ಪುಟ:ವೈಶಾಖ.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

xvii ಚದುರಂಗರು ಹುಟ್ಟಿದ್ದು ೧೯೧೬ರಲ್ಲಿ ಮೈಸೂರಿನ ಹತ್ತಿರದ ಕಲ್ಲಹಳ್ಳಿಯಲ್ಲಿ. ಮೈಸೂರಿನಲ್ಲಿ ವಿದ್ಯಾಭ್ಯಾಸ. ೧೯೪೧ರಲ್ಲಿ ಬಿ.ಎ. ಪದವಿ. ೧೯೪೮ರಲ್ಲಿ ಮೊದಲ ಕಥಾಸಂಕಲನ 'ಸ್ವಪ್ನಸುಂದರಿ'ಯ ಪ್ರಕಟಣೆ. ಆಮೇಲೆ ಕಾದಂಬರಿ 'ಸರ್ವಮಂಗಳಾ', 'ಉಯ್ಯಾಲೆ', 'ವೈಶಾಖ', 'ಹೆಜ್ಜಾಲ' ಹೊರಬಂದವು. 'ಸತ್ಯದ ಝೇಕು', 'ಕುಮಾರರಾಮ', 'ಇಣುಕುನೋಟ', 'ಬಂಗಾರದ ಗೆಜ್ಜೆ', “ಮೀನಿನ ಹೆಜ್ಜೆ', 'ಕ್ವಾಟೆ', 'ಮೃಗಯಾ' ಕಥಾಸಂಕಲನಗಳು. 'ನನ್ನ ರಸಿಕ' ಎಂಬ ಗದ್ಯಗೀತೆ, ಚುಟುಕಗಳ ಸಂಗ್ರಹ, ಸಮಗ್ರ ಕಥೆಗಳು ಹಾಗೂ ಸಮಗ್ರ ನಾಟಕಗಳು ಪ್ರಕಟವಾಗಿವೆ. ಇವರ 'ವೈಶಾಖ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 'ಮೃಗಯಾ' ಕಥಾಸಂಕಲನಕ್ಕೆ ೧೯೯೪ರ ಅತ್ಯುತ್ತಮ ಕಥಾಸಂಕಲನ ಪ್ರಶಸ್ತಿ, ೧೯೯೩ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪುರಸ್ಕಾರ. ೧೯೯೪ರಲ್ಲಿ ಮಂಡ್ಯದಲ್ಲಿ ನಡೆದ ೬೩ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಚದುರಂಗರೇ ನಿರ್ದೆಶಿಸಿ, ನಿರ್ಮಾಣ ಮಾಡಿದ 'ಸರ್ವಮಂಗಳಾ' ಚಿತ್ರದ ನಿರ್ದೇಶನ, ಕತೆ, ಚಿತ್ರಕಥೆಗಾಗಿ ಮತ್ತು 'ಉಯ್ಯಾಲೆ' ಚಿತ್ರದ ಸಂಭಾಷಣೆಗಾಗಿ ಪ್ರಶಸ್ತಿ ದೊರೆತಿದೆ. - ೧೯೯೮ರಲ್ಲಿ ಅಕ್ಟೋಬರ್ ತಿಂಗಳ ಹತ್ತೊಂಬತ್ತನೇ ತಾರೀಖಿನ ದೀಪಾವಳಿಯ ಸದ್ದಿನಲ್ಲಿ ಚದುರಂಗರು ಸದ್ದಿಲ್ಲದೆ ಕಣ್ಮರೆಯಾದರು. 3 3