ಪುಟ:ವೈಶಾಖ.pdf/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೦ ವೈಶಾಖ “ರಾಜಧಾನಿಯಂತಾ ಎಂಗಸಲು"- ಅಂತ ಬೇತುಕತ್ತಿದ್ದದ್ದ ತಾನು ಅದೇಟು ಸಲ ಕೇಳಿರನಿಲ್ಲ?... ಸಿದ್ದಮ್ಮ ಕೆಂಗಣಪ್ಪಂಗೆ ಏಡನೆ ಸಮ್ಮಂದವಂತೆ. ಮೊದಲೆ ಎಡತಿ ಒಳ್ಳೆಯೋಳಂತೆ. ಆ ಪುಣಾತಿಸ್ತಿತಿ ಇವ್ರ ಜ್ವತೇಲಿ ನೆಟ್ಟಗೆ ನಾಕು ವರುಸ ಸಂಸಾರ ಮಾಡ್ತಿಲ್ಲವಂತೆ. ಈ ಮಾರಾಯನೊ ಊರಿನಾಗೆ ಒಂದು ಪತ್ತೆ ಎಣ್ಣು ಕಂಡುದ್ದೆ ತಡ, ಅದರ ತಿಕ ಮೂಸಿಗಂಡು ಓಡಾಡೂ ಜಾತಿ!... ಈವಯ್ಯನ ಚರ್ಯ ಕಂಡು ಅಯಮ್ಮ ಊರತಿ, ಕಡ್ಯಾಗಿ ಮೈಸೂರ ಚಯದ ಆಸ್ಪತ್ರೆ ಸೇರಿ, ಯಾವತ್ತೂ ಒಂದು ಜಿನ ಸಿವನ ಪಾದ ಸೇರಿಕಂಡಿದ್ದು- ಈ ಯೆಲ್ಲ ಚಮಾಚಾರೈ ಅಯ್ಯನೆ ಒಂದು ನಾತ್ರೆ, ನಾನು ನಿದ್ದೆ ಮಾಡ್ತಾ ಅಪ್ಪೆ ಅಂತ ತಿಳುದು, ಅವ್ವನ ಕುಟ್ಟೆಗುಟ್ಟಾಗಿ ಯೇಳಿದ್ದದ್ದು ಈಗ ಗ್ಯಾಪನ ಆಗಿತ್ತು... ಕೆಂಗಣಪ್ಪ ನಸುಗುನ್ನಿ ಅಂಗೆ, “ಯಾಕ್ಲ ನಿಂಗ, ಅಮಾರು ಕ್ಯಾಳಿದ ಮ್ಯಾಲೆ ಬಂದ ಇಸ್ಯ ಅದೇನು ಯೋಳಿಬುಡು” ಅಂದಾಗ, ಅಯ್ಯ ತಡರುಸ್ತ ಬಾಯಿ ಬಿಚ್ಚದ. - “ಕೆಂಗಣಪ್ಪಾರೆ, ನನ್ನ ಇರಿ ಹೈದ ಲಗ್ನಕ್ಕೆಂತ ನಿಮ್ಮತ್ರ ಸಾಲನೇನೊ ಮಾಡ್ಡೆ. ಆದ್ರೆ ಆ ಬಿಸಿಲಮಾರಮ್ಮ ತಾಯಿಗೆ ನಮ್ಮ ವಂಸದ ಮ್ಯಾಲೆ ಅದೇನು ಕ್ವಾಪವೋ ಕಾಣೆ. ತಲಕಾಡ್ಲೆ ನಿಮ್ಮ ಜ್ವತೆ ಬಂದಿದ್ದೋನ್ನ ಆ ಕಾವೇರಿ ವೋಲೆ ತಿಂದಕತ್ತು...” ಅಂತಿದ್ದುದ ಅಲ್ಲಿಗೆ ತುಂಡುಮಾಡಿ, “ಅದೆಲ್ಲ ಗ್ಯಕ್ಕೆ ಅದಲ್ಲೊ, ನಿಂಗ... ಅದು ಅವನ ನಶೀಬು... ಮುಂಬೈ ನಮ್ಮ ಅಣದ ಇಸ್ಯ ಯೆಂಗೆ ಚುಕ್ತಾ ಮಾಡಬೇಕು ಅಂತೀಯೆ, ಅದು ಹ್ಯಾಳಪ್ಪ* ಕೆಂಗಣಪ್ಪ ಬ್ಯಾರೆ ಮಾತ ಕಿವಿಗೆ ಅಕ್ಕಳ್ಳದೆ ಮುಖ್ಯ ಇಸ್ಯಕ್ಕೇ ಇಳುದಿದ್ದ... ಅಯ್ಯ ನಾನೂರು ರೂಪಾಯಿ ಅಂಗಿ ಸಿಕ್ಕಿದ್ದ ಕಿಂದ ತಗದು ಎಣಿಸಿ ಎಣಿಸಿ ದೂರದಿಂದ ಕೆಂಗಣಪ್ಪ ಕಯ್ಯಗೆ ಆಕಕ್ಕೊದಾಗ, ಉಬ್ಬ ಗಂಟಾಕಿ, ಉರಿಮಾರಿಯಾಗಿ ನಿಂತಿದ್ದ ಅಮ್ಮ ಎಡತಿ ಸಿದ್ದಮ್ಮ ಸುಮ್ಮೆ ಬಿಗಿಯಾಗಿ ಕಯ್ಯ ನೀಡುದ್ದೇ ಸಮ, ಕೆಂಗಣಪ್ಪ ಮೊಖ ಸುಂಡೋಗಿ ತನ್ನ ಕಯ್ಯ ಕೆಳುಕ್ಕಿಳು... - ಕಯ್ಕೆಗೆ ಬಿದ್ದ ನೋಟುಗಳ ತಾನೂ ಒಂದು ಸರ್ತಿ ಎಣುಸಿ, “ಇದ್ಯಾನೋ ನಿಂಗ- ನಮ್ಮೂರು ನಿಂಗೆ ಊಟ್ಟಿರಾದು ಆರುನೂರು ರೂಪಾಯಿ ಅಲ್ವೇನ್ದ?” ಸಿದ್ದಮ್ಮ ಉಬ್ಬ ಎತ್ಕಂಡು ಕ್ಯಾಳಿದ್ದು... “ಸಾಜ ಕತ್ರವ್ವ. ನಿಮ್ಮೆಜಾನ್ನು ನಂಗೆ ಊಟ್ಟಿದ್ದು ಆರುನೂರು ರೂಪಯೇಯ. ಊಟ್ಟಿದ್ದ ದುಡ್ಡು ಇಲ್ಲ ಅಂತ ಅದ್ಯಾವ ಬಾಯ್ಲಿ ಯೋಲ್ಲಿ? ಆದ್ರೆ,