ಪುಟ:ವೈಶಾಖ.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೪ ವೈಶಾಖ ಲೋಟಿಗಳದಲ್ಲಿ ಅತ್ತಾರು ಗರಿಗಳ ಕಿತ್ತಿದ್ದ. ಅವಲ್ಲಿ ಮೂರು ಗರಿಗಳು ಮತ್ರ ಬಲಿತಿದ್ದೂ, ಉಳಿಕೆಯೋವೆಲ್ಲ ಎಳುಸು ಅಂತಾ ಎಳುಸಿನ ಗರಿಗಳ ಕುಯ್ದ ಅವ್ವ ಚೀಮಾರಿ ಆಕಿದ್ದು. ಆದ್ರೆ ಬೈದಲಲ್ಲಾಂತ ಲಕ್ಕ ಊರಗಿದ್ದು ಒಂದೇ ಗಳಿಗೆ, ಆ ಗಳಿಗೆ ಮುಗೀತು. ಲಕ್ಕನ ಕುಸಿ ಮುಗುಲ್ನ ಮುಟ್ಟಿತ್ತು. ಎಲ್ಲಾರು ಜ್ವರೆಗಳ ಕಟ್ಟಿ ಮುಗುದು, ಉಣ್ಣಕ್ಕೆ ಕುಂತಾಗ, ಲಕ್ಕನ ಮೊಖ ಜೋಲು ಬಿದ್ದಿತ್ತು. ಅನೂಕೂಲವಾಗಿದ್ದೊರು ರಾಗಿ ರೊಟ್ಟಿ, ನಂಜಕ್ಕೆ ಹುಳ್ಳಿ ಜಿಯಕ ತಂದಿದ್ರೆ, ಅವ್ವ ನೆಂಜಕ್ಕೆ ಬರೀ ಹಸಿಮೆಣಸಿನಕಾಯಿ ತರಾದ?... ಅವ್ವ ಒಂದು ದಪ ಉಸಾರುದಪ್ಪಿದಾಗ, ಅಯ್ಯನ ಜ್ವತೇಲೂವೆ ಲಕ್ಕ ವೋಗಿದ್ದುಂಟು. ಆಗ ಅಯ್ಯ ಕರಕಂಡೊದ್ದು ದರಮನಳ್ಳಿ ಈಚಲುವನಕೇಯ... ಈಚಲು ಗರಿಗಳೂ ಕಡಿದಾಯ್ತು, ಜ್ವರೇನೂ ಕಟ್ಟಾಯ್ತು. ಬುನು ಉಂಡಾಯ್ತು. ವಂದಿಗುಟ್ಟೆ ಬಂದಿದ್ದ ಮಂದಿ ತಂತಮ್ಯಹರೆ ವೊತ್ತು ಊರುದಿಕ್ಕೆ ಕಾಲಾಕಿದ್ದೂ ಆಯ್ತು. ಗ್ರಾಸ್ತ ನಮ್ಮಯ್ಯ, ಉಳಿದೋರಂಗೆ ಜ್ವತ್ಥ ವೋಂಡಬಾರದ?- ಉಷ್ಣು. ಅಮ್ಮು ಕಾಲೆಳೆದದ್ದು ರಾಚನ ಎಂಡದಂಗಡಿಗೇಯ.... ಲಕ್ಕ ರಾಚನ ಸೇಂದಿ ಅಂಗಡಿಗೆ ಕಾಲಿಟ್ಟದ್ದು ಅದೇ ಪ್ರತುಮ. ವಲ್ಲೆ ವಲ್ಲೇಂತ ಏಟೇ ಆಟ ಮಾಡಿದ್ರೂ ಅಯ್ಯ ಬುಡಬೇಕಲ್ಲ!... ಅಂಗಡಿ ಅಂದರೆ ಸುತ್ತಾಲು ಮಣ್ಣಿನ ಗ್ವಾಡ. ಅದುಕ್ಕೆ ಸುಣ್ಣ ತುಂಬದೆ. ಯಾವ ದ್ವಾಪುರದಾಗೆ ತುಂಬುದೊ ಆ ಸುಣ್ಣ!- ಈಗ ಬಿಳುಪು ಕಳದೋಗಿ ಯಾತಾವು ಮಾಸ್ತು ಮಾಸ್ತು, ಆ ಅಂಗಡಿ ಮ್ಯಾಗಡೆ ಕವುಚಿರಾದು ನಾಡೆಂಚು, ವಳೀಕೋದರೆ, ಇದೆ ಗ್ವಾಡೆ ವತ್ತಿಗೆ ಎತ್ತಿರಿಸಿದ ಗದ್ದುಗೆ. ಗದ್ದುಗೆ ಸುತ್ತಾಲೂ ತುಂಡುಗ್ವಾಡೆ. ಆ ಗದ್ದುಗೆ ಮ್ಯಾಲೆ ನಟಕದ ದರ್ಬಾರ್ ಸೀನಿನಲ್ಲಿ ರಾಜನಂಗೆ ಸೋಕ್ಕಾಗಿ ಕುಂತಿರೋನೆ ಆ ಅಂಗಡಿ ಮಾಲೀಕ ರಾಚ!... ಅವನ ಹೃದೆ ಗಿರಲು ಮೀಸೆ, ಗುಡ್ಡಗಣ್ಣು, ಗುಜ್ಜಾನೆ ಮರಿಯಂಗಿರೊ ದೇಹ, ಇವ ಕಂಡು ಎಂತೋರ ಎದೆಯೂ ನಡುಗಬೇಕು.... ಅವುನ ಮುಂದೆ ಏಡು ಮರದ ತೊಟ್ಟಿ, ಮುವ್ವತ್ತು ನಲವತ್ತು ಸುರಬಿ ಎಂಡ ಇಡಿಸೊವು. ಈಚಲು ಮರದಿಂದ ಎಂಡ ಎಳುಸೋರೆ ಒಂದೊಂದು ಸುದ್ದಿ ಎಂಡ ಕ್ವಡ್ತಾನಂತೆ ರಾಚ. ಎಂಡಾವ ವೊತ್ತು ತರಾರ್ ಬ್ಯಾರೆ. ಅಲ್ಲ ತಂದು ಮರದ ತೊಟ್ಟಿಗಳೆ ತುಂಬುದ ಮ್ಯಾಲೇ ರಾಚ ಬಂದು ಗಲ್ಲ ಏರಿ ಕುಂತುಗಳಾದು!... ಅವುನ ಪಕ್ಕದಾಗೆ ವೋಟು ದೂರಕೆ ಕುಂತು ಚೋರ್ ಚೋರ್ ಅಂತ ಹುರಿ ಬಾಡು, ಚಾಪೀಸುಗಳ ದಾದೆಣೇಲಿ ಕರೀತ ಕುಂತಿರೋಳು ಗಂಡ ಬುಟ್ಟ ಅವುನ ಅಕ್ಕನಂತೆ.... ಬೋದೆ ಮಯ್ಯನ ಎಂಗಸು.