ಪುಟ:ವೈಶಾಖ.pdf/೧೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೧೪೪ ವೈಶಾಖ ಸಾಲಕ್ಕಿಲ್ಲ. ಈ ಪುಣಾತ್ಮ ಗೇದ ದುಡ್ಡೆಲ್ಲ ತಕ್ಕಂಡೋಗಿ ಆ ರಾಚನ ಎಂಡಕೇ ಮುಳುಗುಸ್ತವನೆ?... ಇಮ್ಮಿಗೆ ಸೋಸಲು ಬೇಕು, ಸೀಗಡಿ ಬೇಕು. ಯಲ್ಲೇಆ ರುತಿ ರುತಿ ಅಡುಗೇನೆ ಆಗಬೇಕು!... ತಗಿ, ತಗಿ ಇವ್ರ ಮಾಕ್ಕೂ ಒಂದು ಲಿಂಗ ಅಂತ ಕಟ್ಕಂಡೋಗು, ನೇರ್ಪಾಯ್ತದೆ!... ಕ್ವಡಾದು ಮೂರು ಕಾಸು ಕ್ಲಾಣೆ ತುಂಬ ಹಾಸು, ಅನ್ನಾ ಗೆಣೆಕಾರ ನಿನ್ನಯ” -ಕಟಕಟನೆ ಯೋಳಿಬುಟ್ಟಾಗ, ಎಡತಿ ಮಾತ ತೆಳ್ಳಾಕನಾರದೆ, ನಿಂಗಯ್ಯ ತೆಪ್ಪಗಾಗಿದ್ದ. ಮಾತ್ರ ಸೊಸಲು ಮೀನು ಅತ್ವಾ ಕರಿಮೀನಿನ ಸೆ ಅವನ್ನ ಬಲವಾಗಿ ತಬ್ಬಿಕತ್ತು, ಎಂಡ ಕಮ್ಮಿ ಮಾಡಿ, ಹುಣಸೂರಿನ ಬೇಸ್ತವಾರ ಸಂತೇಲಿ ವೋಸ್ಸು ಕರ್ಮಿನ ಖರೀದಿ ಮಾಡಿ ತಂದು ಮಗಳ ಕಯ್ಯಗಿಡ. “ತಕಮ್ಮಿ ಕರ್ಮಿನ...ನಾ ಅತ್ತೀಗೆನು ತರಕಿಲ್ಲ ಅಂತಾವ ನಿಸೂರು ಕೊಸೀತಿದ್ದಲ್ಲಿ ನಿಮ್ಮವ್ವ-ಕ್ವಾಡು, ಏಟೊಂದು ತಂದಿಮ್ಮಿ?” –ಇತ್ತಲಲ್ಲಿ ಚಾಪೆ ಎಣೆಯಕ್ಕೆ ಅಂತ ಒಣಾಕಿದ್ದ ಈಚಲು ಗರಿಗಳ ಗುಡ್ಡು ವಳೀಕೆ ತತ್ತುಗಂಬತ್ತಿದ್ದ ಕಲ್ಯಾಣಿಗೆ ಕೇಳೂವಂಗೆ ಧಿಮಾಕ್ನಿಂದ ಯೋಳಿ, ವೊದ್ದಿದ್ದ ವಸ್ತದ ತುದೀಲಿ ಗಂಟಾಕಿದ್ದ ಸೊಸಲು ಮೀನಿ ಸುರುದು ಗುಡ್ಡೆ ಮಾಡಿದ. ಈ ಗುಡೇಲಿ ಅರ್ಧ ತಕ್ಕಂಡು, ರುಕ್ಕಿಣ್ಣವ್ವಾರು ಲಕ್ಕನ ಕಯ್ಲಿ ಕ್ವಿಟ್ಟು ಕಳಿಸಿದ್ದ ಮೊಗರು ಒದ್ದೆಕಾಯಿನೂವೆ ಸೇರುಸಿ, ಸಿವುನಿ ಮೆಲೋಗರ ಮಾಡಿದಳು. ಅದರೊಳಿಕೆ ಹಿಟ್ಟು ಹೊರಳಿಸಿ ನುಂಗೈ ನುಂಗ ನಿಂಗಯ್ಯ ತಾನು ಕಂಗಣ್ಣಪಾರ ಅಟ್ಟೇಲಿ ಜೀತಕಿದ್ದಾಗ ಅವರ ಹೆಂಡತಿ ಸಿದ್ದಮ್ಮ ಮಾಡ್ತಿದ್ದ ಮೇಲೋಗರದಂಗೇ ಅದೆ ಅಂತ ನೆನೆಸಿಕೊತ್ತಿದ್ದ, ಏಡು ಜಿನ ಬುಟ್ಟು ಉಳಿದಿದ್ದ ಕರ್ಮಿನಿನಲ್ಲಿ ಗೊಜ್ಜು ಮಾಡಿದ್ದಲು ಸಿವುನಿ. ಅದನಂತೂ ನಿಂಗಯ್ಯ ವೊಗಳದ್ದೂ ವೊಗಳದ್ದೆ! “ತೆಗಿ, ತಗಿ, ಗಂಗಡಕಾರರೂ ನಿನ್ನ ಜಪಾತಿಮಾಂವುಸದ ಅಡುಗೆ ಮಾಡನಾರು ಕನ... ಮುಕ್ಯ, ಆ ನಿನ್ನ ಗಂಡ ಅನ್ನುಸಿಕಂಡ ನಂಜನಗೂಡ ಆ ತಲೆ ಮಾಡಿಸದೋಸ್ಥೆ ನಿನ್ನ ಕಗ್ನಿ ರುತಿ ಉಣ್ಣಾಕೆ ಅದ್ರುಸ್ವಪಡೀನಿಲ್ಲ” ಅಂತಿದ್ದಮಗೆ ಅವನ ಕಣ್ಣಲ್ಲಿ ನೀರಾಡಿದ್ದು ಉಂಟು. ದರುಮನಳ್ಳಿಯ ಗಿಡಗಂಟ, ಅಳ್ಳಕೊಳ್ಳ, ಅಟ್ಟಿಗುಡ್ಲುಗಳೆಲ್ಲ ಗುಮ್ಮನೆ ಕತ್ತಲು ಮುಚ್ಚುಗತ್ತಾ ಬತ್ತಿತ್ತು... ಉಂಡು ತಡಿಕೆಬಾಗಿಲ ತಳ್ತಾ ಈಚೆಗೆ ಬಂದ ಲಕ್ಕ, ಗುಡ್ಡ ಬಾಜೂನಲ್ಲೆ ಇದ್ದ ಸೊಂಟದೆತ್ತರದ ಬಂಡೆ ಅತ್ತಿ ಕುಂತು ಬೀಡಿ ಕತ್ತಿದ್ದ. ಇನ್ನೂ ಉರೀತಿದ್ದ ಬೆಂಕಿಕಡ್ಡಿಯ ಉಫ್ ಅಂದು ಆರುಸಿ, ವಕ್ಕಡೆ ಎಸದು, ಕತ್ತೆತ್ತಿದ- ಯಾರೋ ತಳಗದಿಂದ ಮೀಟಿದ ತರ, ಒಂದು ಕೆಂಡದ