ಪುಟ:ವೈಶಾಖ.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೮ ವೈಶಾಖ ರೂಪ ಅಸ್ಪಷ್ಟವಾಗಿ ಕಾಣಿಸಿತಂತೆ. ಬಾವಿಕಟ್ಟೆಯನ್ನು ಸಮೀಪಿಸಿದ ಹಾಗೆ ಕಟ್ಟೆಯ ಮೇಲೆ ನಿಂತಿದ್ದ ಹೆಂಗಸು ತಾನೆ ಎಂದು ಗುರುತಿಸಿ ಕೂಗುವಷ್ಟರಲ್ಲಿ ತಾನು ನೀರಿಗೆ ಧುಮುಕಿದ್ದೆನಂತೆ!... ತಕ್ಷಣ ಲಕ್ಕ ಹುಯಿಲೆಬ್ಬಿಸಿದಾಗ ಮೊದಲು ಓಡಿಬಂದವರು ಬಾವಿಗೆ ಸಮೀಪದ ಮನೆಯವರು. ಅನಂತರ ಅಕ್ಕಪಕ್ಕದ ಮನೆಯವರು ಕೂಡಿಕೊಂಡಿರಬೇಕು. ಮಾವಯ್ಯ ಯಾವಾಗ ಬಂದರೋ ಅವನಿಗೆ ತಿಳಿಯದು. ಮೊದಲು ಬಂದ ಮನೆಯವರೇ ಬಾವಿಯ ಹಗ್ಗವನ್ನು ತಂದಿತ್ತು ಲಕ್ಕನನ್ನು ಬಾವಿಯೊಳಗೆ ಇಳಿಸಿದವರು. ಬೆಳಕಿಗಾಗಿ ಸ್ವಲ್ಪಮೇಲುಗಡೆಗೆ ಕಟ್ಟಿದ ಲಾಟೀನಿನೊಡನೆ ಹಗ್ಗ ಹಿಡಿದು ಲಕ್ಕ ಬಾವಿಗಿಳಿಯುತ್ತಿರುವಂತೆ, ತಾನು ನೀರನಿಲ್ಲಿ ಮುಳುಗಿ ಸತ್ತಿರಬೇಕೆಂಬ ಶಂಕೆಯೇ ಅವನನ್ನು ಬಾಧಿಸುತ್ತಿತ್ತಂತೆ!- ಮೇಲೆ ಬಾವಿಯ ತುದಿಗೆ ಜಮಾಯಿಸಿದ್ದ ಜನಕ್ಕೂ ಅದೇ ಭಾವನೆ ಇದ್ದಿರಬೇಕು... ಆದರೆ ನೀರಿಗೆ ನೇರವಾಗಿ ಬಿದ್ದಿದ್ದೆ. ಎರಡು ಸಲ ನೀರಿನಲ್ಲಿ ಮುಳುಗಿ ಮೇಲೇಳುವಾಗ, ಅತ್ತ ಇತ್ತ ಬಡಿಯುವ ಕೈಗೆ ನೀರಿನ ಅಂಚಿಗೆ ಒತ್ತಿದಂತಿದ್ದ ಚಾಚುಗಲ್ಲೊಂದು ಸಿಕ್ಕಿತ್ತು. ಅದನ್ನು ಭದ್ರವಾಗಿ ಹಿಡಿದು ತಾನು ನೀರಿನಲ್ಲಿ ಮುಳುಗಿ ತೇಲುತ್ತಿದ್ದೆ... ತಾನು ಸಾಯಬೇಕೆಂದು ನೀರಿಗೆ ಬಿದ್ದವಳು. ಈಗ ನೆನೆದರೆ ಅಶ್ಚದ್ಯವಾಗುತ್ತದೆ. ಆ ಗಳಿಗೆಯಲ್ಲಿ, ಬೇರೆ ಯಾವುದರ ಪರಿವೆಯೂ ಇಲ್ಲದೆ, ಹೇಗಾದರೂ ಸರಿಯೇ ಜೀವವನ್ನು ಉಳಿಸಿಕೊಳ್ಳಬೇಕು ಎಂಬುದೊಂದೇ ಉಗ್ರವಾಗಿ ತನ್ನೊಳಗೆ ತುಡಿಯುತ್ತಿದ್ದ ಬಯಕೆ!... ಆಗ ತಾನು ಅಸ್ಪುಟವಾಗಿ ಚೀರಿರಬೇಕು. ತನ್ನ ಚೀತ್ಕಾರ ಬಾವಿಯೊಳಗೆ ಅರ್ಧಕ್ಕಿಂತ ಕೆಳಗೆ ಇಳಿದಿದ್ದಾಗಲೆ ಲಕ್ಕನಿಗೆ ಕೇಳಿಸಿ, ತನಗಿನ್ನೂ ಜೀವ ಹೋಗಿಲ್ಲ ಎಂದು ಅವನಿಗೆ ಮನವರಿಕೆಯಾಗಿತ್ತಂತೆ!... ಅವನು ತಳ ಮುಟ್ಟಿದಾಗ, ಆಗಲೆ ಭುಜಮಟ್ಟ ಮುಳುಗಿ ಚಾಚುಗಲ್ಲಿನಿಂದ ಇನ್ನೇನು ಹಿಡಿತ ಕಳೆದುಕೊಳ್ಳುವುದರಲ್ಲಿದ್ದ ತನ್ನನ್ನು ತಬ್ಬಿ ಹಿಡಿದು, ಲಕ್ಕ ನೀರಿನಲ್ಲಿ ಈಜುತ್ತಲೆ ಇದ್ದ. ಅನಂತರ ಹಗ್ಗ ಕಳಚಿ, “ರುಕ್ಕಮ್ಮಾರು ಬದುಕಿ-ಬದುಕಿ!” ಎಂತಲೂ ಕೂಗಿದ್ದ... ಬಾವಿಯ ಮೇಲುಗಡೆ ಹತ್ತಾರು ಲಾಟೀನುಗಳು ಕನಸಿನ ಲೋಕದವೋ ಎಂಬಂತೆ ಹೊಳೆಯುತ್ತಿದ್ದವು. ಅಷ್ಟರಲ್ಲಿ ಲಕ್ಕನನ್ನು ಇಳಿಸಿದ್ದ ಹಗ್ಗವನ್ನು ಎಳೆದುಕೊಂಡಿರಬೇಕು. ತುಸು ವೇಳೆಯಾದ ಬಳಿಕ, “ಬಿದಿರುತೊಟ್ಟಿಲಿಗೆ ಹಗ್ಗ ಕಟ್ಟಾ ಇದ್ದೀವಿ, ಇನ್ನೇನು ಬಿಡ್ತೀವಿ”- ಅನೇಕ ಧ್ವನಿಗಳ ಕೂಗು, ಆ ಕೂಗು