________________
೧೩೨ ವೈಶಾಖ “ಅದೆಲ್ಲಾದಾದೊ ನಿಂಗ, ಆ ತಾವಿಗಂಟ ಕಾಯಕ್ಕಾದಾತ?” ಅಂದ. ಸಿದ್ದಮ್ಮನಂತೂ ಗುಡುಸಾಗೇಯ, “ಕಾಯೊ ಗೀಯೊ ಮಾತೆಲ್ಲ ಯಾಕ? ... ಗಮ್ಮನ ಈಗ್ಗೆ ಯೆಂಗೆ ಫೈಸಲ್ ಮಾಡೋಕು ಅನ್ಮಾದು ವಸಿ ಯೋಚ್ಛೆ ಮಾಡು.” ತಾಕೀತು ಮಾಡಿದ್ದು. “ನಾನಿನ್ನೇನ ಯೋಚ್ಛೆ ಮಾಡಾನೆ?... ಇದ್ದೆ ಯೋಚ್ಛೆ ಮಾಡ ಕುಂತುಗಳಾಕೆ ನನ್ನ ತಾವು ನಿಮ್ಮ ಅಳೆ ಎಕ್ಕಡವೂ ಉಳುದಿಲ್ಲ”- ಅಯ್ಯ ಪೇಚಾಡ್ಡ. ಆಗ ಕೆಂಗಣಪ್ಪ ಚುಕಾಯಿ, “ಒಂದು ಕೆಲ್ಸ ಮಾಡೋ, ನಿಂಗ. ನುರು ರೂಪಾಯ್ಕೆ ನಿಮ್ಮಿ ಹೈದ ನಮ್ಮ ತಾವು ಚೀತಕ್ಕಿಡು. ಉಳಿಕೆ ನುರು ರೂಪಾಯಿ ನೀನು ಕೂಲಿ ಕಂಬಳ ಮಾಡಿ ತೀರುಸು” ಅಂದುದಕ್ಕೆ ಸಿದ್ದಮ್ಮ ಸಿಡಾರೈ “ಅಸ್ಸಿ, ಇದ್ಯಾವ, ಇದ್ಯಾವ ಚಂದಕೆ ಮಾತಾಡಿ?, ಈವಯ್ಯಂಗೆ ಯಾವಾಗ ಕ್ವಾಡು, ಸಣ್ಣ ಹೈಕಳೇ ಆಗಬೇಕು.... ಅದ್ಯಲ್ಲ ಬ್ಯಾಡಕನೊ ನಿಂಗ. ನೀನೆ ನಮ್ಮ ತಾವು ಇದ್ದು ಬುಡು, ವರ್ಸಕೆ ನೂರೈವತ್ತರಂಗೆ ತೀರುಸ್ಕತ್ತೀನಿ” ಅಂದುಬುಟ್ಲು. ನಾನು ತಿರುಕ್ಕಂಡು ಅಯ್ಯನ ಮೊಖ ನ್ಯಾಡ್ಡೆ, ಅದು ಸಟ್ಟನೆ ಸೊರಗೊಗಿತ್ತು. ಕಣ್ಣುಂಬ ಬೆಪ್ಪು ಮೆತ್ತಿಗಂಡಿತ್ತು. ಆ ಅನ್ನದೆ ಊ ಅನ್ನದೆ ಗೊಂಬ್ಯಾಗಿ ನಿಂತಿದ್ದ. “ಬ್ಯಾಗ ಬ್ಯಾಗ ಯೋಳಪ್ಪ, ವಳಗೆ ನಂಗೆ ಅಟ್ಟಿ ಕೆಲ್ಸ ಮಸ್ತಾಗಿ ಇಟ್ಟಾಯ್ತದೆ.” -ಸಿದ್ದಮ್ಮ, ಆತುರಿಸಿದ್ದು. ಅಯ್ಯ, ಯೇನೋ ಯೋಳಕ್ಕೊಯ್ತಾನೆ, ಸುಮ್ಮಕಾಯ್ತಾನೆ, ಯೇನೋ ಯೋಳಕ್ಕೊಯ್ತಾನೇ, ಸುಮ್ಮಕಾಯ್ತಾನೆ... ಪುನಾ ಸಿದ್ದಮ್ಮ“ಅದೇನು ಬಾಯಿ ಬುಡಪ್ಪ...” ಪುಸಲಾಯಿಸಿದ್ದು. “ಉ. ಇನ್ನೇನ ಮಾಡಾದು?- ನಾನೇ ಇದ್ದೀನಂತೆ. ವರುಸಕೆ ಇನ್ನುರು ಮಾಡುಕನ್ನಿ.”- ಅಯ್ಯ ಬಿಕ್ಕಟ್ಟಿಂದ ಈ ಮಾತ ವೊರಾಕಿದ್ದ. ಆದರೆ ಸಿದ್ದಮ್ಮ ವಪ್ಪಬೇಕಲ್ಲ... ತನ್ನ ಕಯ್ಲಿ ಆಗಿದ್ದ ಬಂಗಾರದ ಪೌಚಿ ತಿರುವ, “ನನ್ನ ತಾವು ಇರಾದು ಒಂದೇ ಮಾತು- ಒಂದು ತುರುಬಿಗೆ ಒಂದೇ