ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೬ ವೈಶಾಖ ಮುದ್ಯ, ನಂಗ್ಯಾವ ಊಾಗವೂ ಇಲ್ಲಕನ, ಇರಾ ರಾಗವೆಲ್ಲ ವೊಟ್ಟೆಗಿಲ್ಲೆ ಇರೋದ್ರೇಯ” ಅಂದು ಮೊಟ್ಟೆ ಬಡಿದ. ಕಲ್ಯಾಣಿ ತನ್ನ ಕೆಂಪು ಹರಳಿನ ಮೂಗುನತ್ತ ಬಲಗೈಯಿಂದ ತಿರುವ. “ಊ ಊ ಸಾಜ, ಸಾಜ ಈವಯ್ಯಗೆ ವೊಟ್ಟೆಗಿಲ್ಲೆ ಇರೋದೆ ಕಾಯ್ದೆ ಅನ್ನೂದ ನಾನೂವೆ ವದ್ಭುತೀನಿ... ಅಲ್ಲ ಕನೆ ಸಿವುನಿ, ಬಾಗಿ ಕೇಮಿ ಮಾಡುದ್ರೆ ತಾನೆ ಮೊಟ್ಟೆ ತುಂಬಾದು?... ನಿಮ್ಮಯ್ಯ ಅನ್ನಸಿಗಂಡ ಈ ಗ್ರಾಸ್ತ್ರ ಇತ್ತಿತ್ತಾಗಿ ಗ್ಯಾನ ಬಂದ ಗಿರಾಕಿಯಾಗವೈ, ಮನಸಿಗೆ ಬಂತಾ, ಗೇಯಕ್ಕೆ ವೊಂಟ, ತೆವಲು ತಿರುಗ್ಯ ತಾನು ಗೇದ ದುಡ್ಡು ವಕ್ಕಡೀಕಿಲ್ಲ, ನನ್ನತ್ರ ಇದ್ದ ಬದ್ದ ದುಡ್ಡನೂವೆ ವೊಡದೂ ಬಡದು ಕಿತ್ತುಗಂಡೋಗಿ ರಾಚನ ಆ ಹಾಲು ಎಂಡಕೆ ಸುರಿಯಾದು, ಇಂಗಾಡಿದೆ, ವೊಟ್ಟೆ ತುಂಬು ಅಂದ್ರೆ ಯಾ ತಾವುಣಿಂದ ತುಂಬಾತು?” ಆಪಾದಿಸಿದ್ದು, ನಿಂಗಯ್ಯ ತಣಿಗೆ ಅಲ್ಲಾಡಿಸತ. “ಇವಳು ಮಾತು ಒಂದು ಮಂತ್ರ ಅಂತ ಕ್ಯಾಳಿಕಂಡು ಕುಂತುಗವ್ವ, ನೇರ್ಪಾಯ್ತದೆ... ಮೊದ್ಧ ಕ್ವಾಳಿಲ್ವ ಗಾದ್ಯ-ಕುಟುಗಲು ಮಳೆ ಬ್ಯಾಡ, ಲೋಟಗಾಲೆ ಎಡತಿ ಬ್ಯಾಡ, ಅಂತಾವ?... ತತ್ವ, ತತ್ತ” ಅಂತ ಆತುರಿಸ್ತ. “ಇದು ಸರಿಕನವ್ವ, ನಂಗೇ ತಿರುಗಿಸಿಬುಟ್ಟಲ್ಲ ಗಾದ್ಯ.... ಅದು ಇರಾದುಕುಟುಗಲು ಮಳೆ ಬ್ಯಾಡ, ಲೋಟಗಾಲೆ ಗಂಡ ಬ್ಯಾಡ, ಅಂತಾವ” ಕಲ್ಯಾಣಿ ಜಯಬೇರಿ ವೋಡೀತಾ ನುಡಿದ್ದು, ಆಗ ನಿಂಗಯ್ಯ, “ಈಗ್ಯಾರು ಲೋಟಗಾಲೆ ವೊಡೀತಿರಾದು? -ಸುಮ್ಮೆ ಉಣ್ಣು” ಅನ್ತಾ ಇರೋವಾಗ ಕೋಳ್ಳಿಯ ಉರಿ ಆಡಿದಂಗೆ, ಒಂದು ದಪ ಕತ್ತಲಲ್ಲಿ ಬಾಡಿ, ಇನ್ನೊಂದು ದಪ ಬೆಳಕಲ್ಲಿ ಮೂಡ್ತಿದ್ದ ತನ್ನ ಅಯ್ಯನ ಮೊಕವ ಲಕ್ಕ ತನ್ನ ಕಣ್ಣಲ್ಲಿ ತುಂಬಿಕೊತ್ತ ನ್ಯಾಡಿದ. ಎಲ್ಲರೂ ಉಂಡು ಎದ್ದಾಗ ಬೊಡ್ಡಂಗೂ ಅರ್ಧ ಮುದ್ದೆ ದಕ್ಕಿತ್ತು. ಮನಗಿದಾಗ ಲಕ್ಕ ಆ ಕಡಿಂದ ಈ ಕಡೀಕೆ ವೊಳ್ಳಾಡುತಲೆ ಇದ್ದ. ಹಿಂದೊದ ದಿನಗಳ ಗ್ಯಾಪಕ ಅವನ್ನ ಗಾಳ ಅಕಿ ಎಳೀತಿತ್ತು... ಎಂಗಿದ್ದ ಆಳು ಅಯ್ಯ, ಎಂಗಾಗಿಬುಟ್ಟಮ್ಮೆ?- ಇತ್ತಿತ್ತಾಗಿ ಹಿಂದುಕಿದ್ದ ಕ್ವಾಪವೂ ಕಾಣುಸ್ತಿಲ್ಲ... ಹಿಂದೆ, ಅಯ್ಯನ ಕ್ವಾಪಕ್ಕೆ ಮೊಖ ಕೊಟ್ಟು ನಿಂತೋರೆ ಕಮ್ಮಿ. ಆದರೆ ಆ ಕ್ವಾಪ ಆ ಕ್ಷಣಕ್ಕೆ ಉಗ್ರ ನರಸಿಂಹ ಆದರೂವೆ, ಬಾಳ ಸಮಯ ಉರಿದಾಡೋ ತರದ್ದಲ್ಲ. ಇಂಗೆ ಬಂದು ಅಂಗೆ ವೊಂಟೋಗೋದು... ಒಂದು ದಪ ಅಯ್ಯ ಕುಡುದು