ಪುಟ:ವೈಶಾಖ.pdf/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೪ ವೈಶಾಖ “ನಾವು ಇಂಗೆ ಅಳ್ತಾ ಕುಂತರೆ, ಯವ ಸುಕವ?... ನಾನು ಜೀತಕೆ ಇರಬೇಕಾಯ್ತಲ್ಲ ಅಂತಾನ ನಾ ಚಿಂತೆ ಮಾಡಕ್ಕಿಲ್ಲ, ಆದ್ರೆ ನಮ್ಮ ಲಕ್ಕನ ಇಂದ್ರೆ ಆ ಮಟದ ಉಪಾದಯ್ ಯಾನೋ ನೆಪ ತಕ್ಕಂಡು ಮಟ ಬುಡಸಿದ್ದ, ಈಗ ಮುನಾ ಮಟ್ಟಕ್ಕೆ ಸೇರುಸಾವ, ಬ್ಯಾರೆ ಉಪಾದ್ಯ ಬಂದ ಅಂದರೆ- ಈಗ ಅನದ ಉಪಾದಿ ಅಗುತುಕಂಡದೆ.... ಇದೇ ನನ್ನ ಮಿದ್ದೆ ಕೆಡುಸ್ತಾ ಇರಾದು” ಅಂತ ನನ್ನ ಇಸ್ಯ ತಕ್ಕಂಡ. - ಅವ್ವ, ಉಸ್ ಅಂತ ಉಸುರು ಬುಟ್ಟು “ಬಾಳಾಟ- ಉದ್ದಕ್ಕೂ ನಮ್ಮಿಬ್ಬರೂವೆ ಯಾಂತರಲ್ಲೂ ನಸೀಬ ತರನಿಲ್ಲ. ಅದು ಯೆಲ್ಲಾರ ಹಾಳುಬಿದ್ದೋಗ್ಲಿ ಅಂದ್ರೆ ಈ ಎಲೆ ವಯಸ್ಸಲ್ಲಿ ನಮ್ಮ ಲಕ್ಕನ ಅಣೇಲಿ ಇಂಗು ಬರದು ಬುಡಾದ...” ಅಂತ ಸೋಕ ಮಾಡ್ತಾನೆ ಇದ್ದು - ಏಡು ನಾ-ಯಾನು ಮಾಡಾದು? ಯಾನು ಮಾಡಾದು? ಅನ್ನಾ ಚಿಂತ್ಯೆ ನಮ್ಮೆಲ್ಲಾರ ನಿದ್ದೆ ಕೆಡುಸಿತ್ತು. ಅತ್ತ ಅಳ್ತಾನೆ ಅವ್ವ, “ಬ್ಯಾರೆ ಉಪಾಯ ಯಾನ ಈಗಿರಾದು?... ಆ ಸಿದ್ದಮ್ಮಾರ ಮತನೂ ತಗದಾಕೊ ಅಂಗಿಲ್ಲ. ಅಂಗೇ ಯೋಚ್ಛೆ ಮಾಡುದ್ರೆ, ನಮ್ಮ ಲಕ್ಕದ ದೊಡ್ಡ ಚಾಕರಿ ಸಿಕ್ಕೊವೊಟು ಓದಿಸಕ್ಕೆ ನಮ್ಮ ತಾವೇನು ಗೆಪ್ಪೆ ಇದ್ದಾತ?... ಆ ಇದ್ಯದ ಮನೆ ಕಿಸಾಂತರಾಯ್ತು. ಈಗ ಆ ಅಯಿವತ್ತು ರೂಪಾಯ ವೊಂದಿಸಾದೆಂಗೆ?”ಪ್ರಶ್ನೆಯೆತ್ತಿದ್ದು. ಅಯ್ಯನ ಬುದ್ದಯೂ ವೋಟು ದೂರ ವೋಗಿ ನಿಂತೋಗಿತ್ತು. “ಇನ್ನೇನ ಮಾಡಾದು?- ಲಕ್ಕನ ಬುಂಡಮಾರ ಅಟ್ಟಲೆ ಪನಾ ಜೀತಕಿರುಸಿ, ಅಲವತ್ತು ರೂಪಾಯಿ ಈಸ್ಕಂಡು ಆ ಕೊರೆ ತೀರುಸಿಬುಡಾದು” ಅಂದಿದ್ದ ಅಯ್ಯ. ಅವ್ವಂಗೆ ವಪ್ಪಿತ ಅಗ್ನಿಲ್ಲ ಆ ಮಾತು. “ತಿರುಗ ನನ್ನ ಮಗನ ಜೀತಕಿರುಸಕ್ಕೆ ವಪ್ಪಕ್ಕಿಲ್ಲ ನಾನು....” ಅಟಾನೆ ಮಾಡಿದ್ದು! “ಯಾರ ಮುಂದ್ಯಾ ನಿನ್ನಟ? –ಅಣದ ಯೆದುರೇ ನಿಂತು ಗುದ್ದಾಡಕ್ಕೆ ಯಾವ ಬಡ್ಡಿ ಹೈದನಿಗೆ ಸಾಧ್ಯ?... ಸುಮ್ಮೆ ಯಾಕ ಚಪಲ?- ನಾಳೆ ಸಂದೆಗೆ ಬುಂಡಮ್ಮಾರೆ ವೋಗಿ ಕ್ಯಾಳಿಬುಡಾದು”- ಅಯ್ಯ ಈ ಸಲ ಕೋಲ್ಟಿನಲ್ಲಿ ತೀರ್ಪು ಟ್ಟಂಗೆ ಯೋಳ... ಆ ತೀರ್ಮಾನಕ್ಕೆ ನಮ್ಮ ಗುಡ್ಡೆಲ್ಲ ತಲೆಬಾಗಿ ವಪ್ಪಿಗಂಡಿತ್ತು...