ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೪ ವೈಶಾಖ ಅಯ್ಯ-ಯೆಲ್ಲಾರೂವೆ ಚಿತ್ತಾರದ ಗೊಂಬೆಗಳಂಗೆ ಮೂಡಿದ್ರ... ಲಕ್ಕ ತಂಗ್ಯಮ್ಮನ ನ್ಯಾಡಿದ. ಸಿವುನಿ ಅಣ್ಣನ ಕ್ವಾಡಿದ್ದು. ಈ ಕಣ್ಣು ಆ ಕಣ್ಣಲ್ಲಿ ನೀರ ಕಚ್ಚುಸ್ತು, ಲಕ್ಕ ಸಾವುರಿ, “ಅವ್ವ, ಸಾಸ್ತ್ರಿಗಳ ಅಟ್ಟಿ ನೆಂಟರ ಬುಟ್ಟು ಬತ್ತಾ ಇದ್ದಾಗ, ನಾ ನಂಬೆ ಇಲ್ಲಿಲ್ಲ. ಆ ಜೀನಿ ಜಿಪುಣಮ್ಮ ರುಕ್ಕಿಣದ್ವಾರ ಅಣ್ಣನ ಎಡತಿ-ಕ್ವಾಡು, ನಾಕು ಬಳ್ಳರಾಗಿ, ಏಡು ತೆಂಗಿನಕಾಯಿ ಕಟ್ಟು, ನನ್ನ ಕಯ್ಯಾಗು ಒಂದು ರೂಪಾಯಿ ಮಡಗಿದರು” ಎಂದು ಬೆನ್ನ ಮ್ಯಾಲೆ ಸ್ವತ್ತಿದ್ದ ಹಸಿಬೆ ಚೀಲವ ಅವಳ ಮುಂದೆ ಇರಿಸಿದ. ಮೊಖದಲ್ಲಿ ಸಂತೋಸವ ನಲದಾಡುಸ್ಕ ಅವ್ವ “ಕ್ವಾಡೊ ಲಕ್ಕ, ನೀ ಕೂಲಿ ಕಂಬಳಕೆ ವೋಗೊ ಅಟ್ಟಿಗಳಿಗೆಲ್ಲ, ಆ ರುಕ್ಕಿಣವ್ವನಟ್ಟಿ, ಬುಂಡಮ್ಮಾರ ಅಟ್ಟಿಯೋರೇಯ ವಸಿ ಕಯ್ಯ ಬಿಚ್ಚಿ ಕಂಬಳ ಕ್ವಡೋರು, ಅವೇಡು ಅಚ್ಚನು ತಂಪೋತ್ನಲ್ಲಿ ನೆನೀಬೇಕು” ಅಂತ ಇದ್ದಾಗ, ಮಾಯದ ನಿದ್ದೆ ಕಣ್ಣ ಮುಚ್ಚಿದ್ದ ಕೂಸ ಅವ್ವನ ಕಯ್ಯಗಿಡ ಸಿವುನಿ, “ಇದ್ದ ಅಂಗ ಮನಗಿಸವ್ವ, ನಾನು ವೋಟರಲ್ಲಿ ರಾಗಿ ಬೀಸಿ ಲಡಿಮಾಡ್ತೀನಿ” ಅಂದ ಸಡಗಾರ ಮಾಡ್ತ ದುಡುದುಡು ಯೆದ್ದೋದ್ದಲು. ಲಕ್ಕ ಅವ್ವನ ವತ್ತಿಗೆ ಬಂದು ಕುಂತ. ಅವ್ವನ ತೊಡೆ ಮ್ಯಾಗ್ನಿಂದ ಮೊಗಾವ ಜ್ವಾಪಾನಾಗಿ ತನ್ನ ತೊಡೆ ಮ್ಯಾಕ್ಕೆ ವರ್ಗಾಯಿಸಿ, ಅದರ ಮೊಖದ ಮ್ಯಾಲೆಲ್ಲ ಕಣ್ಣಾಡಿಸಿ, ಅದರ ತುಟಿ ಮುಟ್ಟಕ್ಕೆ ಇಂಜರೀತ ಇಂಜರೀತ ತನ ಕಮ್ಮಿ ಬೆಳ್ಳ ತಕ್ಕಂಡೋಗುತ ಇದ್ದಾಗ “ಇದ್ಯಾಕಪ್ಪು, ತೆಗಿ ಕಯ್ಯ... ಮೊಗ ಅರೆನಿದ್ದೇಲಿ ಯೆದ್ದು ಚಂಡಿ ತೆಗುದ್ರೆ ಆಮ್ಯಾಕೆ ಸಿವುನಿ ಆ ರಚ್ಚೆ ತೀರುಸಕ್ಕೆ ರಾಗಿ ಬೀಸೋದ್ರೂ ಅರ್ದಕೇ ಬುಟ್ಟು ಬಟ್ಟಾಡಬೇಕಾಯ್ತದೆ....” ಅಂದ ಕಲ್ಯಾಣಿ-ಮೊಗಾವ ಮನಗಿಸಕ್ಕೆ ಈಚಲು ಚಾಪೆ, ಆ ಚಾಪೆ ಮ್ಯಾಲೆ ಕಂಬಳಿ, ಆ ಕಮಬಳಿ ಮ್ಯಾಲೆ ಒಂದು ಹಳೆ ಸ್ಯಾಲೆ ತುಂಡು, ಹಿಂಗೆ ಅಣಿ ಮಾಡುತ್ತ, “ನೀನೂ ಒಬ್ಬಳ ಬ್ಯಾಗ ಬ್ಯಾಗ ಕಟ್ಟೋ, ಇಂಗೆ ಚೆಂದೂಳ್ಳಿ ಮೊಗಾವ ತಗಂಡು. ಹವಳದ ಕುಡಿಯಂಗಿರೋ ಅದರ ತುಟಿಗೆ ಮುತ್ತಿಕ್ಕಬೈದು!” ಎಂದು ಗೇಲಿ ಮಾಡುತ್ತ ನಕ್ಕು, ತಯಾರಿಸಿದ ಮೆತ್ತೆ ಮ್ಯಾಲೆ ಕೂಸನ ಮನಗಿಸೊ ವ್ಯಾಳ್ಯದಲ್ಲಿ, ಸಿವುನಿ ರಾಗಿ ಕಲ್ಲಿನ ಗರ್‌ಗರ್‌‌್ರಗರ್ ಸದ್ದೆ ತನ್ನ ಕೊರಳಿನ ಹಾಡನೂ ಸೇರುಸಿ, ಮಕ್ಕಳೆ ಯಾಕೆ, ದೊಡೋರಿಗೂ ನಿದ್ದೆ ಅತ್ತೋವಂಗೆ