________________
೧೪೨ ವೈಶಾಖ ಅಪರೂಪ. ರುಕ್ಕಿಣಿಗೆ ಪಾರ್ವತಿಯು ಅಕ್ಕ ಮಾತ್ರ ಆಗಿರದೆ ಅತ್ಮೀಯ ಗೆಳತಿಯಂತೆ ನಡೆದುಕೊಳ್ಳುತ್ತಿದ್ದಳು. ಊರಿನಲ್ಲಿ ಯಾರೋಬ್ಬರೂ ಅಕ್ಕತಂಗಿಯರೆಂದರೆ ಹೀಗಿರಬೇಕು ಎನ್ನುತ್ತಿದ್ದರು. ಸರಸಿ. ಗಿರಿಜೆಯರಂತು ಅವಳಮಕ್ಕಳಂತೆ ಊರಿನ ಬೀದಿಬೀದಿಗಳಲ್ಲೂ ಓಡಾಡಿ ನೋಡಿದವರ ಕಣ್ಣಿಗೆ ಆಹ್ಲಾದ ತುಂಬುತ್ತಿದ್ದರು. ವಾರ ಕಳೆಯುತ್ತಲೂ ಚಂದ್ರಶೇಖರಯ್ಯನ ಸಂಸಾರ ತಮ್ಮ ಊರಿಗೆ ಹೊರಟು ನಿಂತಿತು. ಅವರನ್ನು ದರುಮನಳ್ಳಿಗೆ ಕರೆದು ತಂದಿದ್ದ ಅವರ ಗಾಡಿ ಹಿಂದೆಯೇ ಅವರ ಹಳ್ಳಿಗೆ ಹಿಂದಿರುಗಿ ಹೋಗಿದ್ದದರಿಂದ, ಕೃಷ್ಣಶಾಸ್ತ್ರಿಗಳು ಲಕ್ಕನಿಗೇ ಹೇಳಿಕಳುಹಿಸಿ ತಮ್ಮ ಎತ್ತಿನ ಗಾಡಿಯನ್ನೆ ಹೊಡಿಸಿದರು. ಹೊರಡುವ ವೇಳೆ ಬಂದಾಗ ಪಾರ್ವತಿಯು ಸರಸಿಯನ್ನಪ್ಪಿ, “ಸರಸು, ನೀನೂ ನಮ್ಮೂರಿಗೆ ಬರ್ತೀಯೇನೆ?” ಎಂದು ಪ್ರೀತಿಯಿಂದ ಕರೆದಳು. ಸಾವಿತ್ರಿಗೆ ಅಷ್ಟು ಖೈಡಾಗಿ “ಬರಲ್ಲ” ಎಂದು ಉತ್ತರಿಸಿದ್ದ ಬಾಲೆ. ಪಾರ್ವತಿಯು ಕರೆಯುತ್ತಲೂ “ಓ ಬತ್ತೀನಿ” ಎಂದು ಅತಿ ಸುಲಭವಾಗಿ ಒಪಿದ್ದಳು!.... ಈ ಸಮ್ಮತಿಗೆ ಮುಖ್ಯ ಕಾರಣ. ಪಾರ್ವತಿಯ ಮಗಳು ಗಿರಿಜೆ! ಅವರಿಬ್ಬರಿಗೂ ಹೆಚ್ಚು ಕಡಿಮೆ ಒಂದೇ ವಯಸ್ಸು, ಯಾವಾಗಲೂ ಸರಸಿ ಅವಳನ್ನು ಗಿಜಿ ಗಿಜ್ಜಿ ಎಂದು ಪೂರಾ ಹಚ್ಚಿಕೊಂಡಿದ್ದಳು, ಜತೆಗೇ ಊಟ, ಮಲಗುವುದೂ ಒಂದೇ ಹಾಸಿಗೆಯಲ್ಲಿ. ಹೀಗಾಗಿ ಪಾರ್ವತಿ ಕರೆದುದೇ ತಡ. ಎಳೆಗರುವಿನಂತೆ ಸಡಗರದಿಂದ ಓಡಾಡುತ್ತ ತನ್ನ ಲಂಗ ಜಂಪರುಗಳನ್ನು ಪುಟ್ಟ ಟ್ರಂಕೊಂದರೊಳಗೆ ತಾನೇ ತುಂಬುತ್ತಿದ್ದಳು. “ಟವಲ್ಲು ಬೇಡವೇನೆ?” ಎಂದು ರುಕ್ಕಿಣಿ ಕೇಳಿದ್ದಕ್ಕೆ, “ಅಲ್ಲಿ-ಗಿಜಿ ಟವಲ್ಲು ಎರಲ್ವ?” ಎಂದು ಅವಳು ರಾಗ ಎಳೆದಾಗ ಆ ಶೋಕದ ಮನೆಯಲ್ಲೂ ನಗು ಬುಗ್ಗೆ ಬುಗ್ಗೆಯಾಗಿ ಚಿಮ್ಮಿತ್ತು. ಎತ್ತುಗಳನ್ನು ಹೂಡಿ ಸಿದ್ಧವಾಗಿದ್ದ ತಮ್ಮ ಕಮಾನು ಗಾಡಿಯ ಮುಂಭಾಗಕ್ಕೆ ಇಬ್ಬರು ಬಾಲಕಿಯರನ್ನೂ ಎತ್ತಿ ಕೂರಿಸಿದ್ದವಳು ರುಕ್ಕಿಣಿಯೆ! ಉಳಿದವರೂ ಒಬ್ಬೊಬ್ಬರಾಗೆ ಹತ್ತಿ ಕುಳಿತು, ಲಕ್ಕೆ ಎತ್ತುಗಳನ್ನು ಮುಟ್ಟಿ ಹುರಿ ಹುರಿದುಂಬಿಸಿದೊಡನೆ, ಗಾಡಿ ಚಲಿಸತೊಡಗಿತು. ರುಕ್ಕಿಣಿಯು ಜಗಲಿಯ ಕಂಬವನ್ನೊರಗಿ ನಿಂತಿದ್ದಳು. ಗಾಡಿಯು ತಮ್ಮ ಕೇರಿಯ ತಿರುವಿನಲ್ಲಿ ಮರೆಯಾಗುವವರೆಗೂ ಲಕ್ಕನಿಗಿನ್ನ ಮಿಗಿಲಾಗಿ ಇಬ್ಬರು ಬಾಲಕಿಯರೂ “ಹುಚ್ ಹುಚ್.... ಹುಚ್ ಹುಚ್” ಎಂದು