ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೪೧ ಮೂಗು ಸೀಟ. “ಲಕ್ಕ, ಬಾಗ್ಲ ಇಲ್ಲಿ...” ಗರ್ಜಿಸಿದ್ದು, ನಡು ನಡುಗ ನಾನು ಅತ್ರ ವೋದಾಗ, ಕ್ವಾಪ ನುಂಕಂಡು, “ಈಗ ನೀನು ವಾಪಸೋಗು, ನಾತ್ರೆಗೆ ನಿಮ್ಮಯ್ಯ ಗುಟ್ಟಾಗಿ ನನ್ನಟ್ಟಿಗೆ ಕರಕಂಬಾ” ಅಂದ್ರು. ನಾನಾಗ ಅವರಟ್ಟಿ ತಾವಿಕೆ ನನ್ನಯೂ ನಾನೂವೆ ವೋದೆ. ಅವರು ನನ್ನಯ್ಯಂಗೆ ತಾವು ಕಂಡದ್ದೆಲ್ಲ ಇವುರಿಸಿ. “ಮೇಲು ಜಾತಿ ಯಜಮಾನಿಗೆ ಈ ಇಸ್ಯ ಗ್ರತ್ತಾದೆ, ಈ ಉಡುಗ ಚಮಡ ಸುಲಿದು ಬುತ್ತಾರೆ. ಇಂತಾ ಹೈಕಳು ಆಡೋ ಆಟಾನೆಲ್ಲ ಮುಚ್ಚಿ ಉಪಾದ್ಯಾಂತ ನನ್ನೂವೆ ನಿಮೂರಿಂದ ಗಡೀಪಾರು ಮಾಡ್ತಾರೆ. ಈಗ ಇದ್ದ ಯಾರ ಕುಟ್ಟೂ ಯೇಳೋದು ಬ್ಯಾಡ, ನಿಮ್ಹುಡುಗ ಇಲ್ಲಿಗಂಟ ಕಲ್ಲಿರಾದೆ ಸಾಕು. ಮುಂದುಕೋದಿ ಅವನ್ಯಾವ ದಿವಾನಗಿರಿ ಮಾಡಬೇಕಾಗಿದ್ದಾತೊ, ನಿಂಗ?... ಸುಮ್ಮೆ ಇವ ಯಾರ ಅಟ್ಟಲಾರು ಜೀತಕಿರುಸು, ನಿಂಗೂ ನಾಕೂ ಕಾಸ್ಸು ಕೈಸೇರಿ, ಉಪ್ಪುಗೊ ಸೊಪ್ಪುಗೊ ಅಯ್ತದೆ”- ಅಂತ ಬುದ್ದವಾದ ಯೋಳಿದ್ರ... ಆಗ ನನ್ನ ಕಣ್ಣಲ್ಲಿ ಚಿಲ್ಲನೆ ನೀರು ಕಿತ್ತುಗಂಡಿತ್ತು. ಆ ಸಂಗ್ತಿಯ ಈಗ ನೆತಿದ್ದಮಗೆ, ಆ ಇಸ್ಕೂಲ ಮುಂದೆ ಇನ್ನೊಂದು ಚಣವೂ ನಿಂತ್ಯನಾರೆ, ಅಲ್ಲಿಂದ ನಾನು ಜೋಲು ಮ್ಯಾರೆ ಆಕ್ಕಂಡು ನಡೀತಿದ್ದೆ... ಮುಂದೆ ತಿಂಗಳೊಪ್ಪತ್ನಲ್ಲಿ. ಅವಳ ತಮ್ಮ ಸತ್ತೋಗಿ ಎಮ್ಮೆ ಕಾಯೋರಿಲ್ಲಾಂತ, ಗಂಗೀನು ಅವಳ ಅಟ್ಟಿಯೋರು ಮಠ ಬುಡಸಿದ್ರು... ಇಪ್ಪತ್ತು ದಿನ ರುದ್ರಪಟ್ಟಣ ಮತ್ತು ಅದರ ಸುತ್ತಮುತ್ತಿನ ನೆಂಟರಿಷ್ಟರ ಊರುಗಳಲ್ಲಿ ಸುತ್ತಾಡಿ ಕಾಲಕಳೆದ ಚಂದ್ರಶೇಖರಯ್ಯನ ಸಂಸಾರ, ರುಕ್ಕಿಣಿ ನಿರೀಕ್ಷಿಸಿದಂತೆ ದರುಮನಳ್ಳಿಗೆ ವಾಪಸಾಗದೆ, ಮೈಸೂರಿನಗೆ ಪ್ರಯಾಣ ಬೆಳೆಸಿತ್ತು. ಮೈಸೂರಿನಲ್ಲಿ ಚಂದ್ರಶೇಖರಯ್ಯನ ಅಣ್ಣ ಮಂಜುನಾಥಯ್ಯ ಬ್ಯಾಂಕಿನಲ್ಲಿ ಗುಮಾಸ್ತೆ. ಮಂಜುನಾಥಯ್ಯನ ಮನೆಯಲ್ಲಿ ಸುಮಾರು ಹದಿನೈದು ದಿನಗಳ ಬಿಡಾರ. ಮತ್ತೆ ಅವರೆಲ್ಲರೂ ದರುಮನಳ್ಳಿಗೆ ಹಿಂದಿರುಗಿ, ಇಲ್ಲೂ ಸಹ ರುಕ್ಕಿಣಿಯ ಒತ್ತಾಯಕ್ಕೆ ಮಣಿದು ಒಂದು ವಾರ ಉಳಿದಿದ್ದರು. ಚಂದ್ರಶೇಖರಯ್ಯನಿಗೆ ದರುಮನಳ್ಳಿಯಲ್ಲಿ ಅನೇಕರ ಸ್ನೇಹ. ಹೀಗಾಗಿ ಅವನು ಮನೆಯಲ್ಲಿ ಇರುತ್ತಿದ್ದುದೇ