ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೮ ವೈಶಾಖ ನಂಗೆ ಲೆಕ್ಕಾಚಾರ ಮಾಡಕ್ಕೆ ಬರೋಲ್ಲದಲ್ಲ?” – ಅಂದು, ನನ್ನ ಕಡೀಕೆ ತಿರುಗಿ, ಕಣ್ಣ ಕಿವುಕಿ, ತುಂಟಾಟದ ನಗೆ ನಕ್ಕು, ಅಮ್ಮಾಕೆ ಮೊಖ ಬಿಕ್ಕಂಡು ಗಂಬೀರಾಗಿ “ಕ್ವಾಡೋ ನಿಂಗ, ನಿಯತ್ತಿರೋರ ತಾವು ಈ ಲೆಕ್ಕಾಚಾರ ಗಿಕ್ಕಾಚಾರ ಯಾವುದೂವೆ ಬೇಕಾಗೇ ಇಲ್ಲ. ನೀಯತ್ತಿಲ್ಲೆ ಇರೋರತ್ರ ಮಾತ್ರ ಮಯ್ಯಲ್ಲ ಕಣ್ಣಾಗಿ ಲೆಕ್ಕ ಮಾಡಾಬೇಕಾಯ್ತದೆ... ಒಂದು ಮಾತು ಯೋನಿ ಕ್ಯಾಳು. ಸಾಚ ಯಾವಾನು, ನಸ್ಥಹರಾಮ್ ಯವಾನು ಅನ್ನೋದ ಪತ್ತೆ ಮಾಡಾದು ಒಬ್ಬ ಗನಂದಾರಿ ಇಸ್ರಾವ?... ಒಬ್ಬ ಮನುಸ ನಡದಾಡೋ ರೀತೀಲಿ, ಯದುರಲ್ಲಿ ನಿಂತುಗಂಡು ಮಾತಾಡೋ ವರಸೇಲಿ, ಅವ್ವ ಯೋಗೇಯ ಅಳೆಯಕ್ಕಾಗಕ್ಕಿಲ್ಲ? ಈಗ ತತ್ವ ತಕರಾರು ತಕ್ಕಂಡೇನ? - ನಿನ್ನ ಹೈದ್ರ ನೀ ಕರದಂಡು ವೋಗು. ಅವ್ರು ಇದ್ಯ ಕಲ್ಲು ಸಂಪನ್ನಾಗಿ ಬದುಕ್ತಿ”- ಹರಸಿ, ನಾವಿಬ್ರೂವೆ ಕಯ್ಯ ಮುಕ್ಕೊಂಡೆ ಬೀದಿಗೆ ಇಳಿತಿರೋನೂವೆ ಅಟ್ಟಿ ಮುಂಬಾಗಿಲವರೂ “ಅದೂವೆ, ನಿನ್ನ ಕಾಣದೆ ಇದ್ರೆ ಸಿಬ್ರಿ ಆಯ್ತದೆ ಕನೋ, ಲಕ್... ಒಗ್ಗಿದ ಪದಾರ್ತವ ಬುಟ್ಟು ಕಳುಸೋದು ಪರಮ ಕಸ್ಟ.. ಆಗಿಂದಾಗ ಬತ್ತಾ ಇರು. ಈ ಮುದುಕಿ ಬಿದ್ದೋಗೊ ಮರ, ಬೀಸೋಗೊ ಗಾಳಿ ಅಂತ ಮತ್ತು ಗಿರು ಬುಟ್ಟಿಯೆ, ಜ್ವಾಕೆ.. ಆಗೀಗ ಬಿಡುವು ಆದಾಗ ಬಂದು, ನನ್ನ ಕಲ್ಕ ಕೆಲಸ ಕಿತ್ಕಂಡು, ಸಾಯ ಮಾಡು-ನಾನೂವೆ ನೀ ಮಾಡ್ಡ ಕೇಮ್ಮೆ ಅನ್ನೊ ಇಸ್ಕೊ ಕ್ಲಷ್ಟೇ ಕ್ವಡ್ತೀನಿ” ಅಂದಿದ್ದರು... ಕೆಂಗಣಪ್ಪ ಕಟ್ಟಿದ್ದ ಆರುನೂರು ರೂಪಾಯಲ್ಲಿ ನುರು ರೂಪಾಯಿ ಅಂಗೋಯ್ತು. ಇನ್ನುಳಿಕೆ ಐನೂರು ರೂಪಯ್ಯಲ್ಲಿ ನುರು ರೂಪಾಯಿ ಅಣ್ಣ ಸತ್ತಾಗ ಅದಕೆ ಇದಕೆ ಕರ್ಚಾಗೋಗಿತ್ತು - ಇನ್ನು ಅವ್ವನ ತಾವು ಉಳಿದದ್ದು ನಾನೂರು ರೂಪಾಯಿ. ಅಮ್ಮ ತಕ್ಕಂಡು, ಅಯ್ಯ ನನ್ನೂ ಕಂಡು, ಕೆಂಗಣ್ಣಪ್ಪ ಅಟ್ಟೆ ತಾವಿಕೊಕೋಗಿ, “ಸೋಮಿ-ಕೆಂಗಣತ್ತಾರೆ... “ಅಂತ ಅವರ ಅಟ್ಟಿ ಆಚೇ ನಿಂತು ಕರೆದಾಗ, “ಯಾಕೆ ಬಂದ್ಯೋ, ನಿಂಗ?” ಅಂತ ವೊರೀಕೆ ಬಂದೋಳು ಅಮ್ಮ ಎಡತಿ ಸಿದ್ದಮ್ಮ. - ಕೆಂಗಣಪ್ಪಂಗೆ ಸದ್ಯುಆದ ಎಡತಿ ಕೂಟ್ಟದ್ದ ದ್ಯಾವರು, ಕೆಂಗಣ್ಣಪ್ಪ ಸೇರಿಗೆ ಅವಳು ಸವ್ವಾಸೇರು! ಅವಳ ಮುಂದೆ ಅವನೇನಾರ ಬಾಯಿ ಬಿಚ್ಚಕ್ಕೆ ಅಪ್ಪಣೆ ಉಂಟ?- ಯಾವತ್ತೂವಿ ಒಳ್ಳೆ ಉಲಿ, ಉಲಿ ಬಿದ್ದಂಗೆ ಬಿದ್ದು ಬುಡೋಳು!.. ಅವಳ ಕಂಡು, ಈ ಎಂಗಸಿನ ಕುಟ್ಟೆ ಯಾಕೆ ಮಾತು, ಇವಳತ್ತ ಯವಾರ ಸುದ್ದಿಲ್ಲ, ಅಂದುಕಂಡೋಯಾನೊ