ಪುಟ:ವೈಶಾಖ.pdf/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೦ ವೈಶಾಖ Y ದೊಡ್ವಳಾದ್ರಿಂದ ಏಡು ಕಿಳಾಸು ಮುಂದು!... ಗಂಗಿ ನನ್ನ ಸಮೀಪ ಬಂದೇಟೆ, ಅವಳು ನೆನೀತಿದ್ದ ಕಂಡು, ನಂಗೆ ಪಾಪ ಅನ್ನುಸಿ “ಇದ್ಯಾಕರ, ಗೊರಗು ತರಬಾರದಾಗಿತ್ತು?"- ಅಂತ ಅವಳ ಕ್ಯಾಳಿ... “ಅಯ್ಯೋ ನಮ್ಮಟೇಲಿ ಇರಾದು ಒಂದೇ ಗೊರಗು. ಇನ್ನೊಂದ ಯಾರೋ ಕದ್ದು ಕಂಡೋಡ್ರಂತೆ. ನಿಂಗೊತ್ತದಲ್ಲ ನಮ್ಮವ್ವಂಗೆ ಗೊತ್ತು. ಅದ್ರೆ - ನೀನೇ ತಕ್ಕಂಡೋಗು ಅಂದು, ಅಂಗೇ ಬಂದೆ ಕನೋ, ಲಕ್ಕ” ಅಂದಿದ್ದಲು ಗಂಗಿ. ಗಂಗಿ ಅಂಗಂದದ್ದೆ ತಡ, ನಾನು ನನ್ನ ಗೊರಗ ತಗುದು “ಆಕ್ಕಳಿ” ಅಂತ ಊಡಕ್ಕೋಡೆ, “ಬ್ಯಾಡ ಬ್ಯಾಡ. ನೀ ಮೋಬೈ ಯಾಕೆ ನೆನೀಬೇಕು?... ತಾಳು, ಇಬ್ಬರೂ ಸೇರಿದಂಗೆ ಇದ ವೊದ್ಧಕಳಾವ” ಅಂದು, ಗಂಗಿ ತಲೆ ಮ್ಯಾಲೆ ಗೊರಗು ಆಕ್ಕಂಡು ನನ್ನ ಆದರೊಳೀಕೆ ಸೇರಿಸ್ಕಂಡ್ಲು! ನಾ ಯೆಸ್ಕೋ ಪರೀಲಿ ಬ್ಯಾಡಿ ಬ್ಯಾಡಿ ಅಂದರೂ ಅವೆಣ್ಣು ಕ್ಯಾಳನೇ ಇಲ್ಲ. ಸದ್ಯಕೆ ಆಗ್ಲೆ ಊರು ಇಂದ್ಯಾಗಿತ್ತು... “ಇದ್ಯಾಕ್ಲ ಅಪ್ಪಯ್ಯ ಇಂಗಾಡಿ, ಈಗ ಇಲ್ಯಾರಿದ್ದಾರು?- ಮಠ ಸಮೀಪಿಸ್ತಿದ್ದಂಗೆ ನೀನು ಗೊರಗ್ನಿಂದ ಆಚೆ ಚಿಗುದುಬುಟ್ರೆ ಅಯ್ಯಪ್ಪ” ಅಂದ್ಲು ಗಂಗಿ. ಬ್ಯಾರೆ ದಾರಿ ಕಾಣದೇಯ, ನಾನು ಗೊರಗಿನೊಳಗೆ ಗಂಗಿ ಜ್ವತೇಲಿ ಯೆದುರ ಯೆಜ್ಜೆ ಆಕ್ಷೆ, ಇಸ್ಕೂಲು ಇನ್ನೇನು ಅತ್ತು ದಾಪು ಇರೋವಂಗೆ, ನಾನು ಗೊರಕ್ನಿಂದ ಗುಡುಕ್ಕೆ ವೊರೀಕೆ ಬಂದರೂ ಉಪಾದಮ್ ಎಂಕಟೇಸಯ್ಯಾರು ನಸ್ಯದ ಮೂಗ್ನಿಂದ ಸೀನ್ತಾ ಸೀನಾ ಇಸ್ಕೂಲಿನ ಮೊರ ಜಗಲಿಗೆ ಬಂದು ಗೊಣ್ಣೆ ಸೀನನ್ನ ಕ್ವಾಡಿಬುಟ್ಟಿದ್ದೂ ಒಂದೇ ಆಯ್ತು... ಬಾಕಿ ಇಸ್ಯದಲ್ಲಿ ಉಪಾದ್ಯ ಎಂಕಟೇಸಯ್ಯಾರು ವಳ್ವೆಯೋರೇಯ. ಮಾತ್ರ ಕೀಳು ಜಾತ್ರೋರು ಮೇಲು ಜಾತ್ರೋರು ಸಮಸಮ ಇರಾದು, ಮೇಲು ಜಾತ್ರೋರ ನಮ್ಮಂತೋರು ಮುಟ್ಟಿಸ್ಕಳಾದು, ಇಂತ ಒಂದೂ ಸೈಸ್ತಿರಲಿಲ್ಲ. ನಮ್ಮಂತೋರು ಅವರು ಇಸ್ಕೂಲ ವಳಗಡೆ ಉಳುಕೆ ಹೈಕಳ ಜ್ವತೆ ಕುಂಡರಿಸ್ತಿರಿಲ್ಲ. ವೊರಗಡೆ ಜಗುಲೀಲಿ ಕುಂಡರಿಸೇ ಪಾಟ ಹೇಳಿದ್ರು, ಈಗ ಉತ್ತುಮರ ಎಣ್ಣ ಮುಟ್ಟುಸ್ಕಂಡು ಒಂದೇ ಗೊರಗಿನೋಳೆ ಬತ್ತಾ ಇದ್ದ ಕಂಡು, ಅವರ ಮಯ್ಯಾಗೆಲ್ಲ ಕೆಂಡ ಕಾದಿರಬೇಕು. ಗೊಣ್ಣೆ ಚೌಕದಲ್ಲಿ