ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೦ ವೈಶಾಖ ನಾನು......ನಾನು ಪತನಾದ ಏಡೇ ವರುಷಕೆ ಈ ಪ್ರತುವಿಗೆ ನಮ್ಮವ್ವ ಕಟ್ಟ ಕೊನೇ ಫಸಲು-ನನ್ನ ತಂಗಿ ಸಿವುನಿ!.... ಉಟ್ಟಿರೋದು ಎಸರಿಗೆ ನಾಕು ಕುಳ ಆದರೂವೆ, ಈಗ ಉಳಿದಿರೋದುಸಿವುನಿ, ನಾನು ಇಬ್ಬರೇಯ!... ಅವಳಿ ಗಂಡು ಸಣ್ಣಕೆ ಕಡ್ಡಿಯಾಗೆ ಉಟ್ಟಿ, ಬದುಕಿರಾ ಅತ್ತುತಿಂಗಳೂವೆ ನವದೂ ನವದೇ ಸತೋಯ್ತಂತೆ. ಈಗಲೂವೆ ಅವ್ವಂಗೆ ಗಾಳಿ ಬೀಸಿದಂಗೆ ಯಾವಾಗಲಾರೂ ಆ ಕೂಸಿನ ಗ್ಯಾಪನ ಬರಾದುಂಟು. ಆಗ “ಇದಿಯಮ್ಮ ಆ ಕೂಸಿನ ಕಣ್ಣು ಮೂಗ ಬೋ ನೀಟಾಗಿ ತಿದ್ದಿದ್ದು ಕನೋ, ಲಕ್ಕ, ಅಮ್ಮ ದಕ್ಕಿಸಿಕಳಾಕೆ ಮುಕ್ಯ ನಾವು ಅದ್ರುಸ್ಟ ತಂದಿರನಿಲ್ಲ.”- ಯೋವ್ರ ಯೋಳ, ಕಣ್ಣೀರ ಚೆಲ್ಲಾಡಿಸಿದ್ದು ಅವ್ವ!... ಇನ್ನೊಂದು ಅವಳಿ ಎಣ್ಣು-ಅವಳೇನೂ ಉಲುಮಲವಾಗಿ ಬೆಳುದು ಒಳ್ಳೆ ಕಡೀಕೆ ಲಗ್ನಾಗಿದ್ರೂವೆ, ಮೊದಲೆ ಕನ್ನೆರಿಗೇಲೆ ಮೊಗೀನ ಸೈತ ಪ್ರಾಣ ಬುಟ್ಟಿದ್ದು... ಅವಳು ಸತ್ತದ್ದೆ ಸತ್ತದ್ದು ಬ್ಯಾರೆ ಊರಿನ ನಮ್ಮ ಭಾವಂಗೂ ನಮ್ಮವೆ ಹೊಕ್ಕಳ ಸಮ್ಮಂದವೇ ಕಡುದೋಯ್ತು. ಅಮ್ಮು ಬ್ಯಾರೆ ಲಗ್ಧ ಆದಾಗ್ಯೂ ಬೂಪ ನಮ್ಮೆ ಯೋಳಿ ಕಳಿಸನೇ ಇಲ್ಲ..... ಗೆಜ್ಜುಗಣ್ಣ ಮಾತ್ರ ಇರೋವರೆಗೂವೆ ನಮ್ಮ ಗುದ್ದ ತಾಳಗಂಬದ ತರ ನಮ್ಮ ಸಂಸಾರಕ್ಕೆ ಬಲಭುಜವಾಗಿದ್ದ! ಲಕ್ಕನ ಆಲೋಚ್ಛೆಯ ಒಂದು ತಿಗಣೆ ಕಚ್ಚಿ ತುಸ ಬ್ಯಾಳ್ಯ ಅಡ್ಡಗಟ್ಟೆ ಆಕಿತ್ತು. “ಹಾಳುಗೇರಿ ತಿಗಣೆ ತಾನೆ ಯಾಪಾಟ ಎಚ್ಚವೆ ಈ ಗುಡ್ಡಲ್ಲಿ!” ಗೊಣಗಿ, ಚಡ್ಡಿ ಒಳಗೆ ಹರಿದಾಡೊ ತಿಗಣೆಯಮ್ಯಾಲಿನಿಂದಲೆ ಹೊಸಗಾಕ್ತ, ಪೂನಾ ನಿಂತೋದ ಅವನ ಆಲೋಚೌ ಚಾಲೂ ಆಯ್ತ... ಅಣ್ಣನ ಕುರುತೇ ಮನಸು ಸುತ್ತಾಡ್ತ ಇದ್ದದ್ದು, ಗೆಜ್ಜುಗಣ್ಣನ ರೂಪವ ಲಕ್ಕನ ಮುಂಡೈ ಕಡೆದು ನಿಲ್ಲಸಿದಂಗಾಯ್ತು: ಗಣೆಮರ ಬೆಳುದಂಗೆ ಬೆಳಿದಿದ್ದ ಎತ್ತರದ ಆಳು, ಮೊಖದಾಗೆ ಮಾರಮ್ಮ ಕಳ್ಳುಮುಳ್ಳು ಹೂದು ಅಲ್ಲಲ್ಲಿ ಸಣ್ಣಸಣ್ಣಗುಳಿ ಬಿದ್ದಿದ್ರೂವೆ, ಗೆಜ್ಜುಗಣ್ಣನೆ, ತನಗಿಂತಲೂವೆ ಎಚ್ಚಾಗಿ ಅಯ್ಯನ ವೋಲಿಕೆ ವೊತ್ತೋನು. ನಗಸಾರ ಮಾಡಾದರಲ್ಲೂ ಥೇಟ್ ಅಯ್ಯನೆ! ಯಾವ ಕೇಮೆ ಅದ್ರೂ ಸೈ, ಅಯ್ಯನ್ನೆ ಒಂದು ಕೈ ಮೀರಿಸೋನು!... ಅದುಕೇ ಊರಿನ ದೊಡ್ಡ ದುಳಗೊಳೆಲ್ಲ ಯಾವ ಸೀಮೆ ಬಿದ್ದರೂ ಮೊದ್ದು ಉಡುಕ್ತಾ ಇದ್ದದ್ದು ಗೆಜ್ಜುಗಣ್ಣ!...ಪಸಂದಾಗಿ ಗೇಯೊ ಎತ್ತು ಯಾರಿಗೆ ಬ್ಯಾಡದು?... ನಮಗೂ ನಾಕು ಎಕರೆ ಕುಸ್ತಿ ಜಮೀನಿತ್ತು, ಅಯ್ಯನ ಲಗ್ಗದಲ್ಲಿ ಕೆಂಗಣ್ಣಪ್ಪನ ಅತ್ರ ಮಾಡ್ಡ ಸಾಲಕೆ ಬಡ್ಡಿ ಯೇರಿ ಯೇರಿ ಅಪ್ಪಾರ ಆಗಿ, ಅಯ್ಯ ಅಣ್ಣ