ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೧೧ ಆಯಿತು... ಹೇಗೂ ಇಷ್ಟು ದೂರ ಬಂದಿದೀವಿ. ಹೀಗೇನೇ ಭಾವ ಅತ್ತಿಗೆ ಜೊತೆಗೆ ಹೋಗಿ ನಾಲ್ಕು ದಿನ ಇದ್ದು ಬರೋಣ” ಎಂದಿದ್ದರು. “ನೀವು ಬರಲು ಒಪ್ಪಿದ್ದು ಬಹಳ ಸಂತೋಷ. ಬನ್ನಿ, ಬನ್ನಿ, ನಾಲ್ಕು ದಿನ ಯಾಕೆ, ರುದ್ರಪಟ್ಟಣ ನಿಮಗೆ ಬೇಸರ ಹಿಡಿಸುವವರೆಗೂ ಇದ್ದು ಬರುವಿರಂತೆ” ಎಂದು ಸಾವಿತ್ರಿಯೂ ಕಳಕಳಿಯಿಂದಲೆ ಆಹ್ವಾನಿಸಿದ್ದಳು... ಜಾನಕಿಗೆ ಆಗಿದ್ದ ಆಘಾತವನ್ನು ಮರೆಸಲು ಮತ್ತು ತಾನೂ ಮರೆಯಲು, ಚಂದ್ರಶೇಖರಯ್ಯನಂಥ ಖುಷಿ ಮನುಷ್ಯ ಸ್ವಲ್ಪ ಕಾಲ ಜೊತೆಗಿದ್ದರೆ ವಾಸಿ ಎಂಬ ಭಾವನೆಯನ್ನು ಸಾವಿತ್ರಿಯ ಆಹ್ವಾನದಲ್ಲಿ ರುಕ್ಕಿಣಿ ಗುರುತಿಸಿದ್ದಳು!.... ಅವರೆಲ್ಲರೂ ರುದ್ರಪಟ್ಟಣಕ್ಕೆ ತೆರಳಿದ ಬಳಿಕ ಸರಸಿ ಕೆಲ ಸಮಯ ಪೆಚ್ಚಾದಂತೆಯೇ ಇರುತ್ತಿದ್ದಳು. ಆದರೆ ವೆಂಕಣ್ಣ ಜೋಯಿಸರ ಹೆಣ್ಣುಮಕ್ಕಳು, ತೋಟ ಇವುಗಳ ಸಂಭ್ರಮದಲ್ಲಿ ಆ ಕೊರಗನ್ನು ಬಹುಜಾಗ್ರತೆ ಮರೆತಿದ್ದಳು_ ಇತ್ತಾಗಿ ಲಕ್ಕ, ಅಸ್ವತ್ತಪ್ಪಾರು-ಚಮದ್ರಸೇಕರಪ್ಪಾರು ಇಬ್ರ ಮನೆಯೋರನೂವೆ ರುದ್ರಪಟ್ಟಣಕ್ಕೆ ಸೇರುಸಿ ಊರಿಗೆ ಮರಳಿದ್ದ. ಈ ಸರಿ ವೋಗೋವಾಗ್ಲೆ ಆಸ್ತೇಯ, ಬರೂವಾ ಅಸ್ಥೆಯ, ಲಕ್ಕನ ಅದ್ರುಸ್ಪಕ್ಕೆ ಉದ್ದ ಕೂವೆ ಜೊತೆ ಗಾಡಿಗಲೆ ಸಿದ್ದಬೇಕ!... ಅದಕೇ ಇರಬೈದು ಹಾದೀಲಿ ಯಾತಾವೂ ಕಳ್ಳರು ಕನಸೂ ಸೈತ ಬೀಳಿಲ್ಲ... ಇದ್ದೆ ಯೋಚ್ಛೆಗೆ ತಂದ್ಯೋತ್ತ, ಲಕ್ಕ ತಮ್ಮ ವೊಲಗೇರಿಯ ಗುಡ್ಡು ತಾವಿಕೆ ಬಂದಿದ್ದ. ತನ್ನ ಯಜಮಾನ ಮಾತಿಲ್ಲೆ ಕತಿಲ್ಲೆ ಕಾಲೆಳೀತ ಬತ್ತಿದ್ದ ಕಂಡು ಬೊಡ್ಡನೂ ಬೊಗಳದೆ ಮತ್ತಗೆ ಬತ್ತಾ ಇದ್ದದ್ದು, ತನ್ನ ಬೆನ್ನ ಹಿಂಚೋರಿ ಕುಂತು ಕಡಿಯಕ್ಕೆ ಮುಟ್ಟಿಗಂಡ ತೋಣಚಿಯ ಬಗ್ಗಿ ಬಗ್ಗಿ ಕಚ್ಚುತಾ ಒದ್ದಾಡ್ತ ಇತ್ತು... ತಮ್ಮ ಗುಡ್ಡು ಇನ್ನೇನು ಸಿಕ್ಕು ಅನ್ನೋವಾಗ, ಅವದ ವಳಾಗಡೆ ಎದ್ದ ಗುಲ್ಲು ಆ ಗುಡ್ಡ ನೆರಿಕೆ ವಳಗೆಲ್ಲ ಬಡಿದಾಡಿ ತಡಕಾಡಿ ವೋರಗಡೀಗೂ ಮೊಖ ಆಕಿ ಲಕ್ಕನ ಕಿವಗಳೊವೆ ತಟ್ಟಿ, ಅವನ ಕಾಲೆ ಗೂಟ ವೊಡುದು ನಿಲ್ಲುಸ್ತು: “ಯಾಕಮ್ಮಿ ವೋಟೋಂದ ಬಾಯಿಬಿಚ್ಚದೆ ಲಿಪಿ ಕುಂತಂಗೆ ಕುಂತಿದ್ದೀ?” ಈ ಗರ್ಜನೆ ಅಯ್ಯಂದೇಯ... ಅಯ್ಯ, ಒಂದೊಂದು ದಪ ಊಂಕರಿಸಿ ಆನೆ ಅಂತದು ಲದ್ದಿ ಆಕಾಬೇಕು!... ಆದ್ರೆ ಅಯ್ಯಂಗೆ ಕ್ವಾಪ ಹತ್ತಾದೆ ಅಸುರ್ಪ.