ಪುಟ:ವೈಶಾಖ.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೬ ವೈಶಾಖ ಬತ್ತಿಸಿ ಗೊಜ್ಜು ಮಾಡಿದ್ದಂತೆ... ಅದ್ಯಾಕೆ, ನನ್ನೂವೆ ಕರದಿದ್ರೆ ನಾ ಯೇನ ವಲ್ಲೆ ಅಂತದ್ಮಾ?- ಕರ್ಮೀನು ನಂಗೇನು ಸೆಡೀದೆ ಇತ್ತ?” ಅಂದುದಕೆ ಅಲ್ಲಿ ನೆರೆದಿದ್ದ ಎಂಗಸರೆಲ್ಲಾರು ಗೋಲ್ ಗೊಳ್ ನಗಾಡಿದರು. ಅಂಗೇಯ ಚಾಪೆ ಎಣೆಯಾಕೆ ತಂತಮ್ಮ ಬೆರಳುಗಳ ತೊಡಗಿಸಿದ್ದು, ಎಣೀತ ಎಣೀತ ಚೌಡಿ ಮೆತ್ತಗೆ ಉಸಿರೆತ್ತಿದ್ದು: “ಕ್ವಾಡಾಕ್ಕ, ನಮ್ಮ ಕಿರಿಹೈದ ಇಲ್ವಾ, ಅವುಸ್ಥೆ ಈ ಊರಲ್ಲಿ ಯಾವ ಮೂಳಿ ಮದ್ದು ಆಕಿದ್ದು. ಮೊದಮೊದ್ಲು ನಮಗ್ಯಾರಿಗೂವೆ ಇದ್ರ ಸುಳೂವೇ ಅತ್ತನಿಲ್ಲ. ಉಡುಗ ದಿನದಿನ್ನೆ ನವೀತ ಬತ್ತಿದ್ದ. ಅನುಮನಸಾಯ್ತು, ಸಂತೆಗೋಗಿದ್ದಾಗ ಜವುಳಿ ಅನಂತ ಸೆಟ್ಟರು ಯೋಳಿದ್ರು. ಇದ್ಯೆ ಮದ್ದ ಅಕಿರೂವಂಗೆ ಕಾಣದೆ. ಈ ಮದ್ವ ತಗಿಯೊ ವಬ್ಬಳು ಬೂಬಮ್ಮ ಅವೈ. ಅವಳತ್ರ ಕರಕಂಡೋಗಿ ತೊರುಸು, ಅಂದ, ಅವಳೆಸರು ಕಾಸಿಂಬೀ, ಸಂತೆಮಾಳದಾಗೆ ಅವ್ರ ಮನೆ. ಅಲ್ಲಿಗೆ ನಮ್ಮುಡುಗ್ನ ಕರಕಂಡೋದೆ. ಅವ್ರು ಅದ್ಯಾನೊ ವಮನ ಮಾಡೊ ಅವುಸ್ಥೆ ಕುಡಿಸ್‌ದ್ದು. ವಸಿ ವೊತ್ಸಲ್ಲೆ ಹೈದ ವಮನ ಮಡಿಕತ್ತು-ಈಟು, ಒಂದು ತಣಿಗೆ ತುಂಬ!... ಆಚರ್ಯದ ಸಂಗ್ತಿ ಅಂದ್ರೆ, ಆ ಬೊಬಮ್ಮ ತಣಿಗೆ ವಳುಗಿನ ವಮನದಲ್ಲಿ ಕಾಡಿ ಗೆಜ್ಜುಗದ ಗಾತ್ರದ ಒಂದು ಉಂಡೆ ತಗದು, ಕ್ವಾಡು. ಇದೇ ಇಕ್ಕಮದ್ದು. ಇದ್ದ ಕಡಬ್ಬಲ್ಲಿ ಸೇರಿ ಕ್ವಟ್ಟಿ, ಸುಮಾರು ಜಿನ ಆಗೈತೆ. ಇಲ್ನೋಡು, ಆಗ್ಗೆ ಇದರಾಗೆ ಕೂದಲೂ ಬೆಳುದು ಬುಟ್ಟಿದೆ” ಅಂತ ತೋರಿಸಿದ್ದು... ಸದ್ಯಕೆ, ಪುಣಾತಿಗಿತ್ತಿಂದ ನನ್ನ ಕಂದ ಬದುಕ್ಕತ್ತು.” ಚೌಡಿ ಮಾತ ಮುಗಸ್ತಿದ್ದಂಗೆ, “ಅದ್ವಿ, ಇದ್ಯಾವ ಚಾಳಿ ಕಲ್ಲಿದ್ದಾರು, ಈ ರಂಡೇರು?” ಖಾಾಗಿ ಕಲ್ಯಾಣಿ ಅಂದುದಕ್ಕೆ, ದ್ಯಾವಾಜಿ, “ಹಯ್ಯೋ, ಅಷ್ಟೇ ಯಾಕೆ-ಯಾರೂ ಧ್ವರೀದೆ ಇದ್ರೆ, ಕೂಡಿದ ಗಂಡನ್ಗ ಆಕು ಅನ್ನುಸ್ತದಂತೆ ಈ ಚಾಲಿ ಕಲುತೋರೆ!” ಅಂದಾಗ, “ಅಸ್, ಇವರ ಮನೆ ಎಕ್ಕುಟ್ಟೋಗ” ಅಂತ ಯಾರೋ ಒಬ್ಬಳಂದ್ಲು. “ಊರಲ್ಲಿ ಇಂತೋರು ಕೆಲವು ಎಂಗಸರು ಅವರೆ. ಉತ್ತಮರಲ್ಲೂ ಅವರೆ ಅಂತಾನು ಕ್ಯಾಳಿ” ಇನ್ನೊಬ್ಬಂದ್ಲು. ಇಕ್ಕು ಮದ್ದಿನ ಸುದ್ದಿ ಇಂಗೆ ಒಬ್ಬರಿಂದೊಬ್ಬರಿಗೆ ಉರುಟ್ಟೆ ಆಡ್ತಾ ಇರೋನೂವೆ, ಕುಂಡಿಮಾದಿ, “ಹಯ್ಯೋ, ಇಕ್ಕ ಮದ್ದು ಇಕ್ಕಬುಟ್ಟರಾರೂ ಸೈಸಕಬೈದು. ಆದ್ರೆ ಈ ಚಿತ್ರ