________________
ಸಮಗ್ರ ಕಾದಂಬರಿಗಳು ೧೪೫ ಉಂಡೆ ವಸಿ ವಸ್ಯಾಗಿ ಚಿಮ್ಮಿ ಮೂಡಲ ಬಾನಿನಲ್ಲಿ ತಳತಳಗುಟ್ಟಕ್ಕೆ ಸುರು ಮಾಡಿತ್ತು... ಅದ್ರೇಯ ಹೊಸದಾಗಿ ನೋಡೋನಂಗೆ ಬುಟ್ಟ ಕಣ್ಣು ಬುಟ್ಟ ಬಾಯಾಗಿ ಕ್ವಾಡ್ರ ಕುಂತ ಲಕ್ಕ, “ಇವೊತ್ತೆ ಉಣ್ಣಿಮೆ ಇರಬೈದ?” ಯೋಚಿಸ್ತ ಇಾಗ, ಕುಂಡಿಮಾದಿ ಇವರ ಗುಡ್ಡ ಮುಂಚೋರಿಕೆ ಬಂದು, “ಕಲ್ಯಾಣ, ಕಲ್ಯಾಣ-ನಾವೆಲ್ಲಾರೂವೆ ದ್ಯಾವಾಜಮ್ಮನ ಗುಡ್ಡು ಮುಂಚೂರಿ ಸೇರಾ ಇವಿ- ಚಾಪೆ ಎಣೆಯಾಕೆ. ಜಟ್ಟೆ ವೊಂಟು ಬನ್ನಿ, ಬೆಳದಿಂಗು ಚೆಲ್ಲಾಡ ಬಿದ್ದದೆ” ಎಂದು ಒಂದೇ ಉಸುರಿಗೆ ಯೋಳಿ, ಇನ್ನೊಂದು ಗುಡ್ಡು ತಾವಿಕೆ ಚಿಗಿದ್ದು. ಹಿಂದೆಯೇ ಒಣಾಕಿದ ಈಚಲು ಗರಿ ಸೋಗೆಗಳ ಸಿಗದು ಕಂತೆಗಳ ಮಾಡಿ, ಆ ಕಂತೆಗಳೆ ತ್ಯಾವದ ಪಾವುಡೆ ಸುತ್ತಿ, ಆ ಕಂತೆಗಳ ಸೈತ ಕಲ್ಯಾಣಿ, ಜತೆ ಕೂಸು ತತ್ತುಗಂಡ ಸಿವುನಿ ಇಬ್ಬರೂವೆ ಗುಡ್ಡಿಂದ ವೊಂಟು ದ್ಯಾವಾಜಮ್ಮನ ಗುತ್ತು ಮುಂದಕೋದರು. ಆ ಗುಡ್ಲು ಮುಂದಕೆ ಒಬ್ಬೊಬ್ಬರಾಗಿ ಇಬ್ಬಿಬ್ಬರಾಗಿ ಎಂಗಸರು ಬಂದು ಹಾಸಿದ ಚಾಪೆಗಳ ಮೇಲೆ ಕುಂತರು. ಕುಂತು ತಂತಮ್ಮ ಕಂತೆಗಳ ಬಿಚ್ಚುತಿದ್ದಂಗೆ ಅವರವರಲ್ಲಿ ಮಾತೂ ಬಿಚ್ಚಗತ್ತು. ಗೋಟಡಿಕೆ ಬಾಯಿಗೆಸೆದು, ವೀಳೆಯದೆಲೆಗೆ ಸುಣ್ಣ ಹಚ್ಚುತ್ತ, ಮೊದ್ಲು ಮಾತಿನ ಬೋಣಿ ಉಳಿಸಿದೋಳು ದ್ಯಾವಾಜಮ್ಮ: “ಲೇ ಸಿವುನಿ, ನಿಮ್ಮಯ್ಯ ಯಾವತ್ತೂವೆ ನಿನ್ನ ಕಮ್ಮಿ ರುತಿಯ ನಮ್ಮೋರತ್ರ ಆಡ್ತಾನೆ ಇಲ್ಲವಂತೆ... ಇವೊತ್ತು ಯಾವ ಮಾಡಿದ್ರಣೆ ನಂಜಕ್ಕೆ?” ಕಂತೆಗೆ ಸುತ್ತಿದ್ದ ಒದ್ದೆ ಪವುಡೆ ಆಳೀತ ಸಿವುನಿ, “ಬೇಸ್ತವಾರ ಸಂತಿಂದ ನಮ್ಮಯ್ಯ ತಂದಿದ ಕರ್ಮಿನ್ನಲ್ಲಿ ವಸಿ ತಕ್ಕಂಡು, ಬದನೆಕಾಯಿ ಜ್ವತೆ ಕುದ್ದಿ ಆ ಜಿನವೆ ಮ್ಯಾಲೋಗರ ಮಾಡಿದ್ದಿ, ಇನ್ನುಳುಕೆ ಸೋಸಲು ಬತ್ತಿಸಿ ನಂಜಕ್ಕೆ ಗೊಜ್ಜು ಮಾಡಿದ್ದೆ ಕನ” ವರದಿ ಮಾಡಿ, ಬೆಲ್ಲಗೆ ಮೆತುವಾಗಿದ್ದ ಈಚಲುಗರಿಗಳ ಚಾಪೆ ಇಣೆಯಕ್ಕೆ ಅಣಿಯದ್ದು. - ದ್ಯಾವಾಜಿ ಮಾತಿನ ಮಲ್ಲಿ, ವೀಳ್ಯದೆಲೆಯ ದವಡೆಗೆ ವರುಸಿ ಹೊಗೆಸೊಪ್ಪ ಅಂಗಯ್ಯಲಿ ತೀಡಿ, ಬಾಯಿಗೆಸೆದು, ಸರಸವಾಗಿ ಕಣ್ಣ ವೊರಳುಸಿ, ತನ್ನ ಗಲ್ಲವ ಕಯ್ಯಲಿ ಹಿಡಿದು, “ಕ್ಯಾಳಿದಿರೇನವ್ವ, ಈ ಎಣ್ಣು ಯೋಳಿದ ಮಾತ?... ಅವತ್ತು ಕಲ್ಕಿನ್ನೂ ಬದ್ರೆಕಾಯೂವೆ ಬಿರುಸಿ, ಮ್ಯಾಲೋಗ್ರ ಮಾಡಿದ್ದಂತೆ. ಇವತ್ತು ಉಳುಕೆ ಕರ್ಮಿನ