________________
ಸಮಗ್ರ ಕಾದಂಬರಿಗಳು ೧೩೩ ಊವು ಅನ್ತಾರಲ್ಲ, ಅಂಗೆ.... ಸುಮ್ಮೆ ವಪಿಗಂಬುಡು” ಅಂದ್ಲು. ಅಯ್ಯನ ಕಣ್ಣಲ್ಲಿ ನೀರು ಕಿತ್ತುಗತ್ತು “ನಾ ವಪ್ಪಿಗಂದ್ರೆ, ಇನ್ನೂ ಆಯಿವತ್ತು ರೂಪಯಿ ಕೊರೆ ಉಳುದೇ ಉಳುಕತ್ತದೆ. ಆ ಮ್ಯಾಕೆ ನನ್ನ ಹೈದ್ರ ಮಟಕ್ಕೆ ಸೇರಿಸಾದು ಯೆಂಗೆ?” =ತನಗೆ ತಾನೆ ಮಾತಾಡೋನ ತರ ಅಂದ. ಸಿದ್ದಮ್ಮ ಬೇಜಾರಿಂದ ಆಕಳಿಸ್ತ, “ಹಯ್ಯೋ, ನಿಂಗೊಂದು ಉಚ್ಚು, ಇವಂಗೆ ಇದ್ಯ ಕಲಸಿ, ಇನ್ನು ಅದ್ಯಾವ ರಾಜ್ಯ ಆಳಬೇಕಾಗಿದ್ದದು?... ಬ್ಯಾಂತು ಬ್ರಾಂತು... ಇವುನ್ನೂ ಯಾವುದಾರೂ ಅಟ್ಟಿಗೆ ಸೇರುಸಿ, ಆ ಉಳುಕೆ ಅವತ್ತ ತಂದ್ವಕಡು. ನಿನ್ನ ಸಾಲವೂ ಒಂದೇ ವರುಸಕೆ ತೀರೋಯ್ತದೆ.” ಖಡಕ್ಕಾಗಿ ಅಂದು, ಇನ್ನೊಂದು ಅರೆಗಳಿಗೂ ಅಲ್ಲಿ ನಿಲ್ಲೆ ಅಟ್ಟಿ ವಳೀಕೆ ನಡೀತಿದ್ದು, ಕೆಂಗಣಪ್ಪನೂವೆ “ಅಂಗೇ ಮಾಡ್ಲ” ಅಂದೋನು ಎಡತಿ ಇಂದಿಂದೇಯ ವೊಂಟೋದ. ಅಯ್ಯ, ಮುಂದ್ರೇನು ಮಾಡೋದು ತೋಚ್ಚೆ ಕಲ್ಲುಪ್ತತುಮ್ಯಾಗಿ ನಿಂತೇ ಇದ್ದ. ಕಣ್ಣಿಂದ ಗಡಿಗೆ ನೀರ ಬೊಗ್ಗಿಸ್ಟಂಗೆ ಲೊಳಲೊಳೆ ನೀರು ಸುರಿಯಕ್ಕೆ ಮುಟ್ಟುಗತ್ತು, ನಂಗೂ ಅಳ ಬಂತು. ಜೋಗ್ನಿಂದ ಅಳಕ್ಕೆ ಸುರು ಮಾಡ್ಡೆ. ಅಯ್ಯ, ನನ್ನ ತಬ್ಬಿಕಂಡು “ಹಯ್ಯೋ, ನನ್ನ ಕಂದ-ನೀನು ಓದು ಬರಾವು ಕಲ್ಲು, ದೊಡ್ಡ ಮನುಸ. ಅನ್ನಿಸಿಕಾಬೇಕು ಅಂತ ನಿನ್ನಣ್ಣ ನಿನ್ನ ಮ್ಯಾಲೆ ಇಟ್ಟುಕಂಡಿದ್ದ ಆಸೆಯೆಲ್ಲಾನೂವೆ, ನಿಮ್ಮಣ್ಣನ ಜ್ವತೆಗೇಯ ಆ ಹಾಳು ಹೊಳೆ ಊಚ್ಚಿಗಂಡೋಯ್ತಲ್ಲೊ...” -ದುಕ್ಕುಡಿಸಿ ದುಕ್ಕುಡಿಸಿ ಅತ್ತ... ಗುತ್ತಿಗೆ ಬಂದು ಅವ್ವಂಗೆ ನಡುದ ಸಂಗ್ತಿ ತಿಳುಸ್ತಾಗ-ಚೌಡಿ, ಬಿಸಿಲ ಮಾರಮ್ಮ, ಜಡೆಮಾನಿ, ಈ ಯೆಲ್ಲಾ ದ್ಯಾವರಗಳು ವೆ ಅವಳು ಸ್ಯಾಪ ಆಕಿದ್ದೂ ಆಕಿದ್ದೇ: “ಈ ಹಾಳು ದ್ಯಾವರುಗಳ ನಂಬುಕಂಡು ನಾವು ಕೆಟ್ಟೋ... ನಮ್ಮ ಮೊಟ್ಟೆ ಮೂಟ್ಟೆ ಕಟ್ಟಿ, ಈ ಹಾಳು ದ್ಯಾವರುಗಳ ತುರುಪ್ತಿಗೆ ಅದೇಟು ಕೋಳಿ ಕುರಿಗಳ ಕತ್ತು ಆಕಿದೋ, ಯಾನು ಕತೆ?... ಅವೆಲ್ಲ ತಿಂದು ತೇಗಿ, ಈಗ ಸುಮ್ಮೆ ಕಣ್ಮುಚ್ಚಿ ಕುಂಡಾಗಿ ಕುಂತವಲ್ಲ?.... ನಮ್ಮ ಕಸ್ಟಕೆ ಆಗದೇ ಇದ್ದಮ್ಯಾಗೆ, ಈ ಹಾಳು ದ್ಯಾವರುಗಳ ಸಾವಾಸ ಇನ್ನು ನಮಗ್ಯಾಕ?...” ಅಂತ ಪ್ರಲಾಪ ಮಾಡ್ತಾ ಇದ್ದು. ಆಗ ಅಯ್ಯ,