ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೦ ವೈಶಾಖ ಬುಡದಲ್ಲೆ ನೆಕ್ಕುತಾ ಕುಂತಿದ್ದದ್ದು ಅದ್ಯಾವ ಮಾಯದಲ್ಲಿ ಅತ್ತಾಗಿ ಹಾರು”? ಗಕ್ಕನೆ ಎದ್ದು ನಿಂತ. ಸಾದಾರಣವಾಗಿ ಬೊಡ್ಡ ಬೊಗುಳೋದೆ ಒಂದು ರೀತ. ಅದಕೆ ಬೆದೆ ಬಂದು ಎಣ್ಣುನಾಯಿ ಕಂಡಾಗ ಬೊಗುಳೋದೆ ಬ್ಯಾರೆ ತರ. ಇನ್ನೊಂದು ನಾಯಿ ಕುಟ್ಟೆ ಕದ್ರಕ್ಕೆ ನಿಂತಾಗ ಗುರುಕಾಯಿಸ್ತಾ ಮಾಡೋ ಸದ್ದೇ ಬ್ಯಾರೆ. ವೊಟ್ಟೆ ಅಸಿದು, ಇಟ್ಟು ರೊಟ್ಟಿ ಬಾಡು ಬೇಕು ಅನ್ನುಸಿದಾಗ ಸುತ್ತ ತಿರುಗ ಬೇಡೆ ಮಕ್ಕಳಂಗೆ ಹೊಂದಿಸೊ ರಾಗಾನೆ ಬ್ಯಾರೆ. ಟ್ವಾಳನ್ನೂ ಕಿರುಬನ್ನೋ ಕಮಡು ನಡುಕ್ತ ಅರಚಿಕಳ ಸೊಲ್ಲೇ ಬ್ಯಾರೆ... ಕಿವಿಕ್ವಟ್ಟು ಆಲಿಸ್ತ. ಇಲ್ಲ, ಇದರಾಗೆ ಸಂಸಯ ಇಂಕರಾನು ಇಲ್ಲ. ಇದು ಯಾನೊ ಕಂಡು ಹೆದುರದೆ, ನೋಡವ-ಅಂತ ಕೆರೆ ಓಣಿ ತಿರುವಿಗೋದ. ಅಲ್ಲಿ ಅಮ್ಮ ಕಣ್ಣಿಗೆ ಬಿದ್ದ ಸ್ವಾಟ, ಅವ್ರ ಎದೆಯ ನಡುಗುಸ್ತು, ತಟಕ್ಕೆ ನಾಕೆಜ್ಜೆ ಇಮ್ಮೆಟ್ಟಿ ನಿಂತ. ಅಲ್ಲಿ ಒಂದು ಕೀರನ್ನೂ ಒಂದು ನಾಗರಹಾವಿಗೂವೆ ವೋರಾಟ ನಡೀತಿತ್ತು... ಇಂತದೊಂದು ನಡೀತದೆ, ಇವು ಏಡು ಪ್ರಾಣಿಗಳೂ ಹುಟ್ಟಾ ವೈರ ಅನ್ನಾದನೇನೊ ಇನ್ನೂ ಕೇಳಿದ್ದ ಮಾತ್ರ ಇಲ್ಲೀಗಂಟ, ಇನ್ನ ಜೀವಮಾನ್ನಲ್ಲಿ ಕಣ್ಣಾರ ಕಂಡೀರನಿಲ್ಲ.... ವೋಟಗಲ ಹೆಡೆ ಬಿಚ್ಚಿ ಕಡು ರೋಸದಿಂದ ಮೊರೆದಾತ್ತ ನಾಗರಹಾವು ರೊತ್ ರೊನ್ನೆ ಹೆಡೆ ಅಪ್ಪುಳಸಿ ಕೀರನ್ನ ಕಚ್ಚಕ್ಕೆ ಪರ್ಯತ್ನ ಮಾಡ್ತಿತ್ತು, ಕೀರ ಕುಣುಕುಣಕಂಡ ಅತ್ತಿಂದಿತ್ತಾಗಿ ಕುಪ್ಪುಳುಕ್ತ ತಪ್ಪಿಸಕತ್ತಿತ್ತು. ಆರಂಬದಲ್ಲಿ ನಾಗರಹಾವಿನ ಅಬ್ಬರವೆ ಜೋರಲ್ಲಿ ನಡುದಿತ್ತು, ಅದ್ರೆ ವಸಿ ದಣಿವು ಕಾಣಿಸಂಗೆ ಆಯಿತ್ತೂವೆ, ಕೀರ ಮ್ಯಾಲೆ ಬಿದ್ದು ಹಾವಿನ ಕುತ್ತಿಗೆ ಕಚ್ಚಿತು. ಆದರೆ ಹಾವು ಸರಕ್ಕೆ ತೆಷ್ಟು ಸಿಕಂಡು ಕೀರನ ಬೆನ್ನಿಗೆ ಬಲವಾಗಿ ಬಡುದು ಕಚ್ಚಿಬುಡ್ತು. ಆ ಗಳಗ್ನಿಂದ ಅವೇಡೂವೆ ಅತಿಸಯ ಪರಕ್ರಮದಿಂದ ಹೋರಟ ನಡುಸ್ಕೊ. ಒಂದನ್ನೊಂದು ಕಚ್ಚಿ ಕಡುದು ಬಿಸಾಕ್ತಿದ್ರೋ... ಕಡೀಕೆ ಹಾವು ಕೀರನ ಮುಖ್ಯ ಸುತ್ತಲೂವೆ ಉಡಕಂಡು ಕಚ್ಚಿಕಚ್ಚಿ ಇಡ್ತಾ ಇದ್ದಾಗ, ಹೊಂಚುಗಾರ ಕೀರ ಸಮಯ ಕಾದು ಹಾವಿನ ಬಾಯ್ ಗಪ್ಪನೆ ಹಿಡುದು, ಕಚ್ಚಿ ಕಡಿದಾಕಿಬುಡು... ಕೀರನ ಮಯ್ಯ ಸುತ್ತಾಕಿದ್ದ ಸರ್ಪದ ಹಿಡುತ ಮೆತ್ತಮೆತ್ತಗೆ ಬುಟ್ಟೋಯ್ತ ಇದ್ದು, ಆಮ್ಯಾಕೆ ಕೀರ ಒಂದು ಸಲ ತನ್ನ ಮಯ್ಯ ವದು ಕುಣಿದಾಡಿದಾಗ, ಹಾವು ಸತ್ತು ಕೆಳುಕ್ಕೆ ಬಿತ್ತು...