒಂದು ಗಂಡಾಂತರದಿಂದ ನಾವು ಪಾರಾದೆವು. ನಿಮಗೆ ನಾವು ಸರ್ವದಾ ಋಣಿಗಳು” ಎಂದು ಕೃತಜ್ಞತೆಯ ಮಾತುಗಳನ್ನಾಡಿದ್ದ. “ಇನ್ನು ಮುಂದೆ ಹಾದಿ ಸುಗಮ. ನಿರಾತಂಕದಿಂದ ನೀವು ಮುಂದಿನ ಪಯಣ ಬೆಳುಸಬೌದು” ಎಂದು ಆಶ್ವಾಸನೆ ನೀಡಿ, ಅವರೆಲ್ಲರೂ ತಮ್ಮ ತಮ್ಮ ಗಾಡಿಗಳನ್ನೇರಿ ಬೆಟ್ಟದಪುರದತ್ತ ಸಾಗಿದರು... ನಮ್ಮ ಗಾಡಿಯ ಆ ಜಾಗವನ್ನು ಬಿಟ್ಟು ಕದಲಿದಂತೆ, ನಾವು ಸರಾಗವಾಗಿ ಉಸಿರಾಡುವಂತೆ ಆಯಿತು. ದೊಡ್ಡ ಬೇಲಾಳಿಗೆ ಬರುವವರೆಗೂ ಇದೇ ಸುದ್ದಿ ಅವರೆಲ್ಲರ ಮಾತಿಗೆ ಗ್ರಾಸ ಒದಗಿಸಿತ್ತು. ಬೇಲಾಳು ಮುಟ್ಟಿದಂತೆ, ಅಶ್ವತ್ಥನಿಗೆ ಹೊಟ್ಟೆಯ ಕಡೆ ಗಮನ ಹರಿಯಿತು. “ಅದೆಲ್ಲ ಸರಿಯೆ. ದೇವರು ಹೇಗೂ ಪಾರು ಮಾಡಿದನಲ್ಲ. ಆ ವಿಷಯ ಎಷ್ಟು ಸಮಯ ಮಾತಾಡಿದರೂ ಅಷ್ಟೆ, ಈಗ ನನಗೆ ವಿಪರೀತ ಹಸಿವು, ನೀನು ತಂದಿರುವ ರವೆಉಂಡೆ, ಕೋಡುಬಳೆಗಳನ್ನ ಹೊರಕ್ಕೆ ತೆಗೆಯೆ, ಸಾತು” ಎಂದು. ಅವನ ಇಚ್ಛೆಯಂತೆ ಸಾವಿತ್ರಿ ರವೆ ಉಂಡೆ, ಕೋಡುಬಳೆಗಳ ಸಂತರ್ಪಣೆಯನ್ನು ಅವರಿಗೆಲ್ಲರಿಗೂ ನಡೆಸಿದಳು. ಅದರಲ್ಲಿ ಬಹುಭಾಗ ವಿನಿಯೋಗವಾದದ್ದು ಅಶ್ವತ್ಥನಿಗೆ!... ಬೇಲಾಳನ್ನು ದಾಟಿ ಎತ್ತಿನಗಾಡಿಯು ಮುಂದುವರಿದಂತೆ, ಗಾಡಿಯ ಗಡಲ್ ಗಡಕ್ ಜೋಗುಳಕ್ಕೆ ರುಕ್ಕಿಣಿಗೆ ಮಂಪರ ಬಂದಂತಾಗಿ ಎಂದೋ ಮುಳುಗಿ ತಳ ಸೇರಿದ್ದ ಸಂಗತಿಗಳು ಮೇಲೆರಿ ಬರತೊಡಗಿದ್ದವು: ತನ್ನ ಪತಿ ಗತಿಸಿ ಹದಿನೈದು ಹದಿನಾರು ದಿನಗಳಾಗಿರಬೇಕು. ದುಃಖದ ಆವೇಗದಲ್ಲಿ ತಾನೆಲ್ಲಾದರೂ ಪ್ರಾಣಹರಣ ಮಾಡಿಕೊಳ್ಳಬಹುದೆಂದು ಅಲ್ಲಿಯವರೆಗೆ ಹಗಲಿರುಳು ಎಚ್ಚರವಹಿಸಿದ್ದ ಮಾವಯ್ಯ ಮತ್ತು ಸುಶೀಲತ್ತೆ ಇಬ್ಬರೂ-ತಾನು ತೋರಿಕೆಗೆ ಶಾಂತಳಾಗಿ ಕಾಣುತ್ತಿದ್ದುದರಿಂದ, ಮೋಸಹೋಗಿದ್ದರು. ಆದರೆ ತನ್ನೆದೆಯೊಳಗೆ ಒಂದು ಅಗ್ನಿಕುಂಡವೆ ಉರಿಯುತ್ತಿತ್ತು... ಅವರು ಎಂತಹ ವ್ಯಕ್ತಿ! -ಲೋವರ್ ಸೆಕೆಂಡರಿವರೆಗೆ ಓದಿದ್ದ ತನ್ನಿಂದ ಕನ್ನಡ ಕಾವ್ಯಗಳನ್ನು ಓದಿಸಿ, ಅರ್ಥ ಹೇಳಿಕೊಟ್ಟು, ತನ್ನ ವಿದ್ಯಾಭ್ಯಾಸವನ್ನು ಹೆಚ್ಚಿಸಿದ್ದರು. ಜೊತೆಗೆ ಸಂಸ್ಕೃತ ಕಾವ್ಯನಾಟಕಗಳನ್ನು ಓದಿ ವಿವರಿಸಿ ತನ್ನ ಸಂಸ್ಕೃತಿಯನ್ನು ವರ್ಧಿಸಿದ್ದರು. ಇದು ಎಲ್ಲಕ್ಕೂ ಮಿಗಿಲಾಗಿ ಅವರ ಒಂದೊಂದು ನಡೆನುಡಿಯಲ್ಲೂ ರಸಿಕತೆ ತುಂಬಿರುತ್ತಿತ್ತು. ಅವರ ಸಂಗಡ ಕಳೆದ ಒಂದೊಂದು ಕ್ಷಣವೂ ಒಂದೊಂದು