ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೦೭ ಅಂದಾಜಿನಲ್ಲಿ ಹೆಜ್ಜೆಯಿಡುತ್ತಿದ್ದಳು..... ಏನದು ಸದ್ದು?- ಅತಿ ದೂರದಿಂದೇನಲ್ಲ !.... ನಮ್ಮ ಕೇರಿಯಿಂದ ಕೊಂಚ ಆಚೆಗಿರಬೇಕು... ಈಗ ಸಸ್ಪವಾಗುತ್ತಿದೆ- ಇದು ನಾಯಿ ಬೊಗಳುವ ಸದ್ದೆ!... ಮನಃ ನಿಂತಳು, ನಿಂತು ಕಿವಿಗೊಟ್ಟಳು-ಸಂಶಯವೆ ಬೇಡ, ಇದು ಲಕ್ಕನ ನಾಯಿ ಬೊಡ್ಡನೆ!... ಹಾಗಾದರೆ ಅದರ ಹಿಂದೆ ಲಕ್ಕೆ ಬರುತ್ತಿರಬೇಕು..... ಅರ್ಥವಾಯಿತು-ಅವನ ದೊಡ್ಡಪ್ಪ ಕುಂದೂರಯ್ಯ ತಾನೆ ಊರಿನ ಕುಳವಾಡಿ. ಅವನ ಒಬ್ಬನೇ ಮಗ ಪುಟ್ಟಾರಿಗೆ ಈ ಕುಳವಾಡಿ ಕೆಲಸದಲ್ಲಿ ಆಸಕ್ತಿಯೇ ಇರಲಿಲ್ಲ. ಅನೇಕ ವೇಳೆ ಕುಂದೂರಯ್ಯನಿಗೆ ಹುಶಾರು ತಪ್ಪಿದರೆ, ಅಥವಾ ಅಸಂದರ್ಭ ಆದರೆ, ಆ ಕೆಲಸ ಲಕ್ಕನಿಗೇ ಗಂಟು ಬೀಳುತ್ತಿದ್ದುದು ತನಗೆ ತಿಳಿದಿಲ್ಲವೆ?... ಹಾಗಾದರೆ ಇದು ಲಕ್ಕನೆ!- ಸಂದೇಹವೇ ಇಲ್ಲ.... ಅಯ್ಯೋ, ಲಕ್ಕ ಬಂದುಬಿಟ್ಟರೆ?- ಆಗ ತನ್ನ ನಿರ್ಧಾರಕ್ಕೆ ಅವನು ಅಡ್ಡಿ ಮಾಡುವುದಂತೂ ಶತಸಿದ್ದ.... ಇನ್ನು ತಡಮಾಡಬಾರದು.... ನಡಿಗೆಯನ್ನು ತೂರೆಗೊಳಿಸಿದಳು. ಬ್ರಾಹ್ಮಣರ ಕೇರಿಯ ತಿರುವಿನಲ್ಲಿ ಬೆಳಕು ಚೆಲ್ಲಿ, ಆ ಬೆಳಿನಲ್ಲಿ ಬೊಡ್ಡನ ಆಕೃತಿಯು ಸ್ಪಷ್ಟವಾಗತೊಡಗಿತು. ಹಿಂದೆಮುಂದಾಡುವ ಲಾಟೀನಿನ ಬೆಳಕು ನಮ್ಮ ಬೀದಿಗೆ ತಿರುಗಿ, ತನ್ನತ್ತಲೆ ಹರಿದು ಬರುತ್ತಿರುವಂತೆ ಕಂಡಿತು. ಆ ಬೆಳಕಿನ ಹಿಂದೆ ನಿಸ್ಸಂಶವಾಗಿ ಲಕ್ಕ ಇದ್ದಿರಬೇಕು.... ಮುಂದೇನು ಗತಿ? ಎಂದು ಚಿತ್ತಕೋಭೆಗೊಳಗಾಯಿತು... ನಡಿಗೆ ಓಟಕ್ಕಿಟ್ಟಿತು... ಬೊಡ್ಡ ಬೊಗಳಲು ಶುರು ಹೆಚ್ಚಿತು. ಲಕ್ಕನಿಗೆ ಸಂದೇಹವಾಗಿರಲೇಬೇಕು. “ಯಾರು-ಯಾರದು?” ಕೂಗುತ್ತ, ಅವನೂ ಓಡುತ್ತಲೆ ಬಂದ... ತಾನೂ ಓಡಿದ್ದಳು. ಲಕ್ಕನಿಗಿನ್ನ ಮುಂದೆ ಬಂದ ಬೊಡ್ಡ ಇನ್ನೇನು ತನ್ನನ್ನು ಮುಟ್ಟಬೇಕು ಎನ್ನುವಷ್ಟರಲ್ಲಿ ತನಗೆ ಬಾವಿ ಸಿಕ್ಕಿತ್ತು. ತಾನು ಬಾವಿಕಟ್ಟೆಯನ್ನೇರಿ ನಿಂತಂತೆ, ಲಕ್ಕನೂ ಓಡಿಬರುತ್ತ, ತನ್ನನ್ನು ಗುರುತಿಸಿ “ಓ, ರುಕ್ಕಿಣವೆ?... ನೀವು... ಇದ್ಯಾಕೆ?... ಬ್ಯಾಡಿ... ಬ್ಯಾಡಿ” ಕೂಗುತ್ತಲೇ ಇದ್ದ. ಅವನ ಧ್ವನಿ ಸಮೀಪವಾಗುತ್ತಿದ್ದದಷ್ಟೆ ತನಗೆ ನೆನಪು. ತಾನು ಬಾವಿಯೊಳಕ್ಕೆ ಹರಿ ಬಿಟ್ಟಿದ್ದಳು... ಮುಂದೆ ನಡೆದುದ್ದನ್ನು ಲಕ್ಕನೇ ತನಗೆ ವಿವರಿಸಿದ್ದ: ನಾಯಿ ಬೊಗಳಿದಾಗ ಮೊದಮೊದಲು ಯಾರೋ ಕಳ್ಳ ಊರಿನಲ್ಲಿ ಠಳಾಯಿಸುತ್ತಿರಬೇಕು. ಅನ್ನಿಸಿತಂತೆ. ಹತ್ತಿರ ಬಂದಂತೆ ಸೀರೆಯುಟ್ಟ ಹೆಂಗಸಿನ