ಪುಟ:ವೈಶಾಖ.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೨೯ “ಇಂಗೇ ಬಂದೆ, ಸಿದ್ದಮ್ಮಾ...” ಆಡಬೇಕಾಗಿದ್ದ ಮಾತ ಆಯ್ಯ ಇರುಕಿಸಿಕಂಡಿದ್ದ. ಅವರ ಅಟ್ಟೇಲಿ ಜೀತಕಿದ್ದು, ಈ ಎಂಗಸಿನ ಘಾಟಿನ ಅನುಭೋಗ ಸಂದಾಗಿ ಆಗಿದ್ರಿಂದ, ನಾನು ಅವಳೆ ಮೊಖ ಕ್ವಡದೆ, ಅಯ್ಯನ ಇಂದ್ರೆ ಅವುತುಗಂಡಿದ್ದೆ. ಬೆಳ್ಳಿ ಡಬ್ಬಿಯಿಂದ ಮೂಗಿನ ಹೊಳ್ಳೆಗಳಿಗೆ ನಸ್ಯ ಯೇರುಸ್ತ, “ಯಾರೂ ಕೇಮಿ ಸುಮ್‌ಸುಮ್ಮೆ ಬರಕ್ಕಿಲ್ಲ ಕನ, ಅದೇನು ಗಂಡರತ್ರ ಯೋಳಬೇಕೂಂತ ಬಂದ್ರೂ, ಅಮ್ಮ ನನ್ನ ಕುಟೇ ಯೋಳು, ಪರವಿಲ್ಲ” ಅಂದ್ಲು. ಅಯ್ಯಂಗೆ ಒಂದು ಚಣ ಯೇನ ಯೋಳಕ್ಕೂ ತೋಚೆ, ಬಾಯಿ ವೊಲದಿರೋನಂಗೆ ನಿಂತ. ಸಿದ್ದಮ್ಮ ಚೌಕದಿಂದ ಮೂಗ ವರುಸ್ತ, “ಅದೇನ ಇಸ್ಯ, ಯೋಳಬ್ಯಾಡದ?” ಪುನಾ ಕ್ಯಾಳಿದ್ದು. ಅಯ್ಯ ತಲೆ ಕೇರಿತ ನಿಂತೇ ಇದ್ದೆ. ಈಪಾಟಿ ಚಂಡಿಸಿದ್ರು ಸೊಲ್ಲುಯೆತ್ತದೆ, ಯೇನ ಯೋಳಕ್ಕೂ ತಿಳೀದೆ, ಕಣ್ಣು ಕಣ್ಣು ಬುಡ್ತ ನಿಂತಿದ್ದ ಅಯ್ಯನ ಮೊಖ ಕ್ವಾಡ್ ಕ್ವಾಡ್ರ, ಮುದ್ದಿನ್ನದ ವ್ಯಾಳ್ಯದಲ್ಲಿ ನೆತ್ತಿಗೆ ಏಾ ಬರೋ ಸ್ವಾಮಿ ತರ, ಕ್ಯಾಣ ಸಿದ್ದಮ್ಮನ ತಲೆಬುಂಡೆಗೆ ಜಟಜಟ್ಟೆ ಏಕ್ತಾ ವೋಯ್ತು. “ಅಸ್ಸಿ, ಯೋಳೊ ಇಸ್ಯ ಯಾನೂ ಇಲ್ಲೆ ಇದ್ದಮ್ಯಾಗೆ, ಬ್ಯಾತಾಳನಂಗೆ ಇಲ್ಲಿ ಮೊಕ ಮೊಕ ನ್ಯಾಡ ನಿಂತು ಯೇನ ಪರ್ಯೋ ?- ಸುಮ್ಮೆ ಬುಡು ನಿನ್ನ ಗಾಡ್ಯ” ಅಂತೇಳಿ, ಇಂದೈತಿರುಗ್ತಿರೋನೂವೆ, ಕಳ್ಳಕೊತ್ತಿ ಅಂಗೆ, ಮೆತ್ತಗೆ ಕದೀನ ಮರಿಂದ ಈಚೆಗೆ ಕಡುದ, ಕೆಂಗಣಪ್ಪ, - “ಯಾಕ್ಲ ನಿಂಗ, ಅಮಾರು ಕ್ಯಾಳಿದ ಮ್ಯಾಗೆ ಅದೇನು ಇಸ್ಯ ಯೋಳಿಬುಡು” ಅಂದ. ಎಡತಿ ಮುಂದುಗಡೆ ಕೆಂಗಣ್ಣಪ್ಪ ಕೊತ್ತಿಮರಿ ಆಯ್ತಿದ್ದದ್ದ ನಾನು ನ್ಯಾಡಿದ್ದು ಇದೇ ಮೊದಲ ಸರ್ತಿಯೇನಲ್ಲ. ಇಂದ್ರೆ ಇವರ ಅಟ್ಟಲೆ ಜೀತಕಿದ್ದಾಗ, ಈ ನಾಟಕವ ನಾನು ಪರ್ತಿನಿತ್ಯ ಸ್ವಾತ್ತಿದ್ದದ್ದೆ ಅಲ್ವ?...ಎಡತಿ ಎದುರಿಗಿಲ್ಲೆ ಇದ್ದಾಗ, ಸಿಕ್ಕುಸಿಕ್ಕುದೆರ ಮ್ಯಾಲೆಲ್ಲ ದಪ್ಪಾನೆ ಮೀಸೆ ತಿರುವ, ಕಣ್ಣ ಮೇಡರಿಸ್ತಿದ್ದ ಮನುಸ, ಎಡತಿ ಅಟ್ಟಿ ವಳುಗಡೆ ಇದ್ದಾಗ, ವೊರಗಿನ ಜಗಲೀಲಿ ಕುಂತು, ಪರವೂರಿನೊರು ಯಾರಾರ ಬಂದ್ರೆ, ಅವರ ಕುಟ್ಟೆ, ತನ್ನ ಆಸ್ತಿ, ತನ್ನೆತ್ತು ಎಮ್ಮೆ ದನಕರ, ಇವೆಲ್ಲಾದರ ಇಚಾರಾನು ತಪಸೀಲಾಗಿ ಊದಿ, ಕಡೀಕೆ ಗಟ್ಟಾಗಿ ವಳುಗಡೇಲಿರೋ ತನ್ನ ಎಡತಿಗೆ ಕ್ಯಾಳಿಸೋವಂಗೆ, ತನ್ನೆಡತಿ ವಗೆತನದ ಅಚ್ಚುಗಟ್ಟಿ ವೊಗಳ, ಅವಳು