ಪುಟ:ವೈಶಾಖ.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೩೯ ಡುಮೆ!... ರೂಪಾಯಿ ಸಾಲ ಮಾತ್ರ ಇನ್ನೂವೆ ತೀರಿರನಿಲ್ಲ.... ನಾನು ಏಟು ದುಡಿದೂವೆ, ಅವನ ದುಡಿಮೇಲಿ ತಾನೆ ನಮ್ಮ ಗುಡ್ಲು ಭಂಗ ಸಾಗಿದ್ದದ್ದು!... ಇದ ತಿಳುಕಂಡು ಸಾಸ್ತಿಗೊಳು ನಾ ಮಾಡ್ಡ ಕೆಲುಸಕೆ ಆ ಆ ದಿನದ ಕೂಲ್ಯ ಆ ಆ ದಿನವೇ-ನಾನು ಬ್ಯಾಡಿ ಬ್ಯಾಡ ಅಂದರೂವೆ ಕ್ವಿಟ್ಟು ಬುಡ್ತಾ ಇದ್ರು... ಇಂಗಾಡಿ ಅಂಗಾಡಿ ಒಂದು ವರುಸ ಪೂತ್ ಕೆಲಸ ಮಾಡಿದ್ದೆ, ಅಯಿವತ್ತು ರೂಪಾಯಿ ಸಾಲದಲ್ಲಿ ನಾನು ತೀರುಸಕ್ಕಾದ್ದು ಅತ್ತೇ ರೂಪಾಯಿ! ಇನ್ನೂ ನಲವತ್ತು ರೂಪಾಯಿ ಸಾಲ ಉಳುಕಂಡಿತ್ತು. ಆದ ತೀರುಸಕ್ಕೆ ಪೂನಾ ನಂಗೆ ಸಾಸ್ತಿಗೊಳ ಕ್ವಾಟದಲ್ಲೆ ದುಡುಮೆ!... ಮುಂದಿನ ದಿನಗೊಳಲ್ಲಿ, ಅಯ್ಯ, ಅವ್ವ, ನಾನೂ ಮೂರಾವೆ ಮೊಗ್ಗೆ ಕವಡೆ ಕಟ್ಕಂಡೇ ದುಡುದ್ರೂವೆ, ಸಾಸ್ತಗೊಳ ಸಾಲ ವರ್ಷಾನುಗಟ್ಟೆ ಉಳುದುಬುಡು, ಯಕೆ ಅಂದೆ, ನಮ್ಮಯ್ಯ ಇರಿ ಮಗ ವೊದ್ದ ಮರಿಯಕ್ಕೆ ಕುಡುತ ಪಾಟ ಮಾಡ್ಕಂಡ, ರಾಚನ ಎಂಡದಂಗಡಿಗೇ ಅನ್ನ ಸಂಪಾಲಿ ಮುಕ್ಕಾಲು ಮೂರುವೀಸ ಪಾಲು ವೋಗೋದ್ರ ಜ್ವತೆ, ಒಂದೊಂದು ಸರ್ತಿ ನಮ್ಮವ್ವ ದುಡುವ ದುಡೂ ಅವು ಕಿತ್ಕಂಡೋಗಿ ರಾಚನ ಗಲ್ಲಕೆ ಎಸೀತಿದ್ದ.... ನಾನು ಎದ್ದೋನೆ ಇತ್ತಿಲ ಕಡೀಕೋಗಿ, ಕೈಕಾಲು ಮೊಖ ತೊಳುದು, ತಂಗಳ ಉಂಡು, ರೋಜಾದಂಗೆ ಕಂಬಳಕೊಂಟೆ, ನಾನಂಗೇ ವೋಯಾ ಇರೋನೂವೆ ಉಪಾದ್ಯರ ಮಠ ಸಿಕ್ಕು, ಆ ಮಠವ ತಟಾಯ್ತಿದ್ದಮಗೆ, ನನ್ನ ವಳುಗಡೆ ಸತ್ತೋದೋರ ಮುಂದೆ ತಮಟೆ ಬಾರುಸ್ಟಂಗಾಯ್ತು?- ಮಠದ ವಳೀಕೊಯ್ತಿದ್ದ ಉಡುಗರೇ ಕಣ್ಣೀರು ತುಂಬಿ ಕ್ವಾಡ್ತಿದ್ದಂಗೆ, ನನ್ನ ಮನಸು ಇಂದ್ರೆ ಅದೇ ಜಾಗ್ನಲ್ಲಿ ನಡುದೊಂದು ಸಂಗ್ಯ ನೆನಸಿಕತ್ತಿತ್ತು: ನಾನೂವೆ ಆಗ ಇದೇ ಮಠದಲ್ಲಿ ಓಡ್ತಾ ಇದ್ದೆ. ಒಂದು ಜಿನ ನಾನು ಮಠಕೆ ವೊಂಡೋವೊತ್ತೆ ಮಳೆಯೂವೆ ಮಂಟಾಡಿಕಂತು ಬತ್ತು, ಬ್ಯಾಡ ಬ್ಯಡ ಅಂದ್ರೂವೆ, ಅವ್ವ ಗೊರಗು ತಂದು ಕ್ವಿಟ್ಟಿದ್ದು. ತಲೆ ಮ್ಯಾಲೆ ನೂಲುನೂಲಾಗಿ ಮಾಡದಿಂದ ಇಳುದು, ಮಾಡ್ರ ಸೂರಗಳಿಂದ ತೊಳ್ಕೊಂತ ಸುರಿಯಾ ಪರಿಯಕ್ವಾಡ್ ಕ್ವಾಡ್ರ ನಾನು ಕುಸಿಪಡ್ತಿದ್ದೆ... ವೋಟರಾಗೆ,ಇಂದುಗಡಿಂದ, “ಲಕ್ಕೆ ಲೋ - ಲೋ ಲಕ್ಕ...” ಅಂತ ಯಾರೊ ಕುಗಿದಂಗಾಗಿ ತಿರುಗಿ ಕ್ವಾಡುತ್ತೆ- ಸಿವಾಚಾರದ ಗಂಗಿ!... - ಗಂಗಿ ಅಟ್ಟಿಯೂವೆ ವೊಲಗೇರಿಗೆ ಸಮೀಪ ಇದ್ದದ್ರಿಂದ, ಮದ್ಯೆ ವೋಲ್ವಾಗ ಬಾಗ ಅವಳು ನನ್ನ ಜ್ವತ್ಥ ಇಲ್ಲಿದ್ದಲು, ಮಾತ್ರ ಅವಳು ನಂಗಿಂತ