ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೨ ವೈಶಾಖ ಇನ್ನೊಂದು ದೀವಳಿಗೇನೂ ಕಳೀತು. ಈಗ ಮಾತ್ರ ಅಯ್ಯನೂ ಅವನೂ ಒಕ್ಕಡೆ ಅವ್ರು ಇನ್ನೊಕ್ಕಡೆ, ಇವಳು, ಜಪ್ಪಯಾಂದು ಜಗ್ಗಾಡ್ಡೆ ಗೆಜ್ಜುಗಣ್ಣಂಗೆ ಪಚಂಡಿ ಗಂಟಾಕಿ ವಪ್ಪುಸಿದ್ರು... ವಪ್ಪಿಗಂಡಮ್ಯಾಲೇ ಬಂದದ್ದು ಗೋಳು... ಲಗ್ಲ ಅಂದ್ರೆ ಬಾಯಿ ಮಾತ? -ಬಡಸ್ತನದ ಲಗ್ಗ ಅಂದರೂವೆ ಮುನ್ನೂರು ಮುನ್ನೂರೈವತ್ತು ಇಲ್ಲೆ ನಡೀತದ?... ವೋಸ್ಸು ಅಣವ ಯಾವ ಮುಲಾಜೂ ಇಲ್ಲೆ ಯಾರ ಕ್ವಡಾರು?... ಜಪ್ಪಯ್ಯನ ಮಠದ ಸ್ವಾಮಿಗಳೇನೊ ಅಯ್ಯನ ಕಯ್ಲಿ ಒಂದು ಜತೆ ಕೆಂಪು ಕಡ್ಡಿ ಪಂಚ್ಯ ವರನಿಗೇಂತ ಮುಪತ್ತಾಗಿ ಊಟ್ಟಿದ್ದಂತೆ. ರಾವಳಾಸುರನ ವೊಟ್ಟೆಗೆ ಅರೆಕಾಸಿನ ಮಜ್ಜಿಗೇಂತ ಅದ್ಯಾವ ಮೂಲೆ ಎಟಕಾತು?... ಲಗ್ದಾದ ಮ್ಯಾಲೆ ಗೆಜ್ಜುಗಣ್ಣನ ಜೀತಕಿರುಸ್ತೀನಿ ಅಂತವಾ ಕೆಂಗಣ್ಣಪ್ಪನ ಅತ್ತಿರೆವೆ ಅಯ್ಯ ಆರು ನೂರು ರುಪಾಯ ಈಸಗಂಡು ಅದರಾಗೆ ಒಂದು ನೂರು ರೂಪಾಯ ಬುಂಡಮ್ಮಾರಿಗೆ ಕ್ವಿಟ್ಟು ನನ್ನ ಜೀತ ಬುಡಸಿದ್ದ. ಉಳಿಕೆ ಅಣವ, ಲಗ್ಗದ ಜಿನ ಬರಾವತ್ತೂ ಜಾಪಾನಾಗಿಡು ಅಂತ ಅವ್ವನ ಕಯ್ಲಿ ಕ್ವಿಟ್ಟಿದ್ದ... ಅಣ್ಣಂಗೆ ಆ ಅಣದಲ್ಲಿ ತನ್ನ ಲಗೃಕ್ಕಿಂತ ಒಂದು ಏಡು ತುಂಡು ಹೊಲಾನಾರ ಕಂಡುಕಳಾವ ಅನ್ನಾ ಆಸೆ, ಅಯ್ಯನ ಮನಸಿನಾಗೂ ಈಚೀಚೆ ಅದೇ ಇರಾದೆ ಇಣುಕಕ್ಕೆ ಸುರು ಮಾಡಿತ್ತು. ಆದ್ರೆ ಅವ್ವ ಬುಡಬೇಕಲ್ಲ; “ಈ ಅಣ, ಗೆಜ್ಜುಗನ ಲಗೃಕೇ ಮುಡುಪು... ಬ್ಯಾರೆ ಯಾತಕೂ ಇದ್ದ ಮುರುಸಕ್ಕೆ ನಾ ವಸ್ತುನಾರಿ.” -ಉಡ ಇಡಿದಂಗೆ ಒಂದೆ ಪಟ್ಟು, ಇಡಿದ್ದು.... ಇಂಗೆ ಅಟ್ಟೇಲಿ ಲಟಾಪಟಿ ನಡದು, ಕಡೀಕೆ ಆ ಅಣವ ಗೆಜ್ಜುಗಣ್ಣನ ಲಗ್ಗಕೇ ಬಳಸೋದೂಂತ ಯೆಲ್ಲಾರು ವಷ್ಟುಗೆ ಆದಮ್ಯಾಗೆ, ಅವ್ವ ನಮ್ಮ ಕೇರಿಯ ಪರ್ತಿ ಗುಡ್ಲುಗುಡ್ಡಿಗೂ ವೋಗಿ - “ಅತ್ತಿಗೆಮ್ಮ, ನನ್ನ ಇರೀ ಹೈದ ಗೆಜ್ಜುಗ ಇಲ್ವ-ಅವಂಗೆ ಲಗ್ಗೆ ಯೇರ್ಪಾಡು ಮಾಡ್ತಾ ಇವಿ. ಎಣ್ಣ ಎಡತೊರೆದು” ಅನ್ಮಾದು, ಇನ್ನೊಂದು ದಪ ಅಂಗೇ ಗಾಳಿ ಬೀಸದಂಗೋಗಿ, “ಮಾತ್ರ ನೀವೆಂದೂ ಲಗ್ನಕ್ಕೆ ತೆಪ್ಪಿಸ್ಕೋಬ್ಯಾಡದು” ಅನ್ನಾದು... ಇಂಗೇಯೆ ಅವಳೆ ಸಸಾರ ಇದ್ದ ಕೆಲವು ಉತ್ತುಮರ ಅಟ್ಟಿಗಳೂ ವೋಗಿ ತನಗೆ ಗೆಲವು ತಂದಿದ್ದ ಚಮಾಚಾಲ್ವ ಬಿತ್ತಿ ಬಂದಿದ್ದು... ಮೊಸರಲ್ಲಿ ಕೆಂಗಣ್ಣಪ್ಪ ತಲಕಾಡಿಗೆ ಅವರ ಸಮ್ಮಂದೀಕರ ಅಟ್ಟಿಗೆ ವೋಂಟಿದ್ದ. ಕೆಂಗಣ್ಣಪ್ಪ ಅಜ್ಜನ ಕಾಲಕೊ ಮುತ್ತಜನ ಕಾಲಕೊ ಅವರು ತಲಕಾಡೇ ಮೂಲವಂತೆ. ಇಂದ್ರೆ ಇವರ ಅಜ್ಜಂಗೂ ಮುತ್ತಜ್ಜಂಗೂ ದಾಯಾದಿಗೊಳು ಕೋಲು ಯವಾರ ನಡುಸಿ ಇವ್ರ ಗದ್ದೆಗಳೆಲ್ಲ ಲಪಟಾಯಿಸಿದ್ರಂತೆ. ಇಲ್ಲಿಗೆ ಬಂದಮ್ಯಾಲೆ ಇವರಜ್ಜ