ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೮ ವೈಶಾಖ ಮಾಡಬ್ಯಾಡ” ಅಂದಿದ್ರು... ನನ್ನ ಗುಡ್ಲು ಕಡೀಕೆ ಎಜ್ಜೆ ಆಕ್ತ ನಂಗೊಂದೇ ಯೋಚ್ಛೆ: “ಈ ಮಾರಾಯ್ತು ಯೇನೋ ಜೀತ ತಪ್ಪುಸಿದ, ಆದರೆ ನಾ ಇದ್ಯ ಕಲಿಯಾದು ಇನ್ನು ತಿಂಗಳಮಾವನಿಗೆ ಮದ್ವೇ ಆದಂಗೆ ಅಲ್ವ? - ನಾನು ನಮ್ಮ ಗುಡ್ಡ ತಲುಪಕ್ಕೂ ಆ ಕಡಿಂದ ಅಯ್ಯ, ಅವ್ವ ಏಡೂ ಆಳೂವೆ ಬರೋದಕ್ಕೂ ಒಂದೇ ಆಯ್ತು, ಏಡು ಅಳಿನ ಮೊಖವೊವೆ ಉಪ್ಪಾಕಿ ಉಷ್ಟೊ ಬೇಯದೆ, ಇರೋವಷ್ಟು ಜೋಲು ಬಿದ್ದಿತ್ತು. ಮೊದ್ಲು ಉಸುರು ಕಡುಸಿ, ಮಾತ ತಗುದೋಳು ಅವ: “ಬುಂಡಮಾರ ಅತ್ರವೂ ಅಣ ದೊರೀನಿಲ್ಲ ಕನೆ... ಅವರೂವೆ ನಾವು ಕೃಟ್ಟ ನೂರು ರೂಪಾಯ ಯಾತಯಾತಕೊ ಬಳಸಿಬುಟ್ಟು, ಅದಿನೈದು ರೂಪಾಯಿ ಉಳುದದೆ, ಕೊಡಾನ ಅಂತ ಕ್ಯಾಳಿದ್ರು... ಅದು ತಕ್ಕಂಡು ನಾವ್ಯಾನ ಮಾಡಾದು ಬ್ಯಾಡಿ, ಅಂದೊ. ಬೋ ಪೆಚಾಡಿಕಂಡ್ರು...” ಅಯ್ಯ ತನಗೆ ತಾನೆ ಮಾತಾಡ್ಕಳೂ ಅಂಗೆ ಅಂದ: “ಈಗ ಇನ್ಯಾರ ವೋಗಿ ಕೇಳಾದು?” ನಾನು ಕಯ್ಯ ಬಿಚ್ಚಿ ಅಣ ತೋರ. “ತಕ್ಕ, ಕಿಸ್ಥಸಾಸ್ತ್ರಗೊಳು ಕ್ವಟ್ಟರು” – ಅವ್ವನ ಕಲ್ಕಿಗಿಟ್ಟು, ನಡುದ ಇಸ್ಯ ಯೋಳಿದೆ. ಅವ್ವ, ಅಯ್ಯ ಏಡಾಳ್ವೆ ಯೇನ ಇದರರ್ತ ಅನ್ನಾ ಅಂಗೆ ಮೊದ್ದು ಮೊಖಮಾಡಿದೋರು, ನಾನು ಇವರಿಸಿದ್ದ ಕ್ಯಾಳಿ, ಬ್ಯಾಸರಪಟ್ಟರು. ಅವ್ವ ಅಂತೂವೆ “ಸರಿಕನ ಬುಡು, ಇನ್ನು ಮ್ಯಾಲೆ ಸಾಸ್ತಿಗೊಳ ಅಟ್ಟಿಯಾಗೆ ನಮ್ಮ ಹೈದನ ಜೀತ ಕಾಯಂ ಆದಂಗಯ್ತು” ಅಂದು ಅಣ ಎಣಿಸಕ್ಕೆ ಸುಮಾಡಿದ್ದು. “ಯೆಂಗೊ ಈ ಸವುಳದಲ್ಲಿ ಆ ಪುಣಾತ್ಮ ಬಂದು ಆತುಗಂಡರಲ್ಲ* ಅಂತ, ಕಡೀಕೆ ಅಯ್ಯ ಸಮಾಧಾನ ಮಾಡ್ಕಂಡ... ಲಕ್ಕ ತಮ್ಮ ಗುಡ್ಡಿನೊಳಗೆ ಮನಗಿದ್ದಂಗೆ, ಹಿಂದೆ ನಡೆದದ್ದೆಲ್ಲ ಮೆಲುಕಾಕಿದ್ದ. ಕಾಲ ಏಟು ಬ್ಯಾಗ ಬ್ಯಾಗ ಓಡೋಯ್ತದೆ ಅಂತ ಇಸ್ಮಯ ಪಡ್ತಿದ್ದ. ಒಂದು ವರುಸ ಅನ್ನಾದು ಆಡಾಡ್ತ ಮುಗುದೋಗಿತ್ತು. ಅಯ್ಯ, ಗಡುವು ಮುಗುದು ಜೀತ ಕಳೀತಲೆ ಗುಡ್ಡಿಗೆ ವಾಪಾಸಾಗಿದ್ದ. ಆದ್ರೆ ನಮ್ಮ ಆಯಿವತ್ತು