ಪುಟ:ವೈಶಾಖ.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೩೧ ಈ ನಮ್ಮಸಣ್ಣ ಹೈದ...” ಅನ್ತಾ, ಅಮ್ಮ ಇಂದ್ರೆ ನಾಯಿಮರಿಯಾಗಿ ನಿಂತಿದ್ದ ನನ್ನ ಮುಂಡೇಳುದು ತೋರುಸ್ತ “ಬುಂಡಮಾರ ಆಟ್ರಿಂದ ಜೀತ ಬುಡಸಕ್ಕೆ ಅವು ಕ್ವಿಟ್ಟಿದ್ದ ಸಾಲದ ದುಡ್ಡು ನೂರು ರೂಪಾಯಿ ವಾಪ್ಪು ಮಾಡಬೇಕಾಯ್ತಲ್ಲ” ಅಂದುದೆ ತಡ, ಸಿದ್ದಮ್ಮ ಹಳುಬೀಜ ಸಿಡಿಯೋ ಪರಿ ಸಿಡಿದ್ದು: “ನೀನೂ ಒಳ್ಳೆ ಮನೆತಾನಸ್ ಕನೆ... ಅಲ್ಲ, ನಮ್ಮತ್ರ ಜೀತಿಕಿದ್ದ ಉಡುಗ್ರ ಅಯಿವತ್ತು ಎಚ್ಚಾಗಿ ಕ್ವಂತ ನಮ್ಮಟ್ಟಿ ಬುಡುಸಿ ಅವಳಟ್ಟಿಗೆ ಕೂಡ್ಡೆ, ಈಗ ಲಗ್ಗಕೇಂತ ರೂಪಾಯ ನಮ್ಮತ್ರ ಕಿತ್ಕಂಡು ಅವಳಟ್ಟಿ ಬುಡುಸ್ಥೆ- ಇದ್ಯಾವ ಯವಾಲ್ವ?... ತಗಿ, ತಗಿ: ನಾ ವಪ್ಪನಿಲ್ಲ.” ಅಯ್ಯ ಜರನೆ ಇಳುದೋಗಿ, “ಯಾನ ಮಾಡಲ್ವ?- ಸತ್ತು ಸೊರ್ಗ ಸೇರ ನಮ್ಮ ಇರಿ ಹೈದಂದು ಒಂದೇ ಅಸೆ, ತಾನಂತೂ ಓದು ಬರಾವು ಕಲೀನಿಲ್ಲ. ನಮ್ಮ ವಂಸದಾಗೆ ತನ್ನ ತಮ್ಮಂಗಾದ್ರೂವೆ ಇದ್ಯ ಕಲಿಸುವಾಂತ ಅಪೇಕ್ಷೆ ಪಟ್ಟ... ಆ ಗಂಗಾಬವಾನಿ ಅವನ್ನೇ ನುಂಗಾಕಿ ಆಸೆ ಮ್ಯಾಸ ಮಾಡಿದ್ದು... ಈ ಹಾಳು ಲೋಕದಲ್ಲಿ - ಇದ್ದರೂ ಕರ್ಚು ಮೋದರೂ ಕರ್ಚು... ಯನ ಮಾಡೀರಿ?- ನಾನು ನಂಟು ಇಸ್ಸು ಯೆಲ್ಲಾರನೂವೆ ತಲಕಾಡ್ಡೆ ಕರಕಂಡೊದ್ದು, ಅಲ್ಲಿ ಹೈದ್ರ ಒಪ್ಪ, ಅಲ್ಲಿಂದ ಇಂದ್ರೆ ಬಂದು ನೆಂಟರಿಸ್ಪರೆ ಊಟ... ಒಂದ, ಏಡ... ಕರ್ಚಿನ ಮ್ಯಾಲೆ ಕರ್ಚಾ ಒಂದು ನೂರು ರೂಪಾಯಿವರೂವೆ ಕಯ್ಯ ಬುಡ್ತು... ಒಟ್ಟು ಯೆಲ್ಲಾ ಜಮಾ ಮಾಡುದ್ರೆ ಇನ್ನೂರು ರೂಪಾಯಿ ಆಗಿಲ್ಲ?- ನೀವೇ ಕೂಡಿ ನ್ಯಾಡಿ...” ಅಂದದ್ದು ಕ್ಯಾಳಿ, ಮೊಖವ ಒಂದು ತರಾಗತ್ನಲ್ಲಿ ಯೆತ್ಕಂಡು, “ಯಾವ ಘನಂದಾರಿ ಲೆಕ್ಕಚಾರ ಇಲ್ಲಿರಾದು?... ಉಡುಗ್ರ ಜೀತದ ದುಡ್ಡು ತಿರುಸಕ್ಕೆ ನೂರು ರೂಪಾಯಿ, ನಿರೀ ರೈ ಸಾವಿನ ಕರ್ಚಿಗೆ ನೂರು ರೂಪಾಯಿ... ಏಡೂ ಸೇರಿ ಇನ್ನೂರು ಆಯ್ತಲ್ಲ... ಊ, ಅದಿರಿ. ಈಗ ನನ್ನ ಕಯ್ಯಗೆ ನೀನಿಕ್ಕಿರಾದು ನಾನೂರೆ ರೂಪಾಯಿ. ಇನ್ನುಳುಕೆ ಇನ್ನೂರು ರೂಪಾಯ ಯೆಂಗೆ ತೀರುಸದೂಂತ ಮಾಡ್ಕಂಡಿದ್ದೀ?” -ಕೊಸಾರೆ ಕ್ಯಾಳಿದ್ದು ಸಿದ್ದಮ್ಮ. ಅದ್ರೆ ತಲೆ ಕೆರೀತ ಅಯ್ಯ ದನಿಯ ಮೆತ್ತಗೆ ಮಾಡಿ ಉಸುರ: “ಇಲ್ನೋಡಿ. ನಾನಿನ್ನೂ ಗಟ್ಟಿಮುಟ್ಟಾಗಿ, ಇನ್ನುಳುಕೆ ಇನ್ನೂರು ರೂಪಾಯೂವೆ ಅದೇನು ದರುಮದ ಬಡ್ಡಿ ಆಕ್ಕತೀರೋ ಅಕ್ಕ, ನಾನು ಮಯ್ಯ ಮುರುದು ಕುಲಿ ಕಂಬಳ ಮಾಡಿ ಗೇದು ನಿಮ್ಮ ಅಣಕೆ ಚೆಕ್ಕಾಸೂ ಲೋಪ ಬರದಂಗೆ ತೀರುಸ್ತೀನಿ.” ಈ ತಾವಿಗಂಟ ಸುಮ್ಮೆ ಕ್ಯಾಳ ನಿಂತಿದ್ದ ಕೆಂಗಣಪ್ಪ,