________________
೧೧೮ ವೈಶಾಖ ಗುಡ್ಲು ವಳೀಕೆ ಏಡೂ ಆಳೂವೆ ಬಂದೋರು ಒಬ್ಬರಿಗೊಬ್ರು 'ನಂಗೆ ಅಸೀತಾ ಇಲ್ಲ, ನೀ ಮೊದ್ದು ಉಣ್ಣು-ಉಷ್ಣು, ನೀ ಮೊದ್ದು ಉಣ್ಣು, ಆಮ್ಯಾಕೆ ನಾ ಉಣ್ಣುತೀನಿ'- ಇಂಗೆ ಸರಸ ಆಡಕ್ಕೆ ಮುಟ್ಟುಗಂಡದ್ದು ಲಕ್ಕಂಗೆ ಬೋ ಮೋಜು ತಂದಿತ್ತು.... ಮಾರನೆ ಸಂದೆ ದನಿಗೆ ತಾನು ಕೇಮೆ ಮುಗುಸಿ ತಮ್ಮಗುಡ್ಡಿಗೆ ವಾಪಸಾಗಿದ್ದ. ಆ ಜಿನ ಪೂರ್ತ ಕ್ವಾಟೆ ಬುಳ್ಳಪ್ಪನ ಇತ್ತಲ ಬೇಲಿ ಲಿಪೇರೀಲೆ ತಾನು ತೊಡಗಿದ್ದದ್ದು. ಬುಳಪ್ಪನ ಜೊತೆ ಗಾಡಿ ಅಟ್ಟಿಗಂಡು ಕಾಡಿಗೋಗಿ ಬಾಯಿಬಡಿಕೆ ಬರಲ ಹೇರಿಕಂಬಂದು ಹಳೇ ಬೇಲಿಗೆ ಅಂಟಿಸಿದ್ದ, ಆಳುಗಳು ತಾವಿಬ್ಬರೇಯ. ಆ ಜಿನ ಬ್ಯಾರೆ ಜನಾವ ನೇಮುಸಿಕಂಡೇ ಇನ್ನಿಲ್ಲ. ಆದ್ರೆ ನಾಕು ಜಿನದಲ್ಲಿ ಆಗೊ ಕೆಲಸ ಎಂಟು ಜಿನಗಂಟ ಎಳುದಿತ್ತು... ಈವೊತ್ತೆ ಬೇಲಿ ಕೆಲಸ ಮುಗುಸಿ ಬಂದೋನು, “ಕ್ವಾಡವ್ವ ಇನ್ನೊಂದು ಜಿನ ಅವಯ್ಯ ಅಟ್ಟಿ, ಕೆಲಸಕೆ ವೋಗೂಂತ ಯೋಳಿದ್ರೆ, ನಾ ಸುಮ್ಮಿರಕ್ಕಿಲ್ಲ. ಇಕಾ, ಅವಯ್ಯ ಕೂಟ್ಟಿರೋ ಕೂಲಿ, ಹಿಡಿ ಕಯ್ಯಾ” ಅಂತ ತಾನು ಅವನ ಬಿಚ್ಚಿದ ಅಂಗೈಗೆ ದುಡ್ಡು ಸುರುದಾಗ, ಅವಳ ಅಂಗೈಲಿ, ಒಂದು ಎಣ್ಣಾಳಿಗೆ ಕ್ವಡೊ ಕೂಲಿಗಿಂತ ಜಾಸ್ತಿ ಇರೋದ ಕಂಡು, “ಇದೇನವ್ವ ಈ ಜಿನ ಆಚರ-ನೀ ಯಾವ ಗನಂದಾರಿ ಕೇಮೆ ಮಾಡೇಂತ ಈಟು ದುಡ್ಡು ಕೃಟ್ಟಿ?” ಅಂತ ತಾನು ಕ್ಯಾಳಿದ್ದ. ದುಡ್ಡು ಎಣಿಸ್ಸಾ ನಮ್ಮವ, “ಊ. ನಾ ಮಾಡೋ ಕೇಮೆಗೆ ಈಟು ದುಡ್ಡು ಕೃಟ್ಟರೆ, ಆ ಮನೆ ಚೊಕ್ಕಟ್ಟಾಗಿ ಊಳಕಂಡೋಗೋದೇಯ” ಅಂದ್ಲು-ಅವ್ವನ ಮಾತ್ನ ಜಾಡು ಅರ್ತ ಆಗದೆ ತಾನು, “ಮೆಂತೆ?” ಅಂತ ಕ್ಯಾಳುತ್ತ, ತಾನು ಹುಬ್ಬ ಮ್ಯಾಕ್ಕೇರಿಸಿದ್ದ. ಅವ್ವ, ಹಣದ ಸೂರ್ತ ಎಣಿಸೋವರೂವೆ ಸುಮಕಿದ್ದು, ಅದು ಮುಗುದ ಮ್ಯಾಲೆ, ತನ್ನ ಕಡೀಕೆ ತಿರುಗಿ, “ಹಯ್ಯೋ, ಇದು ನನ್ನ ಸಂಬಳದ ದುಡ್ಡು ವೊಸೊ ಅಂತ ತಿಳೀಬ್ಯಾಡಕನೊ, ಲಕ್ಕ, ಇದರಾಗೆ ನಿಮ್ಮಯ್ಯ ಈ ಜಿನ ಊಟ್ಟ ದುಡ್ಡ ಬೆರಕಂಡಂದೆ” ಅಂತ ಇವರಣೆ ಕ್ವಿಟ್ಟಿದ್ದು. ತಾನು ಬೆಕ್ಕಸ ಬೆರಗಾಗಿ, “ಇದ್ಯಾನವ್ವ ಚೋಚಿಗದ ಸುದ್ದಿ ನೀ ಯೋಳ್ಳಿರಾದು?” ಅಂದಾಗ, ಅವ್ವ,