ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೪೭ ಇಂವುಸೆ ಪಡಕ್ಕಿಂತ ಆ ಜಡೆಮುನಿ ತನ್ನ ತಾವಿಕೆ ಬ್ಯಾಗ ಕರಕಂಬುಟ್ರೆ ನಿಶ್ಚಿಂತಿಂದ ವೊಂಟೋಗಬೈದು...” ಇಸ್ಸು ಯೋಳಿ ಉಸುರುಗರುದ್ದು. ಎಂಗಸರೆಲ್ಲಾರೂವೆ ಒಂದೇ ಉಸುರೆ, “ಯಾನವ್ವ ಅಂತಾದ್ದು? ಯಾನಾಯ್ತು? ಬುಡುಸಿ ಯಾಳವ್ವ.” ಗಂಟಲು ದೊಡ್ಡದು ಮಾಡಿ ಕ್ಯಾಳಿದರು. ಕುಂಡಿಮಾದಿ ಚಾಪೆ ಎಣೆಯೋದ ನಿಲ್ಲುಸದೆ, “ಹಯ್ಯೋ, ಯಾನಂತ ಯೋಳಲವ್ವ...” ಅಂದು, ನಿಟ್ಟುಸುರು ಎಳೀತಾನೆ ಇಾಗ, ದ್ವಾವಾಜಿ, “ಹಯ್ಯ, ಎಂಗವ್ವ ಯೋಳಲಿ?...” ಪೇಚಾಡ್ತಾನೆ ಇದ್ಲು. ದ್ಯಾವಜಿಗೆ ರೇಗು. “ಯೋಳಕ್ಕೆ ಈಟು ಕಷ್ಟ ಆದ್ರೆ, ಬಾಯಿ ಮುಚ್ಚಂಡು ಗಮ್ಮನೆ ಕುಕ್ಕರುಸು” ಅಂತ ತುಟಿ ಬಿರುವಿದ್ದು, ಆಗಲಾರು ಕುಂಡಿಮಾದಿ ಬಾಯಿ ಮುಚ್ಚಕಳನಿಲ್ಲ. ಮುನಾ ಉಸುರೇಳಿತ, “ಒಂದು ಚೆಂದುಳ್ಳಿ ಪದಾರ್ತ ನಮ್ಮತ್ರ ಇದ್ರೆ, ಯೇನಾಯ್ತದೆ ನೀವೆ ಯೋಳಿ?” ಕ್ಯಾಳಿಬುಟ್ಟು. ಕಲ್ಯಾಣಿಗೆ ತಡೀನಿಲ್ಲ. “ಇದ್ಯಾಕಮ್ಮಿ ಮಾತ್ನಲ್ಲ ಇಂಗೆ ಒಂಟು ಮಾಡ್ತೀಯೆ?” ಅಂದ್ಲು. ದ್ಯಾವಾಜಿ ಫೈಡ್ ಅನ್ನೋ ಅಂಗೆ ಸಿಡಿದ್ದು: “ಒಂದು, ಒಂದು ಒಂಟು! ಯಾಕೆ ಇಂಗೆ ಮಾತ್ತೆಲ್ಲ ಒಂಟು ಮಾಡಿ ಮಾತಾಡೀ- ಒಂಟೊಂಟು ವಡೇರ ಗಂಟು ನಿಮ್ಮಪ್ಪನ ಕೊರಳೆಲ್ಲ ಸರಗಂಟು, ಅಂತಾವ?” ಈಗಲೀಗ ಕುಂಡಿಮಾದಿ ಇಸ್ಯಕ್ಕೆ ಬಂದ್ಲು. “ಹಯ್ಯೋ, ಯಾಕ್ರವ್ವ ಇಂಗೆ ಕ್ವಾಪಸ್ಕಂಡೀರಿ-ಬುಡಸೇ ಯೋನಿ ಕ್ಯಾಳಕನ್ನಿ...ನಮ್ಮಣ್ಣು ಸಾವಂತ್ರಿ ಇಲ್ವ?-ಅವಳಿನ್ನೂ ರುತುಮತ್ತೆ ಅಗ್ನಿಲ್ಲ ಅನ್ನಾದು ನಿಮಗೆಲ್ಲಾರೂ ಗೃ ಅದಲ್ಲ... ಆ ಕೆಂಗಣ್ಣಪ್ಪಾರೆ ಹೊಗೆಸೊಪ್ಪ ಚಪ್ಪರದ ಗಳುಗಟ್ಟೆ ಹೊಗೆಸೊಪ್ಪ ಮಾಲೆಗಳ ನ್ಯಾತಾಕಿ ಇನ್ನೇನು ಮುಗುದಿತ್ತಂತೆ. ಯೆಲ್ಲೊ ವಸಿ ಮಾಲೆ ಉಳುಕಂಡಿದ್ವಂತೆ. 'ಇವ ನಾನು ಈವೆಣ್ಣು ಏಡಾಳೂವೇ ಆಕತ್ತೀವಿ. ನೀವೆಲ್ಲಾರೂ ವೊಗರಮ್ಮಿ ಅಂತ ಕಳಸುಬುಟ್ಟು-ಊರ ಆಚೆಗಿರೊವುರ ಇತ್ತಲಲ್ಲಿ, ಒಂಟಿ ಸಿಕ್ಕಾಕಂಡ ನಮ್ಮಣ್ಣಿನ ಮ್ಯಾಲೆ ಬಿಡ್ಕಂಡು ಹೊಸಕಾಡಿದ್ರಂತೆ... ಇಂಗೂ