________________
ಸಮಗ್ರ ಕಾದಂಬರಿಗಳು ೧೨೭ “ನಿನ್ನ ಅಣ ತಕ್ಕಂಡು ನಾಯೇನು ಮಡಿಕೊಳ್ಳಿ, ನಿಂಗ?... ನಂಗೆ ಬೇಕಾಗಿರುದು ನಿನ್ನ ಹೃದ-ಲಕ್ಕ... ಇದ್ರೂ ಈಟು ಜಿನದಿಂದ್ಲವೆ ನನ್ನೊಟೇಲಿ ಉಟ್ಟಿದ ಕೂಸಿನಂಗೇ ಸಾಕಿನ್ನಿ ಕನೊ. ಸಪ್ಪಟೆ ಮಾತಲ್ಲ. ಬೇಕಾದರೆ ನಿನ್ನ ಹೈದ್ರೇ ಕ್ಯಾಳು” ಅನ್ತಾ ಅನ್ತಾ ಇನ್ನೊಸಿ ಹೊಗೆಸೊಪ್ಪನ್ನೂ ಈಳೆದೆಲೇನೂ ದವಡೆಗೆ ವತ್ತುರಿಸಿಕೊಂಡು, ಅಯ್ಯನೂವೆ ಅವನು ಕಲಿತ ಬುದ್ದೀನೆಲ್ಲ ಯೆಚ್ಚ ಮಾಡಿದ್ದ. ಅವರ ಅತ್ರ ಆದಾವುದೂ ಬೇಯಿಲ್ಲ. ಕಡೀಕೆ ತೊಪ್ಪೆ ತಾರಿಸಿದ ನೆಲದ ಮ್ಯಾಲೆ ಹಾಸಿ ಉದ್ದುದ್ದಕೆ ಬುಂಡಮ್ಮಾರ ಮುಂದೆ ಮನಗಿ, ಕಯ್ಯ ಮುಕ್ಕಂಡು - “ನನ್ನ ಕಣ್ಣಾವೆ ನಿಮ್ಮಟ್ಟಿ ಬುಡಸ್ತಿರನಿಲ್ಲ, ಬುಂಡಮಾರೆ. ಈ ನಮ್ಮುಡುಗನೂ ಇವನ ಅವ್ವನ ಕುಟ್ಟೆ ಯೋಳ್ತಾನೆ ಇದ್ದಾನೆ. 'ಬುಂಡವ್ವಾರು ನನ್ನ ನೀ ಗ್ವಾಡಿಕಳಾಕಿಂತ ಸಂದಾಗಿ ನ್ಯಾಡಿಕತ್ತಾರೆ ಕನವ್ವ ಅಂತ! ಅದಕಲ್ಲ ನಾ ಕ್ಯಾರಾದು. ನನ್ನ ಇರೀ ಹೈದ ಗೆಜ್ಜುಗನೆ ಇರೋದು ಒಂದೆ ಚಪಲ, ಬುಂಡುತ್ತಾರೆ. ತಾನಂತೂ ಇದ್ಯ ಕಲೀನಿಲ್ಲ. ತನ್ನ ತಮ್ಮ ಆದ್ರೂವೆ ನಾಕು ಅಕೃರ ಕಲ್ಲು ಮುಂದಕೆ ಬರಲಿ, ಅಂತಾವ...ನನ್ನ ಇರೀ ಹೈದ ಆಸ್ಯ ನೆರವೇರಿಸಿಕಡಾದು ನಿಮ್ಮ ಕಯ್ಯಲಿ ಅದೆ..” ಅಯ್ಯ ಬೇಡುತಾನೆ ಇದ್ದ... ಇದ್ಯ ಕಲಿಯಕ್ಕೆ ಅವರ ಅಟ್ಟಿ ಜೀತದಿಂದ ನನ್ನ ಬುಡಿಸಬೇಕೂಂತ ಇರಾದು ಅನ್ನಾ ಕಾರಣ ಕ್ಯಾಳಿ, ಬುಂಡಮಾರ ಉಬ್ಬಿನ ಗಂಟು ಬುಟ್ಟೋಯ್ತು. “ಓ, ಇದ್ಯ ಕಲುಸಕ್ಕೆ ಇವ್ರ ಜೀತ ಬುಡಸ್ತಾ ಇದ್ದೀಯ?... ಈ ಮಾತ ಮೊದ್ದೆ ಯಾಕೆ ಯೋಳ್ಳಿಲ್ಲ?... ಈಟು ಸಣ್ಣ ಇಸ್ಯಕ್ಕೆ ನಿನ್ನ ದೊಡ್ಡ ಸರೀರವ ಕುಗ್ಗುಸಿ, ತಗ್ಗುಸಿ, ಹ್ಯಾಪಾಯಾಗಿ, ಅಲ್ಲುಕಿರುದು ನೆಲದ ಮ್ಯಾಲೆ ಅಡ್ಡಡ್ಡ ಬಿದ್ದುಕಾಬೇಕಾಗಿತ್ತ?... ಮೊದ್ಧ ನ್ಯಾರವಾಗಿ ಯೋಳಿದ್ರೆ ಸಂತೋಷವಾಗಿ ವಷ್ಟುಗತ್ತಿದ್ದೆ. ಈಟೊಂದು ಸತಾಯಿಸ್ತಾನೆ ಇನ್ನಿಲ್ಲ. ಯೇಲೇಳು. ಗಂಡಸು ಅನ್ನುಸಿಕೊಂಡೋನು ಯಾವುದೇ ಇಸ್ಯ ಆದರೂವೆ ಎಣ್ಣೆಂಗಕ್ಕೂ ಕಡ್ಯಾಗಿ ಇಂಗೆ ಬೇತುಕೊಬ್ಯಾಡದು” ಅನ್ತಾ ಅನ್ತಾನೆ ಕ್ವಾಣೆ ವಳಕ್ಕೊದ ಬುಂಡಮಾರು ಎಲೇನೂ ಅಡಿಕೇನೂ ತಂದು ನಮ್ಮಿಬ್ಬರೂ ಕ್ವಟ್ಟು, “ತತ್ತ ಇಲ್ಲಿ ದುಡ್ಡ” ಅಂತ ಈಸಿಗೊಂಡು, ಅದ್ರ ಎಣಿಸ್ತೇಯ ನಡೀಗೆ ಸಿಕ್ಕಿದ್ದ ಇಮ್ಮಣಿ ಚೀಲಕೆ ತುರುಕ ಇರಾದ ಕಂಡು, ನಮ್ಮಯ್ಯ “ಇದೇನ ಅವಾರೆ-ದುಡ್ಡ ಲೆಕ್ಕ ಮಾಡೇಯ ಚೀಲಕ್ಕೆ ತುರುಕಿದ್ದೀಯಲ್ಲಿ?” ಅಂದುದಕೆ ಆ ಮುದಿಕಿ “ಸರಿ ಕನೋ, ನಿಂಗ. ನೀ ಯೋಳೋ ಮಾತ ನಾನೂ ವಪ್ಪುದಿ. ಆದ್ರೆ