ಪುಟ:ವೈಶಾಖ.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೧೩ ಮೂರು ಅಕ್ಕಿಕಾಳೂ ಇಲ್ವಲ್ಲ...” ಕರುಳು ಕಿವುಚಿದಂಗೆ ಅಂದು, “ನಮ್ಮ ಲಕ್ಕ ಅದೇಟೊತ್ತಿಗೆ ಬತ್ತಾನೊ ಯಾನೊ.... ಅವ್ರು ಯಾನಾರ ತಂದ್ರೆ, ಇವತ್ತು ನಾವು ವಂದೇಟು ಉಣ್ಣಾವರು. ಅವ್ರು ತರಿಲ್ಲ-ವೊಟ್ಟೆಗೆ ವದ್ದೆ ಪಾವುಡೆ ಇಕ್ಕಂಡು ಉಪಾಸ ಬಿದ್ದು ನಾವೆಲ್ಲ ಸಾಯಾದೆ!...”- ತನ್ನೊಟ್ಟಿಗೆ ತಾನು ಯಾಳಿಕಂಡು, “ಊ. ಆಮ್ಯಾಕೆ?” ಅಂತ ತಾಕೀತು ಮಾಡಾಳಂಗೆ ಮಗಳ ಕ್ಯಾಳಿಗಳು-ಸಿವುನಿ ತಡುದಿದ್ದ ಮಾತ ಪುನಾ ಉಿಸಿದ್ದು. “ಅದ್ರೂ ನಾ ಸೈಸಿಕಂಡಿ ಕನವ್ವ... ಕುಡಿಯಾದು, ಅಲ್ಲಿ ಬಂದು ದನ ಬಡಿದಂಗೆ ನನ್ನ ಬಡಿಯಾದು-ಅದೂ ನಾ ಸೈಸಿಕಂಡಿ. ಆದ್ರೆ ಆ ಮಿಂಡಗಾತಿ ಕಯ್ಯಗೆ ನಮ್ಮಟ್ಟಿ ವಗುತನಯಲ್ಲಾನೂವಿ ಕ್ವಿಟ್ಟು ನನ್ನ ಅವಳ ಜೀತಗಾತಿ ಮಾಡಕ್ಕೆ ಯತ್ಥ ಮಾಡ್ಡಾಗ ಮಾತ್ರ ನನ್ನ ಆತುಮಕೆ ವಗ್ಗನಿಲ್ಲ- ಅಲ್ಲಿಂದ ಕಡದು ಬಂದಿ...” ತಂಗೆಮ್ಮ ಮಾತುಗಳ ಆತುರ ಆತುಗತ್ತ ಲಕ್ಕ ಗುಡ್ಡು ಬಾಗಿಲೈ ಅಡ್ಡಾಡಿ ಬಂದು ನಿಂತ. ಬಿಸು ಜಳದಿಂದ ಬಂದು ನಿಂತೋನ್ಸೆ, ಕತ್ತಲು ಎಪ್ಪೆಪ್ಪಾಗಿ ವಳುಖ್ಯಿಂದ ಎದ್ದು ಬಂದು ಕಣ್ಣಿಗೆ ಮೆತ್ತಿಗತ್ತು, ಗುಡ್ಲು ವಳುಚೂರಿ ಕುಂತೋರು ಯಾರೂವೆ ಅವಂಗೆ ಕಾಣಿಸನೇ ಇಲ್ಲ. ಒಂದು ದಪ ಅಂತೂ ಕತ್ತಲು ಕಕ್ಕಿಟ್ಟು ಹಿಂದೈ ದಬ್ಬಿದಂಗಾಯ್ತು... “ಓ-ಲಕ್ಕಣ್ಣ....” ಸಿವುನಿ ಬೇರುದ್ದು. ಮಗನ ಹೆಸರು ಕರ್ನದೊಳಗೆ ಇಳೀತಿರೋನೂವೆ ಕಲ್ಯಾಣಮ್ಮನ ಮೈಯ್ಯ ಎಲೆಬಿಸಲು ತಬ್ಬಿದ ಹಂಗೆ ಬೆಚ್ಚಗೆ ಮಾಡು. “ಬಂದ್ಯಾ-ಮೊಗ?” ಅಂತ ಸೊರದಲ್ಲಿ ತನ್ನ ಮಗನ ಬಾಜಿ ಮುದ್ದಾಡಿದ್ದಲು. ಆಮ್ಯಾಲೆ, “ಇದ್ಯಾಕೆ ಹರಚ್ಚಿಗೆ ನಿಂತೆ? ಬಾ ವಳೀಕೆ... ಇಲ್ನೋಡಿದ್ಯಾ- ನಿನ್ನ ತಂಗೆಮ್ಮ ಕೂಸು ತತ್ತುಗಂಡು ನಂಜನಗೂಡ್ನಿಂದ ನಮ್ಮ ಗುಡ್ಡಾಗೆ ಇರಕ್ಕೆ ಬಂದದ್ದೆ. ಇವಳ ಗಂಡ ಆದ್ಯವಳೋ ತಲೆಮಾಸಿದೋಲ ಕಟ್ಟಿಗಂಡು, ಇವಳ ಅಲ್ಲಿಂದ ಗಡೀಪಾರು ಮಾಡ... “ಚುಟುಕದಲ್ಲಿ ತನ್ನ ಮಗಳ ಬದುಕು ಹೈರಾಣಾದ ಕತೆಯ ಯೋಳಿ ಮುಗಿಸಿದ್ದು. ಲಕ್ಕೆ ನ್ಯಾಡಿದ್ದಂಗೆ, ಅವನ ದುಸೀಯ ಮುಚ್ಚಗಮಡಿದ್ದ ಕಾವಳ ವಸಿವಸ್ಕಾಗಿ ಹಾದಿ ಕಟ್ಟು, ಮೊಗೀಗೆ ಮೊಲೆ ಉಣ್ಣಿಸಿದ್ದ ಸಿವುನಿ; ಒಂದು ಕಾಲ ನೀಡಿ ಕೊಕ್ಕರಿಸ್ಥ ಇನ್ನೊಂದು ಕಾಲ್ಮಾಲೆ ಮೊಣಕಯೂರಿ, ಮೊಡಚಿದ ಹಸ್ತಕ್ಕೆ ಕೆನ್ನೆ ಆಂತು ಸಿವುನಿ ವತ್ತಿಗೇ ಕುಂತ ಅವ್ವ; ಅಷ್ಟೊತ್ತಿಗಂಟ ಮುದಿ ಹುಲಿಯಂಗೆ ಅರಚಾಡ್ತಿದ್ದೋನು ಗುಡ್ಡ ಒಂದು ಮೂಲೆ ಸೇರಿ, ಕರಿಕಂಬಳಿ ವೊದ್ದ ಕುಂತಿರೋ