ಪುಟ:ವೈಶಾಖ.pdf/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೬ ವೈಶಾಖ ಅಡೀಗೆ ಇನ್ನೊಂದು ಕಟ್ಟು-ಇಂಗೆ ಅಡಿಕೆಮರಕೆ ಬಿಗೀತಾ ಬಂದ್ರು... ಬಲಿತಿರೊ ಕಡ್ಡಿ ಕಾಣಿಡು, ಕಟ್ಟು ಬಿಗುದು ನಿಲಿಸಿದ್ದು ಅಲ್ಲಿಂದಾಚೆ ಹಂಬಿನ ತುದಿಗೆ ಮೂರು ನಾಕು ಅಡಿ ಬುಟ್ಟು, ಹಗ್ಗ ಕಟ್ಟಿದ್ದು... ಯಾಕೆ ಹಂಗೆ ಹಗ್ಗ ಕಟ್ಟಿದಿರಿ ಅಯ್ಯ ಅಂತ, ಯೆಲ್ಲ ಮುಗುದಮ್ಯಾಲೆ, ನಾ ಕ್ಯಾಲಿದ್ದರೆ- ಅಂಗೆ ಹಗ್ಗದ ಕಟ್ಟ ಆಕದೆ ವೋದೆ, ಹಗ್ಗ ಕಟ್ಟದೆ ಅಂಗೇಯ ಹಂಬ ಇಳುಕಿದೆ, ಯೆಲ್ಲ ಹಂಬೂವೆ, ಅಸುರಂಬು ಸೈತವಾಗಿ, ಮೊಗಚಿಕಳ್ಳಕ್ಕಿಲ್ಲವೇನ? ಅಂತ ಇವರಿಸಿದ್ರು... ಹಂಬಿನತುದಿಗ ಮೂರು ನಾಕಡಿ ಬುಟ್ಟು ಹಗ್ಗ ಕಟ್ಟಿದ ಮಾಗೆ, ಅಡಿಕೆ ಮರವ ಕಚ್ಚಿಗಂಡಿದ್ದ ಪಲ್ಲಿಗಳೂವೆ, ಅಂಗೇಯ ಬಾಳೆನಾರ ಕಟ್ಟುಗಳೊವೆ ಸಡಲಿಸಿದ್ದು, ಜಾರುಸ್ಥ ಹಂಬಿನ ಕಡ್ಡಿಗಳ, ಅಲ್ಲಿಂದ ಕೆಳಕ್ಕೆ ಉಪಾಯಲ್ಲಿ ಇಳುಕಿದ್ರು, ಇಳುಕ್ಷ ಕಡ್ಡಿಗಳ ಗುಂಡಗೆ ಮೊಡಚಿ ತೆಕ್ಕೆ ಮಾಡಿದ್ರು, ವೋಟರಲ್ಲಿ ತೋಡಿದ್ದ ಗುಂಡಿಗೆ ನಾನು ಗೊಬ್ಬರ ತಂದಾಕಿದ್ದೆ. ಅದರೊಳೀಕೆ ತೆಕ್ಕೆ ಮಾಡಿದ್ದ ಹಂಬಿನ ಕಡ್ಡಿಗಳ ಸಾಸ್ತಿಗೋಳು ತುರುಕಿದ್ದು, ಅದರ ಮ್ಯಾಲೆ ಮಣ್ಣ ತಳ್ಳಿ ಆ ಗುಂಡಿ ಮುಚ್ಚದ್ರು. ನಾನು ನೆಲಬಾವಿಂದ ಏಡು ಮಣ್ಣಿನ ಗಡಿಗೆ ತುಂಬ ನೀರ ವೊತ್ತು ತಂದು, ಜೀವ ನೀರ ಬುಟ್ಟಿದೆ... ಮದ್ದಿನ್ನ ಸ್ವಾಮಿ ನೆತ್ತಿ ಬುಟ್ಟು ಕೆಳಕ್ಕೆ ಇಳುದು ಆಗ್ಗೆ ಪಡುವಲ್ಲಿ ಭೂಮಿ ಅಂಚ ಮುಡ್ತಾ ಇದ್ದ... ಇಂಗೆ ಸಾಗಿತ್ತು ನಮ್ಮ ಕೆಲಸಾಸ್ತ್ರಿಗಳು ಹಂಬು ಇಳುಕಾದು, ತೆಕ್ಕೆ ಮೊಡಚಿ ಗುಂಡಿ ವಳೀಕಾಕಿ ಮಣ್ಣ ತಳ್ಳಾದು ನಾನು ಗಡಿಗೇಲಿ ನೀರ ವೊತ್ತುಗಂಬಂದು ಆ ಹಂಬಿಗೆ ಜೀವ ನೀರ ಎರಯಾದು... ಸಾಸಿಗೊಳು ಇನ್ನೊಂದು ಮರದ ಹಂಬ ಇಳುಕಕ್ಕೆ, ಬಿದಿರೇಣಿ ಇಡುದು ಇನ್ನೇನು ಅತ್ತಬೇಕು ಅನ್ನಾದಲ್ಲಿ, ಅವಿಗೆಯೇನನ್ನುಸ್ಕೊ, ನನ್ನ ಕಡೀಕೆ ತಿರುಗಿ “ಆಸಿವಾಗ್ತಿದೇನ್ದ ಲಕ್ಕ?... ವೊತ್ತಾರೆ ವೊಟ್ಟೆಗೇನು ತಕ್ಕಂಡಿದ್ದೆ?” ಕ್ಯಾಳಿದ್ದರು. “ತಂಗಳಿಟ್ಟು ತಿಂದಿದ್ದೆ ಕನ್ನಯ್ಯ, “ನಾ ಯೋಳ್ತ ಇದ್ದಂಗೆ, “ಚ್, ಚ್... ಕೆಲ್ಸದ ಗ್ಯಾನದಲ್ಲಿ ಊಟವೆ ಮರುತೊಯ್ತು. ನಿಂಗೂ ಬಾಳ ಅಸಿವಾಗಿರಬೈದು... ಇದೇ ಕೊನೇ ಮರ, ಈವೊತ್ತಿಗೆ, ಇದು ಮುಗಿಸಿ, ವೊಂಟುಬುಡಾವ.” ಯೋಳಿ, ಅತ್ತಕ್ಕೆ ಸುರು ಮಾಡಿದ್ರು... ನಾನು ತಲೆ ಕೆರೀತ, “ಅಯ್ಯ..” ತ್ವದಲ್ಲೆ. “ಯೇನ್ದ?...” ಚೋಜಿಗ ಪಡ್ಡ ಕ್ಯಾಳಿದ್ರು.